ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe Karnataka Audition: ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ ಅಡಿಷನ್‌

Miss Universe Karnataka Audition: ಉದ್ಯಾನನಗರಿಯಲ್ಲಿ ಮೊತ್ತ ಮೊದಲ ಬಾರಿಗೆ ನೇರವಾಗಿ ಮಿಸ್‌ ಯೂನಿವರ್ಸ್‌ ಕರ್ನಾಟಕ ಬ್ಯೂಟಿ ಪೇಜೆಂಟ್‌ನ ಅಡಿಷನ್‌ ನಡೆದಿದೆ. ಫ್ಯಾಷನ್‌ ಡೈರೆಕ್ಟರ್‌ ಆಯೋಜಕಿ ನಂದಿನಿ ನಾಗರಾಜ್‌ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ವರದಿ ಇಲ್ಲಿದೆ.

ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ ಅಡಿಷನ್‌

ಚಿತ್ರಗಳು: ನಂದಿನಿ ನಾಗರಾಜ್‌ ನೇತೃತ್ವದಲ್ಲಿ ನಡೆದ ಮಿಸ್‌ ಯೂನಿವರ್ಸ್‌ ಕರ್ನಾಟಕ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದ ಭಾವಿ ಮಾಡೆಲ್‌ಗಳು

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯಲ್ಲಿ ಮೊತ್ತ ಮೊದಲ ಬಾರಿಗೆ ಫ್ಯಾಷನ್‌ ಪೇಜೆಂಟ್‌ ಡೈರೆಕ್ಟರ್‌ ನಂದಿನಿ ನಾಗರಾಜ್‌ ನೇತೃತ್ದಲ್ಲಿ ಮಿಸ್ ಯೂನಿವರ್ಸ್ ಕರ್ನಾಟಕ ಅಡಿಷನ್‌ (Miss Universe Karnataka Audition) ಯಶಸ್ವಿಯಾಗಿ ನಡೆಯಿತು. ಕರ್ನಾಟಕ ಇತಿಹಾಸದಲ್ಲೆ ಮೊದಲ ಬಾರಿಗೆ ನಡೆದ ಅಡಿಷನ್‌ನಲ್ಲಿ ಸುಮಾರು 100 ಕ್ಕೂ ಹೆಚ್ಚು ಭಾವಿ ಮಾಡೆಲ್‌ಗಳು, ಹುಡುಗಿಯರು ಭಾಗವಹಿಸಿದ್ದರು. ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡರು. ಅಂತಿಮವಾಗಿ 30 ಯುವತಿಯರು ಮುಂಬರುವ ಮಿಸ್‌ ಯೂನಿವರ್ಸ್‌ ಕರ್ನಾಟಕ ಕಾಂಪಿಟೇಷನ್‌ನಲ್ಲಿ ಭಾಗವಹಿಸಲಿದ್ದಾರೆ. ಮಿಸ್ ಯೂನಿವರ್ಸ್ ಕರ್ನಾಟಕ-2025 ಸೌಂದರ್ಯ ಸ್ಫರ್ಧೆಯ ಅಡಿಷನ್‌ ಈಗಾಗಲೇ ಯಶಸ್ವಿಯಾಗಿ ನಡೆದಿದ್ದು, ಮುಂಬರುವ ಮೇ 16 ರಂದು ನಗರದಲ್ಲಿ ಅಂತಿಮ ಸುತ್ತಿನ ಸ್ಫರ್ಧೆ ನಡೆಯಲಿದೆ. ಶಕ್ತಿ ಗ್ರೂಪ್ ಆಫ್ ಕಂಪನಿ ಹಾಗೂ ರೀ ಬರ್ತ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸ್ಫರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಕಿರೀಟ ವಿಜೇತರಾದವರನ್ನು ‘ಮಿಸ್ ಇಂಡಿಯಾ’ ಸ್ಪರ್ಧೆಗೆ ಅಣಿಗೊಣಿಸಲಾಗುವುದು. ಮಿಸ್ ಇಂಡಿಯಾ ಕಿರೀಟ ನಮ್ಮದಾಗಿಸಿಕೊಳ್ಳುವುದು ನಮ್ಮ ಮುಂದಿನ ಗುರಿ ಎಂದು ಆಯೋಜಕಿ ನಂದಿನಿ ನಾಗರಾಜ್ ತಿಳಿಸಿದ್ದಾರೆ. ‌

1

ಆತ್ಮವಿಶ್ವಾಸ ಹೆಚ್ಚಿಸುವ ಪೇಜೆಂಟ್‌

ಶಕ್ತಿ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಮಹಿಳೆಯರು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ, ಮಿಸ್ ಕರ್ನಾಟಕ ಯೂನಿವರ್ಸ್ ಪೇಜೆಂಟ್‌ ಸಹಕಾರಿಯಾಗಲಿದೆ. ಸುಶ್ಮಿತಾಸೇನ್, ಲಾರಾದತ್ತ, ರಿಯಾ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕದಲ್ಲಿ ನಂದಿನಿ ನಾಗರಾಜ್ ಅವರು ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ಸ್ಫರ್ಧೆಯಲ್ಲಿ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.

2
3

ಜ್ಯೂರಿ ಪ್ಯಾನೆಲ್‌

ಮಿಸ್ ಯೂನಿವರ್ಸ್ ಕರ್ನಾಟಕ ಸೌಂದರ್ಯ ಸ್ಫರ್ಧೆಯ ಅಡಿಷನ್‌ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ರೂಪದರ್ಶಿಗಳಾದ ಜನನಿ ರಾಜನ್, ಬಬಿತಾ ಪ್ರಕಾಶ್, ಕಾವ್ಯ ಸಂಜು, ಅನಿಲ್ ಶೆಟ್ಟಿ ಜ್ಯೂರಿಗಳಾಗಿ ಪಾಲ್ಗೊಂಡಿದ್ದರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Ugadi Fashion: ಯುಗಾದಿ ಹಬ್ಬದ ಸಂಭ್ರಮಕ್ಕೆ ವೈವಿಧ್ಯಮಯ ರೇಷ್ಮೆ ಉಡುಗೆಗಳ ಸಾಥ್‌