Star Fashion 2025: ಕೇಪ್ ಲೆಹೆಂಗಾದಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡ ಆಲಿಯಾ ಭಟ್
ಬಾಲಿವುಡ್ ನಟಿ ಆಲಿಯಾ ಭಟ್ ಕೇಪ್ ಲೆಹೆಂಗಾದಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ತೀರಾ ಸಿಂಪಲ್ ಆಗಿರುವಂತಹ ಲೈಟ್ವೈಟ್ ಪಾಸ್ಟೆಲ್ ಶೇಡ್ನ ಕೇಪ್ ಲೆಹೆಂಗಾದಲ್ಲೂ ಅವರು ಹಾಟ್ ಲುಕ್ ನೀಡಲು ಟ್ರೈ ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಚಿತ್ರಗಳು: ಆಲಿಯಾ ಭಟ್, ಬಾಲಿವುಡ್ ನಟಿ., ಚಿತ್ರಕೃಪೆ: ವೈಷ್ಣವ್ ಫೋಟೋಗ್ರಾಫಿ -
ಆಲಿಯಾ ಭಟ್ ಗ್ಲಾಮರ್ ಮಿಂಚು
ಸಿಂಪಲ್ ಕೇಪ್ ಲೆಹೆಂಗಾದಲ್ಲೂ ಬಾಲಿವುಡ್ ನಟಿ ಆಲಿಯಾ ಭಟ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಆಲಿಯಾ ಲೆಹೆಂಗಾ ಬ್ಲೌಸ್ ಕ್ಲೀವೇಜ್
ಹೌದು, ತೀರಾ ಸಿಂಪಲ್ ಆಗಿರುವಂತಹ ಲೈಟ್ವೈಟ್ ಪಾಸ್ಟೆಲ್ ಶೇಡ್ನ ಕೇಪ್ ಲೆಹೆಂಗಾದಲ್ಲೂ ಅವರು ಹಾಟ್ ಲುಕ್ ನೀಡಲು ಟ್ರೈ ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಲೆಹೆಂಗಾದ ಸ್ಲಿವ್ಲೆಸ್ ಡೀಪ್ ನೆಕ್ಲೈನ್ ಇರುವ ಕ್ಲೀವೇಜ್ ಕಾಣಿಸುವಂತಹ ಬ್ಲೌಸ್ನಲ್ಲಿ ಗ್ಲಾಮರಸ್ ಪೋಸ್ ನೀಡಿದ್ದಾರೆ. ಪರಿಣಾಮ, ಅವರ ಲೆಹೆಂಗಾಗಿಂತ ಅವರ ಬಾಡಿ ಮಾಸ್ ಇಂಡೆಕ್ಸ್ ಹೈಲೈಟ್ ಆಗಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಆಲಿಯಾ ಧರಿಸಿದ ಪಾಸ್ಟೆಲ್ ಶೇಡ್ ಲೆಹೆಂಗಾ
ಅಂದಹಾಗೆ, ನಟಿ ಆಲಿಯಾ ಭಟ್ ಮಗುವಾದ ನಂತರ ವಿದೇಶಿ ಇವೆಂಟ್ಗಳನ್ನು ಹೊರತುಪಡಿಸಿದರೇ, ತೀರಾ ಕಡಿಮೆ ಸ್ಥಳೀಯ ಸಿನಿಮಾ ಇವೆಂಟ್ಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ಅವರು ಭಾಗವಹಿಸಿದ ಇವೆಂಟ್ವೊಂದರಲ್ಲಿ ತಿಳಿ ಶೇಡ್ ಅಂದರೇ ಪಾಸ್ಟೆಲ್ ಶೇಡ್ನ ಸಾದಾ ಸಿಂಪಲ್ ಅರ್ಗಾನ್ಜಾ ಲೆಹೆಂಗಾದಲ್ಲಿ ಕಾಣಿಸಿಕೊಂಡಿರುವುದು ಅಷ್ಟಾಗಿ ಹೈಲೈಟಾಗಿಲ್ಲ. ಅನಾಮಿಕಾ ಖನ್ನಾ ಡಿಸೈನರ್ವೇರ್ ಹಾಗೂ ರಿಯಾ ಕಪೂರ್ ಸ್ಟೈಲಿಂಗ್ ಇದಕ್ಕಿದ್ದರೂ ಕೂಡ ಆಲಿಯಾ ಲೆಹೆಂಗಾ ಟ್ರೆಂಡ್ ಲಿಸ್ಟ್ಗೆ ಸೇರದಿರುವುದು ವಿಪರ್ಯಾಸವೇ ಸರಿ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಕೇಪ್ ಸ್ಟೈಲ್ ದುಪಟ್ಟಾ
ಇನ್ನು, ಆಲಿಯಾ ಭಟ್ ಲೆಹೆಂಗಾಕ್ಕೆ ದುಪಟ್ಟಾ ಧರಿಸಿದ್ದಾರೆ ಎಂದುಕೊಂಡರೆ ಅದು ನಿಮ್ಮ ತಪ್ಪು. ಯಾಕೆಂದರೇ ಅದು ದುಪಟ್ಟಾ ಅಲ್ಲ, ಕೇಪ್! ನೋಡಲು ದುಪಟ್ಟಾದಂತೆಯೇ ಕಾಣಿಸುವ ಇದನ್ನು ಅವರು ಧರಿಸಿದ್ದಾರೆ ಎನ್ನುವುದಕ್ಕಿಂತ ಹೊದ್ದುಕೊಂಡಿದ್ದಾರೆ ಎಂಬಂತೆ ಕಾಣಿಸುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಮತ್ತೆ ಬಾಲಿವುಡ್ನಲ್ಲಿ ಬ್ಯುಸಿ
ಒಂದಷ್ಟು ದಿನಗಳ ಬ್ರೇಕ್ ನಂತರ ಅವರು ಇದೀಗ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದು, ʼಆಲ್ಫಾʼ, ʼಲವ್ & ವಾರ್ʼ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವು ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.