Star Fashion: ಕೊರಿಯನ್ ಫ್ಯಾಷನ್‌ವೇರ್‌ನಲ್ಲಿ ಕಿರುತೆರೆ ನಟಿ ಸುಕೃತಾ ನಾಗ್ ಕ್ಯೂಟ್ ಲುಕ್!
Star Fashion: ಕಿರುತೆರೆ ನಟಿ ಸುಕೃತಾ ನಾಗ್, ಕೊರಿಯನ್ ಫ್ಯಾಷನ್‌ವೇರ್‌ನಲ್ಲಿ ಸಖತ್ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲಿಂಗ್‌ನ ಔಟ್‌ಫಿಟ್ ಸದ್ಯ ಟೀನೇಜ್ ಹುಡುಗಿಯರನ್ನು ಸೆಳೆದಿದೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿವರಿಸಿದ್ದಾರೆ.

ಚಿತ್ರಗಳು: ಸುಕೃತಾ ನಾಗ್, ಕಿರುತೆರೆ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆ ನಟಿ ಸುಕೃತಾ ನಾಗ್ ಧರಿಸಿದ್ದ ಕೊರಿಯನ್ ಶೈಲಿಯ ಫ್ಯಾಷನ್‌ವೇರ್ ಇದೀಗ ಟೀನೇಜ್ ಹುಡುಗಿಯರನ್ನು ಸೆಳೆದಿದೆ. ಕೆ ಡ್ರಾಮಾ ವೀಕ್ಷಿಸುವ ಹುಡುಗಿಯರ ಮನ ಗೆದ್ದಿದೆ. ಕೊರಿಯನ್ ಸ್ಟೈಲ್ ಇಷ್ಟಪಡುವ ಯುವತಿಯರನ್ನು ಆಕರ್ಷಿಸಿದೆ. ಅಂದಹಾಗೆ, ಈ ಔಟ್‌ಫಿಟ್ ಅನ್ನು ನಟಿ ಸುಕೃತಾ ನಾಗ್ ರಿಯಾಲಿಟಿ ಶೋವೊಂದಕ್ಕೆ ಧರಿಸಿದ್ದರು. ನಂತರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ತದನಂತರ ಈ ಔಟ್‌ಫಿಟ್ ಹುಡುಗಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಟೀನೇಜ್-ಕಾಲೇಜ್ ಹುಡುಗಿಯರು ಈ ಔಟ್‌ಫಿಟ್ ನೋಡಿ ಫಿದಾ ಕೂಡ ಆದರು. ಆ ಮಟ್ಟಿಗೆ ಈ ಉಡುಗೆ ಸದ್ಯ ಫ್ಯಾಷನ್‌ಲೋಕದಲ್ಲಿ ಅಲೆ ಎಬ್ಬಿಸಿದೆ ಎನ್ನುತ್ತಾರೆ ಡಿಸೈನರ್.
ಏನಿದು ಕೊರಿಯನ್ ಸ್ಟೈಲ್ ಡ್ರೆಸ್
ಇತ್ತೀಚೆಗೆ ಕೊರಿಯನ್ ಫ್ಯಾಷನ್ ಹಾಗೂ ಸ್ಟೈಲ್ ಹುಡುಗಿಯರನ್ನು ಯಾವ ಮಟ್ಟಿಗೆ ಸೆಳೆದಿದೆ ಎಂದರೆ, ನಮ್ಮಲ್ಲೂ ಕೂಡ ಕೊರಿಯನ್ ಬ್ಯೂಟಿ ಹಾಗೂ ಫ್ಯಾಷನ್ ಫಾಲೋ ಮಾಡತೊಡಗಿದ್ದಾರೆ. ಅದರಲ್ಲೂ ಈ ಜನರೇಷನ್‌ನ ಹುಡುಗಿಯರಂತೂ ಕೊರಿಯನ್ ಸ್ಟೈಲನ್ನು ಇಷ್ಟಪಟ್ಟು ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ, ಕೊರಿಯನ್ ಕೆ ಡ್ರಾಮಗಳು. ಅವುಗಳ ಪ್ರಭಾವದಿಂದಾಗಿ, ಆ ಸೀರಿಸ್‌ನಲ್ಲಿ ಧರಿಸುವ ಉಡುಪುಗಳು ಕೂಡ ಇದೀಗ ಜಾಗತೀಕ ಮಟ್ಟದಲ್ಲಿ ಜಾರಿ ಬರುತ್ತಿವೆ. ಮೊದಲೆಲ್ಲಾ ಲಂಡನ್, ಪ್ಯಾರೀಸ್ ಹಾಗೂ ಯೂರೋಪ್ ಶೈಲಿಯ ಫ್ಯಾಷನ್‌ವೇರ್‌ಗಳನ್ನು ಅನುಕರಿಸುತ್ತಿದ್ದ ಹುಡುಗಿಯರು ಇದೀಗ ಕೊರಿಯನ್ ಶೈಲಿಯವನ್ನು ಅನುಕರಿಸುತ್ತಿದ್ದಾರೆ. ಇದು ಹಿಟ್ ಕೂಡ ಆಗಿದೆ. ಕೊರಿಯನ್ ಶೈಲಿಯ ಉಡುಪುಗಳನ್ನು ಧರಿಸಿದಾಗ ಅವರಂತೆಯೇ ಮಾಡುವ ಸ್ಟೈಲಿಂಗ್ ಇದು ಎನ್ನಬಹುದು ಎನ್ನುತ್ತಾರೆ ಡಿಸೈನರ್ಸ್.

