#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Floral Earrings Fashion 2025: ವಿಂಟರ್ ಸೀಸನ್‌ನಲ್ಲಿ ಹುಡುಗಿಯರ ಕಿವಿಯಲ್ಲಿ ಅರಳಿದ ಹೂಗಳು

ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ನಾನಾ ಬಗೆಯ ಹೂಗಳ ವಿನ್ಯಾಸದ ಫ್ಲೋರಲ್ ಇಯರಿಂಗ್ಸ್ ಹಂಗಾಮ ಎಬ್ಬಿಸಿವೆ. ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿವೆ. ಹಾಗಾದಲ್ಲಿ, ಏನಿದು ಫ್ಲೋರಲ್ ಇಯರಿಂಗ್ಸ್? ಇಲ್ಲಿದೆ ಡಿಟೇಲ್ಸ್.

Floral Earrings Fashion 2025: ವಿಂಟರ್ ಸೀಸನ್‌ನಲ್ಲಿ ಹುಡುಗಿಯರ ಕಿವಿಯಲ್ಲಿ ಅರಳಿದ ಹೂಗಳು

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ಫ್ಲೋರಲ್ ಇಯರಿಂಗ್‌ಗಳು (Floral Earrings Fashion 2025) ಹುಡುಗಿಯರ ಕಿವಿಗಳನ್ನು ಸಿಂಗರಿಸುತ್ತಿವೆ. ಹೌದು, ಕೆಂಪು, ಹಸಿರು, ನೀಲಿ, ಬಿಳಿ ಗುಲಾಬಿ, ಹಳದಿ ಶೇಡ್‌ಗಳ ಸೇವಂತಿಗೆ, ಮಲ್ಲಿಗೆ, ಚೆಂಡು ಹೂ, ನೇರಳೆ ಬಣ್ಣದ ಡೇಲಿಯಾ, ಅಂಥೇರಿಯಂ ಹೀಗೆ ನಾನಾ ಬಗೆಯ ಹೂಗಳ ಮಿನಿಯೇಚರ್ ಅಥವಾ ಡಿಸೈನ್ ಇರುವಂತಹ ಫ್ಲೋರಲ್ ಇಯರಿಂಗ್ಸ್ ಹಾಗೂ ಹ್ಯಾಂಗಿಂಗ್ಸ್ ಈ ಜನರೇಷನ್ ಹುಡುಗಿಯರ ಕಿವಿಯನ್ನು ಏರಿವೆ.

11

ಜ್ಯುವೆಲ್ ಡಿಸೈನರ್‌ಗಳು ಹೇಳುವುದೇನು?

ಜ್ಯುವೆಲ್ ಡಿಸೈನರ್ ರಾಕಿ ಪ್ರಕಾರ, ವಿಧ ವಿಧದ ಹೂಗಳ ಚಿತ್ತಾರವಿರುವ ಇಯರಿಂಗ್‌ಗಳು ಕಾಲೇಜು ಹುಡುಗಿಯರ ಆ್ಯಕ್ಸೆಸರೀಸ್ ಕಿಟ್‌ನಲ್ಲಿ ಸೇರಿವೆ. ಇನ್ನು, ಮಹಿಳೆಯರ ಲಿಸ್ಟ್‌ನಲ್ಲಿ, ಬಂಗಾರದಲ್ಲಿ ಮೂಡಿರುವ ಆ್ಯಂಟಿಕ್ ಡಿಸೈನ್‌ನವು ಹಾಗೂ ಪುಟ್ಟ ಹೂಗಳ ಸುಂದರ ಆಕಾರದ ಸ್ಟಡ್‌ಗಳು ಸೇರಿಕೊಂಡಿವೆ ಎನ್ನುತ್ತಾರೆ.

