ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Power Star Fashion: ಹೀಗಿತ್ತು ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟೈಲಿಂಗ್!

Power Star Fashion: ನಮ್ಮ ನಿಮ್ಮೆಲ್ಲರ ನೆನಪಿನಾಳದಲ್ಲಿ ಉಳಿದಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಒಂದೊಂದು ಸಿನಿಮಾ ಲುಕ್ & ಸ್ಟೈಲಿಂಗ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿತ್ತು, ಮಾದರಿಯಾಗಿತ್ತು. ಸಾಕಷ್ಟು ಬಾರಿ ಟ್ರೆಂಡ್ ಕೂಡ ಸೆಟ್ ಮಾಡಿತ್ತು. ಅವರ ಹುಟ್ಟಿದ ದಿನದ ಹಿನ್ನೆಲೆಯಲ್ಲಿ ಅಪ್ಪು ಅವರ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ಸ್ ಕುರಿತ ಹಳೆಯ ಸಂದರ್ಶನದ ಸಾರಾಂಶವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಅವರಿಗೆ ವಿಶ್ವವಾಣಿ ನ್ಯೂಸ್‌ನ ಫ್ಯಾಷನ್ ಲೋಕ ನಮನ ಸಲ್ಲಿಸಿದೆ.

ಹೀಗಿತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟೈಲಿಂಗ್!

ಚಿತ್ರಕೃಪೆ: ಪುನೀತ್ ರಾಜ್‌ಕುಮಾರ್ ಫೇಸ್‌ಬುಕ್ ಪೇಜ್

(ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನಾಲ್ಕೈದು ಬಾರಿ ಭೇಟಿ ಮಾಡಿ, ಸಂದರ್ಶಿಸಿದ್ದ, ಫ್ಯಾಷನ್ ಪತ್ರಕರ್ತೆ /ಲೇಖಕಿ ಶೀಲಾ ಸಿ. ಶೆಟ್ಟಿಯವರ ಫ್ಯಾಷನ್ ಸಂದರ್ಶನಗಳ ಸಂಕ್ಷಿಪ್ತ ಸಾರಂಶವಿದು)

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಮ್ಮ ನಿಮ್ಮೆಲ್ಲರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಇಂದು ಎಲ್ಲರ ಮನಸ್ಸಿನಲ್ಲಿ ಅಜರಾಮರರಾಗಿದ್ದರೂ ಅವರ ಸಿಂಪಲ್ ಜೀವನ ಶೈಲಿ, ಫ್ಯಾಷನ್ –ಫಿಟ್ನೆಸ್ (Power Star Fashion) ಕುರಿತಂತ ವಿಷಯಗಳು ಮಾತ್ರ ಇಂದಿಗೂ ಅವರ ಅಭಿಮಾನಿಗಳಿಗೆ ಮಾದರಿಯಾಗಿದೆ. ಹೌದು, ಅಂದು ಸಿನಿಮಾದಲ್ಲಿ ಮಾತ್ರವಲ್ಲ, ಪ್ರತಿ ದಿನದ ರುಟೀನ್‌ನಲ್ಲಿ ಅವರು ಧರಿಸುತ್ತಿದ್ದ, ಒಂದೊಂದು ಔಟ್‌ಫಿಟ್‌ಗಳು ಯುವಕರನ್ನು ಸವಾರಿ ಮಾಡುತ್ತಿದ್ದವು. ಅಲ್ಲದೇ, ಸಾಕಷ್ಟು ಬಾರಿ ಟ್ರೆಂಡ್ ಸೆಟ್ ಕೂಡ ಮಾಡಿದ್ದವು. ಅವರ ಪ್ರತಿಯೊಂದು ಸಿಂಪಲ್ ಔಟ್‌ಫಿಟ್ಸ್ ಹಾಗೂ ಸ್ಟೈಲಿಂಗ್ ಸೆನ್ಸ್ ಎಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಸೆಳೆದಿದ್ದವೆಂದರೆ, ಈ ಬಗ್ಗೆ ಖುದ್ದು ಅವರೇ ನೀಡಿದ ಫ್ಯಾಷನ್ ಸಂದರ್ಶನಗಳಲ್ಲಿ ಉದಾಹರಣೆಗಳೊಂದಿಗೆ ಹೇಳಿಕೊಂಡಿದ್ದರು.

