ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season Shopping: ಯುಗಾದಿ ಹಬ್ಬದ ವೀಕೆಂಡ್‌ ಶಾಪಿಂಗ್‌ಗೆ ಇಲ್ಲಿದೆ 5 ಸಿಂಪಲ್‌ ಐಡಿಯಾ

Festive Season Shopping: ಎಲ್ಲೆಡೆ ಯುಗಾದಿ ಹಬ್ಬದ ಶಾಪಿಂಗ್‌ ಹವಾ ಶುರುವಾಗಿದೆ. ಇನ್ನು, ವೀಕೆಂಡ್‌ನಲ್ಲಂತೂ ಶಾಪಿಂಗ್‌ ಮಾಡುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ವಾರದ ಕೊನೆಯ ದಿನಗಳಲ್ಲೂ ನಿರಾತಂಕವಾಗಿ ಶಾಪಿಂಗ್‌ ಮಾಡುವುದು ಹೇಗೆ? ಎಂಬುದಕ್ಕೆ ಶಾಪಿಂಗ್‌ ಎಕ್ಸ್‌ಪರ್ಟ್ಸ್ ಒಂದಿಷ್ಟು ಸಿಂಪಲ್‌ ಐಡಿಯಾ ನೀಡಿದ್ದಾರೆ.‌ ಫಾಲೋ ಮಾಡಲು ಟ್ರೈ ಮಾಡಿ.

ಯುಗಾದಿ ಹಬ್ಬದ ವೀಕೆಂಡ್‌ ಶಾಪಿಂಗ್‌ಗೆ ಇಲ್ಲಿದೆ 5 ಸಿಂಪಲ್‌ ಐಡಿಯಾ

ಚಿತ್ರಗಳು: ಮಿಂಚು

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ (Ugadi) ಶಾಪಿಂಗ್‌ ಹವಾ ಎಲ್ಲೆಡೆ ಆರಂಭವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್‌, ಕಿಚನ್‌ ಐಟಂಗಳು, ಹೋಮ್‌ ಡೆಕೋರ್‌ ಸಾಮಗ್ರಿಗಳು, ಫ್ಯಾಷನ್‌ವೇರ್‌ಗಳು (Fashionwears), ಜ್ಯುವೆಲರಿಗಳು ಲಗ್ಗೆ ಇಟ್ಟಿವೆ. ಇದಕ್ಕೆ ಪೂರಕ ಎಂಬಂತೆ, ವೀಕೆಂಡ್‌ನಲ್ಲಿ ಶಾಪಿಂಗ್‌ (Festive Season Shopping) ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಖರೀದಿಗೆ ಹೋಗುವವರು ಹೋಗುವ ಮುನ್ನವೇ ಖರೀದಿಸುವ ವಸ್ತುಗಳ ಮೇಲಿನ ರಿಯಾಯಿತಿ, ವಿನಾಯಿತಿ ಹಾಗೂ ಆಫರ್ಸ್‌ ಬಗ್ಗೆ ತಿಳಿದುಕೊಂಡಲ್ಲಿ ಬಿಲ್ಲಿಂಗ್‌ ಸಮಯದಲ್ಲಿ ಸಹಕಾರಿಯಾಗಬಹುದು ಎನ್ನುವ ಶಾಪಿಂಗ್‌ ಎಕ್ಸ್‌ಪರ್ಟ್ಸ್ (Shopping Experts),‌ ಶಾಪಿಂಗ್‌ ಪ್ರಿಯರಿಗೆ ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

