Hun Hairstyle 2025: ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ ಫಂಕಿ ಹನ್ ಹೇರ್ ಸ್ಟೈಲ್
ಜೆನ್ ಜಿ ಹುಡುಗಿಯರನ್ನು ಇದೀಗ ಮೆಸ್ಸಿ ಫಂಕಿ ಹನ್ ಹೇರ್‌ಸ್ಟೈಲ್ಸ್ ಸವಾರಿ ಮಾಡುತ್ತಿದೆ. ನೋಡಲು ಹಾಫ್ ಬನ್ ಹಾಗೂ ಹಾಫ್ ಫ್ರೀ ಹೇರ್‌ಸ್ಟೈಲ್‌ನಂತೆ ಕಾಣುವ ಈ ಹೇರ್ ಸ್ಟೈಲ್, ಇತ್ತೀಚಿನ ದಿನಗಳಲ್ಲಿ, ಒಂದಿಷ್ಟು ಹೊಸ ರೂಪದೊಂದಿಗೆ ಹುಡುಗಿಯರ ಬಿಂದಾಸ್ ಲುಕ್‌ಗೆ ಸಾಥ್ ನೀಡುತ್ತಿದೆ. ಏನಿದು ಹನ್ ಹೇರ್‌ಸ್ಟೈಲ್? ಟ್ರೆಂಡಿಯಾಗಲು ಕಾರಣವೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹನ್ ಕೇಶವಿನ್ಯಾಸ ಇಂದು ಫಂಕಿ ಹೇರ್ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ (Hun Hairstyle 2025) ಹಂಗಾಮ ಎಬ್ಬಿಸಿದೆ. ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿದೆ. ನೋಡಲು ಹಾಫ್ ಬನ್ ಹಾಗೂ ಹಾಫ್ ಫ್ರೀ ಹೇರ್‌ಸ್ಟೈಲ್‌ನಂತೆ ಕಾಣುವ ಈ ಹೇರ್ ಸ್ಟೈಲ್, ಇತ್ತೀಚಿನ ದಿನಗಳಲ್ಲಿ, ಒಂದಿಷ್ಟು ಹೊಸ ರೂಪದೊಂದಿಗೆ ಹುಡುಗಿಯರ ಬಿಂದಾಸ್ ಲುಕ್‌ಗೆ ಸಾಥ್ ನೀಡುತ್ತಿದೆ.
ಅರ್ಧದಷ್ಟು ಕೂದಲನ್ನು ಕಟ್ಟಿ ತುರುಬು ಹಾಕಿದಂತೆ ಕಾಣುವ ಬನ್ ಪ್ಲಸ್ ಫ್ರೀ ಹೇರ್‌ಸ್ಟೈಲ್‌ನ ಮತ್ತೊಂದು ಮಾದರಿಯೇ ಇದು. ಅಂದರೆ, ಅರ್ಧ ಬನ್ ಸ್ಟೈಲ್. ಇನ್ನರ್ಧ ಹಾರಾಡುತ್ತಿರುವ ಕೂದಲು ಎಂದರೂ ತಪ್ಪಿಲ್ಲ! ಎನ್ನುತ್ತಾರೆ ಹೇರ್ ಗ್ರೂಮಿಂಗ್ ಸ್ಪೆಷಲಿಸ್ಟ್ ನೇಹಾ ಖನ್ನಾ.

ಕೃಷ್ಣನ ಜುಟ್ಟಿನಂತೆ ಕಾಣುವ ಹನ್ ಸ್ಟೈಲ್
ನಮ್ಮಲ್ಲಿ ಹಿಂದಿನಿಂದಲೂ ಮಕ್ಕಳಿಗೆ ಹಾಕುವ ಕೃಷ್ಣನ ಜುಟ್ಟಿನ ರೂಪಾಂತರವಿದು ಎನ್ನುತ್ತಾರೆ ಲೋಕಲ್ ಕೇಶ ವಿನ್ಯಾಸಗಾರರು.