12

ಟ್ರೆಂಡಿಯಾಗಿರುವ ಫ್ಲೋರಲ್ ಇಯರಿಂಗ್ಸ್

ಗುಲಾಬಿ, ಸೇವಂತಿ, ಜಾಜಿ ವಿನ್ಯಾಸದ ಕಿವಿಯೋಲೆಗಳು ಈಗಾಗಲೇ ಇಯರಿಂಗ್ಸ್ ಲೋಕದಲ್ಲಿ ಹಿಟ್ ಆಗಿದ್ದು, ಸದಾ ಒಂದೇ ಬಗೆಯ ವಿನ್ಯಾಸಗಳಿಂದ ಬೋರ್ ಆಗಿದ್ದ, ಹುಡುಗಿಯರಿಗೆ ಇವು ಸೆಳೆದಿವೆ. ಇನ್ನು ಮಕ್ಕಳಿಗೆ ಹೂಗಳ ಸ್ಟಡ್‌ಗಳು ಕ್ಯೂಟ್ ಆಗಿ ಕಾಣಿಸುವುದರಿಂದ ಎಲ್ಲರಿಗೂ ಇವು ಪ್ರಿಯವಾಗಲು ಕಾರಣವಾಗಿದೆ ಎನ್ನುತ್ತಾರೆ.

13

ಟ್ರೆಂಡಿಯಾಗಿರುವ ಫ್ಲೋರಲ್ ಇಯರಿಂಗ್ಸ್

ಒಂದು ಕಾನ್ಸೆಪ್ಟ್‌ನಲ್ಲೇ ಬಗೆಬಗೆಯ ವಿನ್ಯಾಸಗಳು ಈ ಕೃತಕ ಆಭರಣಗಳಲ್ಲಿ ಮೂಡುತ್ತಿರುವುದು ಈ ಡಿಸೈನ್ಸ್ ಹೆಚ್ಚು ಪ್ರಚಲಿತದಲ್ಲಿರುವಂತೆ ಮಾಡಿದೆ. ಅಷ್ಟೇ ಯಾಕೆ? ರ‍್ಯಾಂಪ್ ಏರುವ ಮಾಡೆಲ್‌ಗಳೂ ಕೂಡ ಈ ಹಾಟ್ ಕ್ರೇಜ್‌ಗೆ ಮರುಳಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಹುತೇಕ ಫ್ಯಾಷನ್ ಶೋಗಳಲ್ಲೂ, ಈ ಫ್ಲೋರಲ್ ವಿನ್ಯಾಸಗಳ ಆಕ್ಸೆಸರೀಸ್ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಭುಜ ತಾಗುವ ಹ್ಯಾಂಗಿಗ್ಸ್, ಕಂಡು ಕಾಣದಂತಿರುವ ಮಿನಿ ಫ್ಲೋರಲ್ ಇಯರಿಂಗ್, ಕಿವಿಯಗಲದ ಫ್ಲೋರಲ್ ಹೂಪ್ ರಿಂಗ್, ಸ್ಟೋನ್ಸ್ ಫ್ಲೋರಲ್, ಕ್ರಿಸ್ಟಲ್ ಫ್ಲೋರಲ್ ಸ್ಟಡ್ಸ್ ಹೀಗೆ ನಾನಾ ಬಗೆಯವು ಟ್ರೆಂಡಿಯಾಗಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಕಿ.

ಈ ಸುದ್ದಿಯನ್ನೂ ಓದಿ | Winter Lipstick Awareness 2025: ಚಳಿಗಾಲದಲ್ಲಿ ನೀವು ಹಚ್ಚಬಾರದ ಲಿಪ್‌ಸ್ಟಿಕ್‌ಗಳಿವು!

ಹೂವಿನ ಕಿವಿಯೊಲೆ ಪ್ರಿಯರಿಗೆ ಟಿಪ್ಸ್

* ಸಾದಾ ಉಡುಪುಗಳಿಗೆ ಆಕರ್ಷಕವಾಗಿ ಕಾಣಿಸುತ್ತವೆ.

* ವೈಬ್ರೆಂಟ್ ಕಲರ್ಸ್‌ನ ಫ್ಲೋರಲ್ ಇಯರಿಂಗ್ಸ್ ಫಂಕಿ ಲುಕ್ ನೀಡುತ್ತವೆ.

* ಕ್ಯಾಶುವಲ್ಸ್ ಹಾಗೂ ಫಾರ್ಮಲ್ಸ್ ಎರಡಕ್ಕೂ ಸೂಟ್ ಆಗುತ್ತವೆ.

* ಕೂದಲ ವಿನ್ಯಾಸದ ನಂತರ ಇವನ್ನು ಧರಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)