ಇದು ಲಕ್ಷ್ಮಿ ಕೃಷ್ಣ ಡಿಸೈನರ್‌ವೇರ್
ಅಂದಹಾಗೆ, ಈ ಡಿಸೈನರ್‌ವೇರನ್ನು ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಡಿಸೈನ್ ಮಾಡಿದ್ದಾರೆ. ಎಂದಿನಂತೆ ಅವರ ಕ್ರಿಯೆಟಿವಿಟಿ ಎದ್ದು ಕಾಣಿಸುತ್ತದೆ. ಇದು 2 ಪೀಸ್ ಡ್ರೆಸ್ ಆಗಿದ್ದು, ಟೈ ಬೋ ಶೈಲಿಯ ಡಿಸೈನ್ ಹೊಂದಿದೆ. ಶಿಫಾನ್ ಟಾಪ್ ಮೇಲೆ ಚೆಕ್ಸ್ ಶೈಲಿಯ ಸಾಫ್ಟ್ ಫ್ಯಾಬ್ರಿಕ್‌ನ ಟಾಪ್ ಲೇಯರ್ ಡಿಸೈನ್ ಮಾಡಲಾಗಿದ್ದು, ಶೀರ್ ಸ್ಲೀವ್ ಹೊಂದಿದೆ. ಈ ಔಟ್‌ಫಿಟ್‌ಗೆ ಹೊಂದುವ ಹೇರ್ ಆಕ್ಸೆಸರೀಸ್ ಕೂಡ ಮ್ಯಾಚ್ ಮಾಡಿರುವುದು ನೋಡಲು ಫ್ರೆಶ್ ಲುಕ್ ನೀಡಿದೆ. ಇದು ಈ ಉಡುಗೆಯ ವಿಶೇಷತೆ ಎನ್ನುತ್ತಾರೆ ಡಿಸೈನರ್ ಲಕ್ಷಿ ಕೃಷ್ಣ.

ಸುಕೃತಾ ನಾಗ್ ಸ್ಟೈಲಿಂಗ್
ಇನ್ನು, ಸುಕೃತಾ ವಾಗ್ಲೆ ಸೀರಿಯಲ್‌ಗಳಲ್ಲಿ ಮಾತ್ರವಲ್ಲ, ದಿನನಿತ್ಯದ ರುಟೀನ್‌ನಲ್ಲೂ ಕೊಂಚ ಫ್ಯಾಷೆನಬಲ್ ಆಗಿಯೇ ಕಾಣಿಸುತ್ತಾರೆ. ಅವರ ಪರ್ಸನಾಲಿಟಿಗೆ ಈ ಔಟ್‌ಫಿಟ್ ಕೂಡ ಹೊಂದಿಕೊಂಡಿದೆ ಎನ್ನುತ್ತಾರೆ ಲಕ್ಷ್ಮಿ ಕೃಷ್ಣ.
ಈ ಸುದ್ದಿಯನ್ನೂ ಓದಿ | Junk Jewel Fashion: ಸೀಸನ್ ಫಂಕಿ ಲುಕ್‌ಗೆ ಜಂಕ್ ಜ್ಯುವೆಲರಿ ಸಾಥ್
ಕೊರಿಯನ್ ಸ್ಟೈಲ್ ಡ್ರೆಸ್‌ನಲ್ಲಿ ಸುಕೃತಾರಂತೆ ಕಾಣಿಸಲು ಸಿಂಪಲ್ ಟಿಪ್ಸ್
- ನಿಮ್ಮ ಪರ್ಸನಾಲಿಟಿ ಮ್ಯಾಚ್ ಆಗಬೇಕು.
- ಸ್ಲಿಮ್ ಇರುವವರಿಗೆ ಇದು ಸಕತ್ ಆಗಿ ಕಾಣಿಸುತ್ತದೆ.
- ಕೊರಿಯನ್ ಡ್ರಾಮ ಇಷ್ಟಪಡುವವರು ಟ್ರೈ ಮಾಡಿ ನೋಡಬಹುದು.
- ಎಲಿಗೆಂಟ್ ಲುಕ್ ಫ್ರೆಶ್ ಲುಕ್ ನೀಡುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)