2

ಯುಗಾದಿ ಡಿಸ್ಕೌಂಟ್ಸ್‌ ಬಳಸಿಕೊಳ್ಳಿ

ಹಬ್ಬದ ಸಂದರ್ಭದಲ್ಲಿ ಕೆಲವು ಪ್ರಾಡಕ್ಟ್‌ಗಳ ಮೇಲೆ ಡಿಸ್ಕೌಂಟ್ಸ್‌ ಹಾಗೂ ಆಫರ್ಸ್‌ ಕೂಡ ಇರುತ್ತದೆ. ಇವನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ಖರೀದಿಸುವ ದರದಲ್ಲಿ ಕಡಿತ ಪಡೆಯಬಹುದು ಎನ್ನುತ್ತಾರೆ ಶಾಪಿಂಗ್‌ ಸೆಂಟರ್‌ವೊಂದರ ಮಾರಾಟಗಾರರು. ನ್ಯೂ ಅರೈವಲ್ಸ್‌ ಹೆಸರಲ್ಲಿ ಕೆಲವು ಪ್ರಾಡಕ್ಟ್‌ಗಳ ಮೇಲೆ ಯಾವುದೇ ಡಿಸ್ಕೌಂಟ್ಸ್‌ ಹಾಗೂ ರಿಯಾಯಿತಿ, ವಿನಾಯಿತಿ ಇರುವುದಿಲ್ಲ. ಹಾಗಾಗಿ ಮೊದಲೇ ಇವನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

3

ಎಥ್ನಿಕ್‌ ಲುಕ್‌ ನೀಡುವ ಗೃಹಾಲಂಕಾರದ ವಸ್ತುಗಳಿಗೆ ಸೈ ಎನ್ನಿ

ಯುಗಾದಿ ಎಂದಾಕ್ಷಣಾ ಹೊಸ ವರ್ಷದ ಹರ್ಷ ತರುತ್ತದೆ. ಈ ಸೀಸನ್‌ಗೆ ಸೂಟ್‌ ಆಗುವಂತೆ ಹಾಗೂ ಮನೆಯ ಒಳಾಂಗಣವನ್ನು ಬದಲಿಸಲು ನಾನಾ ಬಗೆಯ ಹೋಮ್‌ ಡೆಕೋರ್‌ ಐಟಂಗಳು ಆಗಮಿಸಿವೆ. ಉದಾಹರಣೆಗೆ, ಬಾಗಿಲಿಗೆ ಹಾಕುವ ಕುಂದನ್‌ ಹಾಗೂ ಕ್ರಿಸ್ಟಲ್‌ ತೋರಣಗಳು, ಪರ್ಲ್‌ ಬಿಡ್ಸ್‌ನಲ್ಲಿ ಹಸಿರು ಎಲೆಗಳಿರುವ ಪರದೆಗಳು, ಮ್ಯಾಟ್‌ಗಳು, ಶೋ ಪೀಸ್‌ಗಳು ಬಂದಿವೆ. ಇವು ಯುಗಾದಿಯಂದು ಮನೆಯನ್ನು ಸಿಂಗರಿಸಬಲ್ಲವು ಎನ್ನುತ್ತಾರೆ ಒಳಾಂಗಣ ವಿನ್ಯಾಸಕಾರರು. ಫೆಸ್ಟಿವ್‌ ಸೀಸನ್‌ನಲ್ಲಿ ಎಥ್ನಿಕ್‌ ಲುಕ್‌ ಇರುವ ಹೋಮ್‌ ಡೆಕೋರ್‌ ಸಾಮಗ್ರಿಗಳನ್ನು ಕೊಳ್ಳುವ ಮೊದಲು ನಿಮ್ಮ ಮನೆಯ ಒಳಾಂಗಣಕ್ಕೆ ಸೂಟ್‌ ಆಗುತ್ತದೆಯೇ ಎಂಬುದನ್ನು ಯೋಚಿಸಿ, ಖರೀದಿಸಿ.

ಎಲೆಕ್ಟ್ರಾನಿಕ್ಸ್‌ ಉಪಕರಣಗಳು

ಪ್ರತಿ ಹಬ್ಬದ ಸಂದರ್ಭದಲ್ಲೂ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಗೆ ನಾನಾ ಬಗೆಯ ಆಫರ್‌ಗಳಿರುತ್ತವೆ. ಇದನ್ನು ಈ ಸಂದರ್ಭದಲ್ಲಿ ಸದುಪಯೋಗಪಡಿಸಿಕೊಳ್ಳಬಹುದು.

