LIVA Miss Diva 2024: ಲೀವಾ ಮಿಸ್ ದಿವಾ 2024 ಗ್ರ್ಯಾಂಡ್ ಫಿನಾಲೆ; ಆಯುಶ್ರಿ ಮಲಿಕ್, ವಿಪ್ರಾ ಮೆಹ್ತಾಗೆ ಕಿರೀಟ
LIVA Miss Diva 2024: ಲೀವಾ ಮಿಸ್ ದಿವಾ 2024 ಗ್ರ್ಯಾಂಡ್ ಫಿನಾಲೆ (LIVA Miss Diva 2024) ಇತ್ತೀಚೆಗೆ ನಡೆಯಿತು. ಆಯುಶ್ರಿ ಮಲಿಕ್ ಅವರು ʼಲೀವಾ ಮಿಸ್ ದಿವಾ ಸುಪ್ರಾನ್ಯಾಷನಲ್ 2024ʼ ಕಿರೀಟ ಮುಡಿಗೇರಿಸಿಕೊಂಡರೆ ವಿಪ್ರಾ ಮೆಹ್ತಾ, ʼಲೀವಾ ಮಿಸ್ ದಿವಾ ಕೋಸ್ಮೋ 2024ʼ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಲೀವಾ ಮಿಸ್ ದಿವಾ 2024 ಗ್ರ್ಯಾಂಡ್ ಫಿನಾಲೆ (LIVA Miss Diva 2024) ಇತ್ತೀಚೆಗೆ ನಡೆಯಿತು. ಆಯುಶ್ರಿ ಮಲಿಕ್ ಅವರು ʼಲೀವಾ ಮಿಸ್ ದಿವಾ ಸುಪ್ರಾನ್ಯಾಷನಲ್ 2024ʼ ಕಿರೀಟ ಮುಡಿಗೇರಿಸಿಕೊಂಡರೆ ವಿಪ್ರಾ ಮೆಹ್ತಾ, ʼಲೀವಾ ಮಿಸ್ ದಿವಾʼ ಕೋಸ್ಮೋ 2024ʼ ಪಟ್ಟವನ್ನು ತಮ್ಮದಾಗಿಸಿಕೊಂಡರು. ಈ ಇಬ್ಬರು ವಿಜೇತರು, ಮಿಸ್ ಸುಪ್ರಾನ್ಯಾಷನಲ್ 2025 ಮತ್ತು ಮಿಸ್ ಕೋಸ್ಮೋ 2025 ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿಯ ಸ್ಪರ್ಧೆಗೆ ಎರಡು ಹೊಸ ವಿಭಾಗಗಳನ್ನು ಸೇರ್ಪಡೆ ಮಾಡಲಾಗಿತ್ತು. ಅಂತೆಯೇ ಸುಧೃತಿ ಪಧಿಯಾರಿ ಅವರು ಲೀವಾ ಮಿಸ್ ದಿವಾ ಫ್ಯಾಷನ್ ಡಿಸೈನರ್ 2024 ಆಗಿ ಹೊರಹೊಮ್ಮಿದರೆ ಅನನ್ಯ ಪ್ರವೀಣ್ ಅವರು ಲೀವಾ ಮಿಸ್ ದಿವಾ ಕಂಟೆಂಟ್ ಕ್ರಿಯೇಟರ್ 2024 ಆಗಿ ಆಯ್ಕೆಯಾದರು. ಫ್ಯಾಷನ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಪ್ರಭಾವಕ್ಕೆ ಈ ಎರಡು ಹೊಸ ವಿಭಾಗಗಳು ಸಾಕ್ಷಿಯಾಗಿದೆ.
ನೇಹಲ್ ಚುಡಾಸಮಾ ಮತ್ತು ತನೂಜ್ ವಿರ್ವಾನಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟು 24 ಫೈನಲಿಸ್ಟ್‌ಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಂದಿರಾ ವಿರ್ಕ್ ಅವರ ಫ್ಯಾಷನ್ ಶೋ ಮತ್ತು ಫೋ, ಪ್ರಗತಿ ನಾಗಪಾಲ್ ಮತ್ತು ಅರ್ಜುನ್ ತನ್ವರ್ ಅವರಿಂದ ನಾನಾ ಪ್ರದರ್ಶನಗಳು ನಡೆದವು. ಫರ್ದೀನ್ ಖಾನ್, ರಿತಿಕಾ ಖಟ್ನಾನಿ ಮತ್ತು ಆಂಡ್ರಿಯಾ ಅಗ್ವಿಲೆರಾ ಮತ್ತಿತರ ಸೆಲೆಬ್ರಿಟಿಗಳು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ?
ಲೀವಾ ಮಿಸ್ ದಿವಾ 2024 ಸ್ಪರ್ಧೆಯು ಪ್ರತಿಭೆ, ಸಶಕ್ತೀಕರಣ ಮತ್ತು ಜಾಗತಿಕ ಪ್ರಾತಿನಿಧ್ಯಕ್ಕೆ ಪ್ರಮುಖ ಮೆಟ್ಟಿಲಾಗಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಫ್ಯಾಷನ್ ಮತ್ತು ಸೌಂದರ್ಯ ಕ್ಷೇತ್ರದಲ್ಲಿ ಪ್ರಭಾವವನ್ನು ಸಾಕ್ಷಿಯಾಗಿದೆ. ಹೀಗಾಗಿ ಇಲ್ಲಿನ ವಿಜೇತರು ಜಗತ್ತಿನ ನಾನಾ ವೇದಿಕೆಗಳನ್ನು ಏರಲಿದ್ದಾರೆ.