1

ಠಪೋರಿ ಲುಕ್ ಟು ಡಿಸೆಂಟ್ ಲುಕ್ ಇಷ್ಟಪಡುತ್ತಿದ್ದ ಅಭಿಮಾನಿ ವರ್ಗ

ಕೆಲವು ಅಭಿಮಾನಿಗಳಂತೂ ಅಪ್ಪು ಸರ್., ನಿಮ್ಮ ಶರ್ಟ್ ನಮಗಿಷ್ಟ! ಯಾವ ಬ್ರ್ಯಾಂಡ್ ಎಂದೆಲ್ಲಾ ಕೇಳುತ್ತಿದ್ದರಂತೆ. ಇದಕ್ಕೋಸ್ಕರ ಒಮ್ಮೆ ಲೋಕಲ್ ಜನರನ್ನು ತಲುಪುವಂತಹ ಕ್ಯೂ ಬ್ರ್ಯಾಂಡ್‌ವೊಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರಂತೆ. ಇನ್ನು, ಹಳ್ಳಿಗಾಡಿಗೆ ಹೋದಾಗ, ಒಂದಿಷ್ಟು ಅಭಿಮಾನಿಗಳು, ಅಪ್ಪು ಸರ್, ನಮಗೆ ನಿಮ್ಮ ಠಪೋರಿ ಲುಕ್ ಇಷ್ಟ! ಎನ್ನುತ್ತಿದ್ದರಂತೆ. ಅಷ್ಟು ಮಾತ್ರವಲ್ಲ, ಅದೇ ರೀತಿ ಫಂಕಿ ಡ್ರೆಸ್‌ನಲ್ಲಿ ಬಂದು ಜಾಕಿ ಸಿನಿಮಾದ ಡೈಲಾಗ್ ಹೇಳಿ ಹೋಗುತ್ತಿದ್ದರಂತೆ. ಮತ್ತೆ ಕೆಲವರು, ಡಿಸೆಂಟ್ ಲುಕ್‌ಗೆ ಫಿಧಾ ಆಗಿದ್ದರಂತೆ. “ಇವೆಲ್ಲಾ, ನನಗೆ ನನ್ನ ಅಭಿಮಾನಿಗಳು ಪ್ರೀತಿಯಿಂದ ನೀಡುವ ಬೆಸ್ಟ್ ಕಾಂಪ್ಲಿಮೆಂಟ್ಸ್ ಆಗಿತ್ತು! “ ಎಂದು ಫ್ಯಾಷನ್ ಸಂದರ್ಶನವೊಂದರಲ್ಲಿ ಅಪ್ಪು ಖುಷಿಯಿಂದ ಹಂಚಿಕೊಂಡಿದ್ದರು.

2

ಈ ಸುದ್ದಿಯನ್ನೂ ಓದಿ | Puneeth Rajkumar: ಪುನೀತ್ ರಾಜ್‌ಕುಮಾರ್ ಅವರನ್ನು 'ಕರ್ನಾಟಕದ ಪವರ್ ಸ್ಟಾರ್' ಎಂದು ಏಕೆ ಕರೆಯುತ್ತಾರೆ ಗೊತ್ತಾ?

ನೆನಪಾಗುವ ಪುನೀತ್ ಫ್ಯಾಷನ್ ಸ್ಟೇಟ್‌ಮೆಂಟ್ಸ್

ಕಂಫರ್ಟಬಲ್ ಕ್ಯಾಶುವಲ್‌ವೇರ್ಸ್‌ಗೆ ನನ್ನ ಆದ್ಯತೆ. ಬೇಸಿಗೆ ಮಾತ್ರವಲ್ಲ, ಆದಷ್ಟೂ ಎಲ್ಲಾ ಸೀಸನ್‌ನಲ್ಲೂ ನನ್ನದು ಇದೇ ರೂಲ್ಸ್. ಗ್ರೇ, ಬ್ಲ್ಯೂ ಹಾಗೂ ಬ್ಲ್ಯಾಕ್ ನನಗಿಷ್ಟವಾದ ಕಲರ್ಸ್. ಇನ್ನು, ಸಿನಿಮಾ ಕ್ಯಾರೆಕ್ಟರ್‌ಗೆ ಅನುಗುಣವಾಗಿ ಕಾಣಿಸಿಕೊಳ್ಳುವುದನ್ನು ಹೊರತುಪಡಿಸಿದರೆ, ನನ್ನದು ಸದಾ ಸಿಂಪಲ್ ಫ್ಯಾಷನ್ ಸ್ಟೇಟ್‌ಮೆಂಟ್! ಎಂದು ಹೇಳಿದ್ದರು ಪುನೀತ್ ರಾಜ್‌ಕುಮಾರ್.

ಅಪ್ಪು ಅಭಿಮಾನಿಗಳಿಗೆ ನೀಡಿದ್ದ ಟಿಪ್ಸ್ ಏನಿತ್ತು?

  • ಧರಿಸುವ ಔಟ್‌ಫಿಟ್ಸ್ ಸಿಂಪಲ್ಲಾಗಿರಲಿ.
  • ನಿಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್ ಆಗಲಿ.
  • ಫ್ಯಾಷನ್ ಎಂಬುದು ಹಣ ಪೋಲು ಮಾಡುವಂತದ್ದಾಗದಿರಲಿ.
  • ಅನುಕರಿಸುವ ಬದಲು ನಿಮ್ಮನ್ನು ಅಂದಗಾಣಿಸುವ ಸ್ಟೈಲಿಂಗ್ ನಿಮ್ಮದಾಗಲಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)