Ugadi Fashion: ಯುಗಾದಿ ಹಬ್ಬದ ಸಂಭ್ರಮಕ್ಕೆ ವೈವಿಧ್ಯಮಯ ರೇಷ್ಮೆ ಉಡುಗೆಗಳ ಸಾಥ್
Ugadi Fashion: ಯುಗಾದಿ ಹಬ್ಬದ ಫ್ಯಾಷನ್‌ನಲ್ಲಿ ಇದೀಗ ನಾನಾ ಬಗೆಯ ರೇಷ್ಮೆಯ ಉಡುಗೆಗಳು ನಯಾ ರೂಪದಲ್ಲಿ ಕಾಲಿಟ್ಟಿವೆ. ಇವು ಎಥ್ನಿಕ್ ಲುಕ್ ಕಲ್ಪಿಸುವುದರೊಂದಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಬಗ್ಗೆ ಫ್ಯಾಷನ್ ಎಕ್ಸ್‌ಪರ್ಟ್‌ಗಳು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರಗಳು: ಚಂದನಾ ಗೌಡ, ಮಾಡೆಲ್/ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಟ್ರೆಡಿಷನಲ್ ಲುಕ್ ನೀಡುವ ವೈವಿಧ್ಯಮಯ ರೇಷ್ಮೆ ಡಿಸೈನರ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ (Ugadi Fashion) ಕಾಲಿಟ್ಟಿವೆ. ಮಾನಿನಿಯರನ್ನು ಸವಾರಿ ಮಾಡಲು ಸಜ್ಜಾಗಿವೆ. ಈ ಬಾರಿ ಇಂಡಿಯನ್ ಹಾಗೂ ವೆಸ್ಟರ್ನ್ ಸ್ಟಿಚ್ಚಿಂಗ್ ಮಿಕ್ಸ್ ಮಾಡಿ ಡಿಸೈನ್ ಮಾಡಿರುವಂತಹ ನಾನಾ ಬಗೆಯ ಸಿಲ್ಕ್ ಸ್ಕರ್ಟ್ಸ್, ಫ್ರಾಕ್‌ಗಳು, ರೇಷ್ಮೆಯ ಮ್ಯಾಕ್ಸಿ ಶೈಲಿಯ ಡ್ರೆಸ್, ರೇಷ್ಮೆಯ ಲೆಹೆಂಗಾಗಳು ಸೇರಿದಂತೆ ನಾನಾ ಬಗೆಯ ಉಡುಗೆಗಳು ಈ ಜನರೇಷನ್‌ನ ಹುಡುಗಿಯರಿಗೂ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಂದಿವೆ. ಜತೆಗೆ ಊಹೆಗೂ ನಿಲುಕದ ವೈಬ್ರೆಂಟ್ ಕಲರ್‌ನಲ್ಲಿ, ಕಾಂಟ್ರಾಸ್ಟ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವು ಬಾರ್ಡರ್ ಜತೆ ಇದ್ದರೆ, ಇನ್ನು ಕೆಲವು ಬಾರ್ಡರ್‌ಲೆಸ್ ಡಿಸೈನ್‌ನಲ್ಲಿ ಬಂದಿವೆ. ಪಾಸ್ಟೆಲ್ ಕಲರ್ ಪ್ರಿಯರಿಗೆ ಲೈಟ್ ಕಾಂಟ್ರಸ್ಟ್ ಶೇಡ್‌ನಲ್ಲಿ ಉಡುಪುಗಳು ಎಂಟ್ರಿ ನೀಡಿವೆ. ಇನ್ನು, ರೇಷ್ಮೆಯ ವೈಬ್ರೆಂಟ್ ಶೇಡ್‌ನ ಡಿಸೈನರ್‌ವೇರ್ಸ್ ಯಂಗ್ ಲುಕ್ ನೀಡುವುದರೊಂದಿಗೆ ಫೆಸ್ಟಿವ್ ಸೀಸನ್‌ನ ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡಿವೆ. ಡಾರ್ಕ್ ಶೇಡ್‌ನಲ್ಲಿದ್ದ ಬಾರ್ಡರ್‌ಗೆ ಕಲಾತ್ಮಕ ಚಿತ್ತಾರಗಳು ನುಸುಳಿವೆ. ಇವು ಥೀಮ್‌ಗೆ ತಕ್ಕಂತೆ ವಿನ್ಯಾಸಗೊಂಡಿವೆ ಎನ್ನುತ್ತಾರೆ ಮಾಡೆಲ್ ಚಂದನಾ. ಇನ್ನು, ಹಬ್ಬದ ಜತೆ ಜತೆಗೆ ಬೇಸಿಗೆ ಹಾಗೂ ವೆಡ್ಡಿಂಗ್ ಸೀಸನ್ ಕೂಡ ಇರುವುದರಿಂದ ಲೈಟ್ ಬ್ರೈಟ್ ಕಾನ್ಸೆಪ್ಟ್‌ನ ವೈಬ್ರೆಂಟ್ ರೇಷ್ಮೆ ಸ್ಕರ್ಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ.

