ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jumka Fashion 2025: ಮಾನಿನಿಯರ ಮನ ಗೆದ್ದ ಬ್ಲ್ಯಾಕ್ ಮೆಟಲ್ ಜುಮಕಿಗಳು

ಬ್ಲ್ಯಾಕ್ ಮೆಟಲ್ ಜುಮಕಿಗಳು ಮತ್ತೊಮ್ಮೆ ಜ್ಯುವೆಲ್ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಮಾನಿನಿಯರ ಕಿವಿಯನ್ನು ಅಲಂಕರಿಸಿವೆ. ಆ್ಯಂಟಿಕ್ ವಿನ್ಯಾಸ, ಪೊಲ್ಕಿ, ಕಲಾತ್ಮಕ ಮೀನಾಕಾರಿ, ಬೆಲ್ ಶೇಪ್ಸ್ ಸೇರಿದಂತೆ ನಾನಾ ಡಿಸೈನ್‌ನಲ್ಲಿ ಮಾನಿನಿಯರ ಮನಸೆಳೆದಿವೆ. ಈ ಕುರಿತಾದ ವಿವರ ಇಲ್ಲಿದೆ.

ಮಾನಿನಿಯರ ಮನ ಗೆದ್ದ ಬ್ಲ್ಯಾಕ್ ಮೆಟಲ್ ಜುಮಕಿಗಳು

ಚಿತ್ರಗಳು: ನಿಧಿ ಅಗರ್ವಾಲ್, ಬಾಲಿವುಡ್ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬ್ಲಾಕ್ ಮೆಟಲ್ ಜುಮಕಿಗಳು (Jumka Fashion 2025) ಮತ್ತೊಮ್ಮೆ ಟ್ರೆಂಡಿಯಾಗಿವೆ. ಮಾನಿನಿಯರನ್ನು ಸೆಳೆದಿವೆ. ಆ್ಯಂಟಿಕ್ ವಿನ್ಯಾಸ, ಪೊಲ್ಕಿ, ಕಲಾತ್ಮಕ ಮೀನಾಕಾರಿ, ಬೆಲ್ ಶೇಪ್ಸ್ ಸೇರಿದಂತೆ ನಾನಾ ಡಿಸೈನ್‌ನಲ್ಲಿ ಮಾನಿನಿಯರ ಮನಸೆಳೆದಿವೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ಬೆಲೆ ಹಾಗೂ ಸುಲಭ ನಿರ್ವಹಣೆ. ಸುಮಾರು 50 ರೂ. ಗಳಿಂದಿಡಿದು ಐನೂರು ರೂ.ಗಳವರೆಗೂ ಬೆಲೆ ಬಾಳುವ ಬ್ಲ್ಯಾಕ್ ಲೈಟ್‌ವೇಟ್ ಜುಮಕಿಗಳು ಫ್ಯಾಷನ್ ಪ್ರಿಯರಿಗೆ ಮಾತ್ರವಲ್ಲ, ಚಿತ್ರ ನಟ ನಟಿಯರಿಗೆ ಮಾಡೆಲ್‌ಗಳಿಗೂ ಪ್ರಿಯವಾಗಿವೆ. ಬ್ಲ್ಯಾಕ್ ಮೆಟಲ್ ಜುಮಕಿಗಳ ಆಕರ್ಷಣೆಯೇ ಹಾಗಿದೆ. ಹೊಸ ಮಾದರಿಯ ಆಯ್ಕೆ, ಬಣ್ಣಗಳಲ್ಲಿನ ಭಿನ್ನತೆ, ವಿಶೇಷ ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವುದೇ ಇದರ ಗುಣಾತ್ಮಕ ಅಂಶವಾಗಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಧವನ್. ಅವರು ಹೇಳುವಂತೆ, ಇವುಗಳೊಂದಿಗೆ ಕಲರ್ ಕಾಂಬಿನೇಷನ್ ಬ್ಲ್ಯಾಕ್ ಮೆಟಲ್ ಜುಮಕಿಗಳನ್ನು ಎಲ್ಲ ಬಗೆಯ ಎಥ್ನಿಕ್ ಉಡುಪುಗಳಿಗೂ ಮ್ಯಾಚ್ ಮಾಡಬಹುದು.

Jumka Fashion 2025 1

ಲೈಟ್ ವೈಟ್ ಆಗಿರುವ ಜುಮಕಿಗಳು

ಕೆಲವು ನೋಡಲು ಭಾರಿ ಗಾತ್ರದಂತೆ ಕಂಡರೂ ಈ ಜುಮಕಿಗಳು ಲೈಟ್‌ವೇಟ್ ಆಗಿರುತ್ತವೆ. ಕೃತಕ ಕ್ರಿಸ್ಟಲ್ ಕಲ್ಲುಗಳನ್ನು ಬಳಸಿ ವಿನ್ಯಾಸ ಮಾಡಿರುವಕ್ಕೂ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಮಾರಾಟಗಾರರು.

ಕಲಾತ್ಮಕ ಮೀನಾಕಾರಿ ವಿನ್ಯಾಸ

ಬಂಗಾರದಲ್ಲಿ ಲಭ್ಯವಿದ್ದ ಈ ವಿನ್ಯಾಸವೂ ಇದೀಗ ಬ್ಲ್ಯಾಕ್ ಮೆಟಲ್ ಜುಮಕಿಗಳಲ್ಲಿ ದೊರೆಯುತ್ತಿವೆ. ಹೌದು. ರಾಯಲ್ ಲುಕ್ ಸ್ತ್ರೀ ಸೌಂದರ್ಯ ಹೆಚ್ಚಿಸುತ್ತಿದ್ದ ಸಾಂಪ್ರದಾಯಿಕ ಜುಮಕಿಗಳು ಅದರಲ್ಲೂ, ಕಲಾತ್ಮಕ ಮೀನಾಕಾರಿ ಜುಮಕಿಗಳನ್ನು ಹೆಚ್ಚಾಗಿ ಉತ್ತರ ಭಾರತದ ಮಹಿಳೆಯರು ಬಳಸುತ್ತಿದ್ದರು. ಪಂಜಾಬ್‌ ಹಾಗೂ ರಾಜಾಸ್ಥಾನದಲ್ಲಿ ಈ ಬಗೆಯ ಜುಮಕಿಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು, ಮೊದಮೊದಲು ಚಿನ್ನದ ಲೋಹದಲ್ಲಿ ಮಾತ್ರ ಈ ವಿನ್ಯಾಸಗಳು ದೊರಕುತ್ತಿತ್ತು. ಆದರೆ ಈ ವಿನ್ಯಾಸಗಳಿಗೆ ಹೆಚ್ಚು ಚಿನ್ನದ ಅವಶ್ಯವಿದ್ದರಿಂದ ಬೇಡಿಕೆ ಕುಗ್ಗಿತು. ಪರಿಣಾಮ, ಬ್ಲಾಕ್ ಹಾಗೂ ವೈಟ್‌ನಲ್ಲಿ ಅತ್ಯದ್ಭುತ ವಿನ್ಯಾಸಗಳೊಂದಿಗೆ ಕಡಿಮೆ ದರದಲ್ಲಿ ಬಿಡುಗಡೆಗೊಂಡಿದ್ದು, ಜನಪ್ರಿಯಗೊಳ್ಳಲು ಕಾರಣ ಎನ್ನುತ್ತಾರೆ ಜುವೆಲರಿ ಡಿಸೈನ್ ಕೇಸರಿ.

Jumka Fashion 2025 2

ಹೂಪ್ ರಿಂಗ್ ಬ್ಲ್ಯಾಕ್ ಮೆಟಲ್ ಜುಮಕಿ

ಮೊಗಲರ ಕಾಲದಲ್ಲಿ ರಾಣಿಯರು ಧರಿಸುತ್ತಿದ್ದ ರಿಂಗ್ ಸ್ಟೈಲ್‌ನ ಭಾರಿ ಗಾತ್ರದ ಜುಮಕಿಗಳು ಕಾಲ ಕಳೆದಂತೆ ಕೊಂಚ ವಿನ್ಯಾಸ ಬದಲಿಸಿಕೊಂಡು ಬ್ಲ್ಯಾಕ್ ಮೆಟಲ್‌ನಲ್ಲೂ ಕಾಣಿಸಿಕೊಂಡಿವೆ.

ಬ್ಲ್ಯಾಕ್ ಜುಮ್ಕಾ ಬಳೆಗಳು ಲಭ್ಯ

ಜುಮ್ಕಾಗಳೆಂದಾಕ್ಷಣ ಕಿವಿಗೆ ಮಾತ್ರ ಧರಿಸುವುದು ಎಂದುಕೊಂಡಿದ್ದರೆ ಊಹೆ ತಪ್ಪಾದೀತು! ಏಕೆಂದರೆ ಇದೀಗ ಜುಮ್ಕಾ ಬಳೆಗಳೂ ಲಭ್ಯ. ನೇತಾಡುವ ಜುಮಕಿಗಳನ್ನು ಬಳೆಗೆ ಜೋಡಿಸಲಾಗಿರುತ್ತದೆ. ಇವು ಕೂಡ ಪಾಪುಲರ್ ಆಗಿವೆ.

Jumka Fashion 2025 3

ಬ್ಲ್ಯಾಕ್ ಮೆಟಲ್ ಜುಮಕಿಗಳನ್ನು ಕೊಳ್ಳುವ ಮುನ್ನ

  • ಬ್ಲಾಕ್ ಮೆಟಲ್ ಜುಮಕಿಗಳನ್ನು ಕೊಳ್ಳುವ ಮುನ್ನ ಫಿನಿಶಿಂಗ್ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
  • ಆದಷ್ಟೂ ಲೈಟ್ ಇರುವಂತಕ್ಕೆ ಪ್ರಾಮುಖ್ಯತೆ ನೀಡಿ.
  • ನೀರಲ್ಲಿ ನೆನಸಬೇಡಿ. ಹೋಗುವ ಸಾಧ್ಯತೆ ಇದೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Monsoon Fashion 2025: ಮಾನ್ಸೂನ್ ಮಳೆ ಗಾಳಿಗೆ ಮರಳಿದ ಫ್ಯಾಷನ್ ಪ್ರಿಯರ ಟರ್ಟಲ್ ನೆಕ್ ಡ್ರೆಸ್