ಹಾಲಿವುಡ್ ನಟಿಯರ ಫೆವರೇಟ್ ಹೇರ್‌ಸ್ಟೈಲ್
ಏಂಜಲೀನಾ ಜೂಲಿಯಿಂದ ಹಿಡಿದು ಪಾಪ್ ಸ್ಟಾರ್ ಬ್ರಿಟ್ನಿಯವರೆಗೂ ಎಲ್ಲರೂ ಸಾಕಷ್ಟು ಬಾರಿ ಈ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಫ್ ರೈನ್ಬೋ ಹೇರ್ ಕಲರ್ ಕಾನ್ಸೆಪ್ಟ್‌ನಲ್ಲೂ ಕಾಲಿಟ್ಟು, ಮರೆಯಾಗಿದೆ. ಬಾಲಿವುಡ್ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲೂ, ಇದರ ಛಾಯೆ ಇತ್ತೀಚೆಗೆ ಕಾಣಿಸತೊಡಗಿದೆ.

ಹೀರೋಗಳ ಹನ್ ಹೇರ್‌ಸ್ಟೈಲ್ ಕ್ರೇಝ್
ಸ್ಯಾಂಡಲ್‌ವುಡ್‌ನ ಉಪೇಂದ್ರರಿಂದ ಬಾಲಿವುಡ್‌ನ ಅಕ್ಷಯ್ ಕುಮಾರ್, ಕಿಂಗ್ ಖಾನ್ ಶಾರೂಖ್, ಹೃತಿಕ್ ಸಾಕಷ್ಟು ಮಂದಿ ಈ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡದ್ದಾಗಿದೆ. ಇನ್ನು ಕೆಲವು ಪುರುಷರು, ಈ ಹೇರ್‌ಸ್ಟೈಲ್ ಯಂಗ್ ಲುಕ್ ಜತೆಗೆ ಫಂಕಿ ಲುಕ್ ಕೂಡ ನೀಡುತ್ತದೆ ಎಂಬ ಕಾರಣದಿಂದಾಗಿ ಫಾಲೋ ಮಾಡುತ್ತಿದ್ದಾರೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ಜೆನ್. ಇನ್ನು ಕೆಲವು ಯುವಕರು ಡಿಫರೆಂಟ್ ಇಮೇಜ್‌ಗಾಗಿ ಹಾಗೂ ರಫ್ ಅಂಡ್ ಟಫ್ ಲುಕ್‌ಗಾಗಿ ಇದನ್ನು ಫಾಲೋ ಮಾಡುತ್ತಿದ್ದಾರೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Mid Winter Mens Fashion 2025: ಪುರುಷರ ಯಂಗ್ ಲುಕ್‌ಗೆ ಸಾಥ್ ನೀಡುವ ಮಿಡ್ ವಿಂಟರ್ ಫ್ಯಾಷನ್ ವೇರ್‌ಗಳಿವು
ಹನ್ ಹೇರ್‌ಸ್ಟೈಲ್ ಪ್ರಿಯರಿಗೆ 5 ಸಿಂಪಲ್ ಸ್ಟೈಲಿಂಗ್ ಟ್ರಿಕ್ಸ್
* ವಿಭಿನ್ನ ಲುಕ್‌ಗಾಗಿ ಈ ಹೇರ್‌ಸ್ಟೈಲ್ ಪ್ರಯೋಗಿಸಬಹುದು.
* ಫಂಕಿ ಲುಕ್ ಗ್ಯಾರಂಟಿ.
* ಹೇರ್ ಕಲರಿಂಗ್ ಹಾಗೂ ಸ್ಟ್ರೀಕ್ಸ್ ಮಾಡಿಸಿದಲ್ಲಿ ನೋಡಲು ಡಿಫರೆಂಟ್ ಆಗಿ ಕಾಣಿಸುವುದು.
* ಕರ್ಲಿ ಹೇರ್‌ಗೆ ಅಷ್ಟಾಗಿ ಸೂಟ್ ಆಗದು. ನಿರ್ವಹಣೆ ಕಷ್ಟ.
* ಯಂಗ್ ಲುಕ್‌ಗಾಗಿ ಈ ಹೇರ್‌ಸ್ಟೈಲ್ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)