ರೇಷ್ಮೆ ಫ್ಯಾಬ್ರಿಕ್‌ನ ಲೆಹೆಂಗಾ
ಮಿಕ್ಸೆಡ್ ಸಿಲ್ಕ್‌ನ ರೇಷ್ಮೆಯ ಟ್ರೆಡಿಷನಲ್ ಲುಕ್ ನೀಡುವ ಇಂಡೋ-ವೆಸ್ಟರ್ನ್ ಲುಕ್ ನೀಡುವ ಲೆಹೆಂಗಾ ಈ ಬಾರಿಯ ಯುಗಾದಿಗೆ ಹೊಸ ಡಿಸೈನ್ ಹಾಗೂ ಲುಕ್‌ನಲ್ಲಿ ಬಂದಿವೆ. ಎರಡಕ್ಕಿಂತ ಹೆಚ್ಚು ಶೇಡ್‌ಗಳಿರುವಂತಹ ಮಲ್ಟಿ ಶೇಡ್‌ನವು ಅಲ್ಲಲ್ಲಿ ಮಿಕ್ಸ್ ಮ್ಯಾಚ್ ಬೂಟಾ, ಚೆಕ್ಸ್ ಪ್ರಿಂಟ್ ಮಾದರಿಯವು ಪ್ರಚಲಿತದಲ್ಲಿವೆ. ಬಾರ್ಡರ್ ಇರುವ ಜಾಗದಿಂದ ಸ್ಥಾನ ಬದಲಿಸಿವೆ. ಟೀನೇಜ್ ಹಾಗೂ ಯುವತಿಯರಿಗೂ ಇಷ್ಟವಾಗುವಂತಹ ಮಾದರಿಯಲ್ಲಿ ಇವು ಕಾಣಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ಸ್.

ಈ ಹಿಂದೆ ಟ್ರೆಂಡಿಯಾಗಿದ್ದ ರೇಷ್ಮೆ ಲೆಹೆಂಗಾ ಸೌತ್ ಇಂಡಿಯನ್ ಡಿಸೈನರ್‌ವೇರ್‌ನಲ್ಲಿ ಗುರುತಿಸಿಕೊಂಡಿತ್ತಾದರೂ ಜನಪ್ರಿಯಗೊಂಡಿರಲಿಲ್ಲ. ಉತ್ತರ ಹಾಗೂ ದಕ್ಷಿಣ ಭಾರತದ ವಿನ್ಯಾಸಕಾರರ ಕೈಗಳಲ್ಲಿ ವಿನ್ಯಾಸಗೊಂಡ ಈ ರೇಷ್ಮೆ ಲೆಹೆಂಗಾ ಈ ಸಾಲಿನಲ್ಲಿ ಕೊಂಚ ಹೊಸ ವಿನ್ಯಾಸದೊಂದಿಗೆ ಮತ್ತೊಮ್ಮೆ ಬಿಡುಗಡೆಗೊಂಡಿರುವುದು ಯುವತಿಯರಿಗೆ ಪ್ರಿಯವಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ರೇಷ್ಮೆಯ ಬ್ಯೂಟಿಫುಲ್ ಎಥ್ನಿಕ್ ಗೌನ್
ಕ್ರೇಪ್, ಜಾರ್ಜೆಟ್, ಶಿಫಾನ್‌ನಲ್ಲಿ ಕಾರ್ಸೆಟ್, ಫಿಶ್‌ಕಟ್, ಲಾಂಗ್ ಕಟ್ ಹೀಗೆ ನಾನಾ ವಿನ್ಯಾಸಗಳಲ್ಲಿ ಫ್ಲೋ ಆಗುವಂತಹ ವಿನ್ಯಾಸಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಗೌನ್‌ಗಳು ಫೆಸ್ಟಿವ್ ಸೀಸನ್‌ಗೆ ಸೂಟ್ ಆಗುವಂತೆ ರೇಷ್ಮೆಯ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ. ಸಾಫ್ಟ್ ಸಿಲ್ಕ್‌ನಲ್ಲೂ ಲಭ್ಯ. ರಾ ಸಿಲ್ಕ್‌ನಲ್ಲೂ ಗ್ರ್ಯಾಂಡ್ ಬಾರ್ಡರ್ ಜತೆ ಕಂಡು ಬರುತ್ತಿವೆ. ಗೌನ್ ಡಿಸೈನ್‌ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ದಿ ಗೌನ್ ರೆಂಟ್ ಡಿಸೈನರ್ಸ್.
ಈ ಸುದ್ದಿಯನ್ನೂ ಓದಿ | Star Summer Fashion Interview: ಸಮ್ಮರ್ ಕೂಲ್ ಔಟ್‌ಫಿಟ್ಸ್‌ನಲ್ಲಿ ನಟಿ ಜಯಶ್ರೀ ಆರಾಧ್ಯ ಸ್ಟೈಲಿಶ್ ಲುಕ್
ಯುಗಾದಿ ಹಬ್ಬದ ಗ್ರ್ಯಾಂಡ್ ಡಿಸೈನರ್‌ವೇರ್ ಪ್ರಿಯರಿಗೆ ಟಿಪ್ಸ್
* ರೇಷ್ಮೆಯ ಡಿಸೈನರ್‌ವೇರ್ ಹೆಚ್ಚು ಮಡಚಿಡಬಾರದು. ಹ್ಯಾಂಗರ್‌ನಲ್ಲಿ ಹಾಕಿಡಬೇಕು.
* ಆದಷ್ಟೂ ಲೈಟ್‌ವೈಟ್ ರೇಷ್ಮೆ ಡ್ರೆಸ್ ಆಯ್ಕೆ ಉತ್ತಮ.
* ಔಟ್‌ಫಿಟ್‌ಗೆ ಸೂಟ್ ಆಗುವಂತೆ ಜ್ಯುವೆಲರಿ ಮ್ಯಾಚ್ ಮಾಡಿ, ಧರಿಸಿ.
* ಮೇಕಪ್ ಪರ್ಫೆಕ್ಟ್ ಮ್ಯಾಚ್ ಆಗುವಂತಿರಬೇಕು.
* ಹೇರ್‌ಸ್ಟೈಲ್ ಡಿಸೈನರ್‌ವೇರ್‌ಗೆ ತಕ್ಕಂತೆ ಇರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)