5

ಹಬ್ಬದ ಫ್ಯಾಷನ್‌ವೇರ್‌ ಖರೀದಿ

ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಷನ್‌ವೇರ್‌ಗಳು ಟ್ರೆಂಡ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ. ಈ ಹಬ್ಬದ ಸೀಸನ್‌ನಲ್ಲಿ ಇತರೆ ಪ್ರಾಡಕ್ಟ್‌ಗಳಿಗೆ ಹೋಲಿಸಿದಲ್ಲಿ ಅತಿ ಹೆಚ್ಚು ಬಿಕರಿಯಾಗುವುದೇ ಫ್ಯಾಷನ್‌ವೇರ್‌ಗಳು. ಈ ಸೀಸನ್‌ನಲ್ಲಿ ಎಥ್ನಿಕ್‌ ಡಿಸೈನರ್‌ವೇರ್ಸ್‌ಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ಮಾಲ್‌ಗಳಲ್ಲಿ‌ ಮಾತ್ರವಲ್ಲ, ಚಿಕ್ಕ ಪುಟ್ಟ ಶಾಪಿಂಗ್‌ ಸೆಂಟರ್‌ಗಳಲ್ಲೂ ಶಾಪಿಂಗ್‌ ಮಾಡುವವರ ಸಂಖ್ಯೆ ಹಬ್ಬ ಸಮೀಪಿಸುತ್ತಿದ್ದಂತೆ ಹೆಚ್ಚಾಗಿದೆ. ಟ್ರೆಂಡಿಯಾಗಿರುವ ವಸ್ತುಗಳ ಬಗ್ಗೆ ಮೊದಲೇ ಮಾಹಿತಿ ಇದ್ದಲ್ಲಿ ಶಾಪಿಂಗ್‌ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂಬುದು ಎಕ್ಸ್‌ಪರ್ಟ್ಸ್‌ ಅಭಿಪ್ರಾಯ.

ಈ ಸುದ್ದಿಯನ್ನೂ ಓದಿ | Star Fashion: ಕೊರಿಯನ್‌ ಫ್ಯಾಷನ್‌ವೇರ್‌ನಲ್ಲಿ ಕಿರುತೆರೆ ನಟಿ ಸುಕೃತಾ ನಾಗ್‌ ಕ್ಯೂಟ್‌ ಲುಕ್‌!

ಹೆಚ್ಚಾದ ಜ್ಯುವೆಲರಿ ಖರೀದಿ

ಯುಗಾದಿಗೂ ಜ್ಯುವೆಲರಿ ಖರೀದಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಈ ಸಮಯದಲ್ಲಿ ಸಾಕಷ್ಟು ಆಭರಣ ಅಂಗಡಿಗಳು ನಾನಾ ಸೇವಿಂಗ್ಸ್‌ ಸ್ಕೀಮ್‌ಗಳನ್ನು ಬಿಡುಗಡೆಗೊಳಿಸುತ್ತವೆ. ಇವುಗಳನ್ನು ತೆಗೆದುಕೊಳ್ಳಬಹುದು. ಅಲ್ಲದೇ, ಹಬ್ಬಕ್ಕೆ ಮೇಕಿಂಗ್‌ ಚಾರ್ಜ್‌, ವೇಸ್ಟೇಜ್‌ ಎಲ್ಲವಲ್ಲೂ ನಾನಾ ಕಡಿತ ನೀಡುತ್ತಾರೆ. ಇಂತಹ ಆಫರ್‌ಗಳನ್ನು ಬಳಸಿಕೊಳ್ಳಬಹುದು ಎನ್ನುತ್ತಾರೆ ಜ್ಯುವೆಲರಿ ಶಾಪ್‌ನ ಮಾಲೀಕರಾದ ರಜತ್‌.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)