Model Fashion 2025: ಮಾಡೆಲ್ ಹರಿಣಿ ಆನಂದ್ ಫ್ಯಾಷನ್ ಲೋಕದ ಕನಸು
Model Fashion 2025: ಫ್ಯಾಷನ್ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡುವ ಕನಸಿದೆ ಎನ್ನುತ್ತಾರೆ ಮಿಸ್ ಯೂನಿವರ್ಸ್ ಕರ್ನಾಟಕ 2025 ರ ಫಿನಾಲೆಗೆ ಆಯ್ಕೆಯಾಗಿರುವ ಮಾಡೆಲ್ ಹರಿಣಿ ಆನಂದ್. ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತಂತೆ ಹೇಳಿರುವ ಅವರು ತಮ್ಮ ಫ್ಯಾಷನ್ ಬಗ್ಗೆಯೂ ಮಾತನಾಡಿದ್ದಾರೆ.

ಚಿತ್ರಗಳು: ಹರಿಣಿ ಆನಂದ್, ಮಿಸ್ ಯೂನಿವರ್ಸ್ ಇಂಡಿಯಾ 2025 ಟಾಪ್ 5 ನಲ್ಲಿರುವ ಫೈನಲಿಸ್ಟ್.

ಸಂದರ್ಶನ : ಶೀಲಾ ಸಿ. ಶೆಟ್ಟಿ
ಫ್ಯಾಷನ್ ಕ್ಷೇತ್ರದಲ್ಲಿ ಒಂದಿಷ್ಟು ಸಾಧಿಸುವ ಕನಸಿದೆ, ಗುರಿಯಿದೆ ಎನ್ನುವ ಮಿಸ್ ಯೂನಿವರ್ಸ್ ಕರ್ನಾಟಕ ಫಿನಾಲೆಗೆ ಆಯ್ಕೆಯಾಗಿರುವ ಮಾಡೆಲ್ ಹರಿಣಿ ಆನಂದ್ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು (Model Fashion 2025) ಆಯಾ ಸೀಸನ್‌ಗೆ ತಕ್ಕಂತೆ ಬದಲಿಸುತ್ತಾರಂತೆ. ಈ ಕುರಿತಂತೆ ಅವರು ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿಶ್ವವಾಣಿ ನ್ಯೂಸ್: ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಫಿನಾಲೆವರೆಗೂ ತಲುಪಿದ ನಿಮಗೆ ಆದ ಅನುಭವವೇನು?
ಹರಿಣಿ ಆನಂದ್: ಖುಷಿಯಾಗಿದೆ. ಪ್ರತಿ ಹಂತದಲ್ಲೂ ಹೊಸತನ್ನು ಕಲಿಯುವ ಸದಾವಕಾಶ ದೊರೆತಿದೆ. ರಿಜಿನಲ್ ಡೈರೆಕ್ಟರ್ ನಂದಿನಿ ನಾಗರಾಜ್ ಎಲ್ಲದಕ್ಕೂ ಬೆಂಬಲ ನೀಡಿದ್ದಾರೆ.

ವಿಶ್ವವಾಣಿ ನ್ಯೂಸ್: ಬ್ಯೂಟಿ ಪೇಜೆಂಟ್‌ನಲ್ಲಿ ಭಾಗವಹಿಸಬೇಕೆಂಬ ಹಂಬಲ ಉಂಟಾಗಿದ್ದು ಯಾವಾಗ?
ಹರಿಣಿ ಆನಂದ್: ನಾನು 10 ನೇ ತರಗತಿಯಲ್ಲಿದ್ದಾಗಲೇ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆಗಲೇ ನನಗೆ ನ್ಯಾಷನಲ್ ಲೆವೆಲ್ ಬ್ಯೂಟಿ ಪೇಜೆಂಟ್‌ಗಳಲ್ಲಿಯೂ ಕಾಣಿಸಿಕೊಳ್ಳಬೇಕೆಂಬ ಆಸೆ ಬೇರೂರಿತ್ತು.
ವಿಶ್ವವಾಣಿ ನ್ಯೂಸ್: ಬ್ಯೂಟಿ ಪೇಜೆಂಟ್ ಹೊರತುಪಡಿಸಿದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಾ?
ಹರಿಣಿ ಆನಂದ್: ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಿಸ್ಸಿ ಪ್ಯಾರಡೈಸ್ ಎಂಬ ಶ್ವಾನಗಳನ್ನು ಸಂರಕ್ಷಿಸುವ ಕೇಂದ್ರವೊಂದನ್ನು ನಡೆಸುತ್ತಿದ್ದೇನೆ.

ವಿಶ್ವವಾಣಿ ನ್ಯೂಸ್: ನೀವು ಟ್ರೆಂಡ್ ಸೆಟ್ಟರ್ ಅಥವಾ ಟ್ರೆಂಡ್ ಫಾಲೋವರ್ ಆಗಲು ಬಯಸುತ್ತೀರಾ?
ಹರಿಣಿ ಆನಂದ್: ನಾನು ಸದಾ ಟ್ರೆಂಡ್ ಸೆಟ್ಟರ್ ಆಗಲು ಬಯಸುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮ್ಮ ಮಾನ್ಸೂನ್ ಫ್ಯಾಷನ್ ಬಗ್ಗೆ ಹೇಳಿ?
ಹರಿಣಿ ಆನಂದ್: ಲಾಂಗ್ ಟ್ರೆಂಚ್ ಕೋಟ್ಸ್, ಬೂಟ್ಸ್ ಹಾಗೂ ಟರ್ಟಲ್ ನೆಕ್ ಟೀ ಶರ್ಟ್ಸ್ ಫಿಟ್ ಜೀನ್ಸ್ ನನ್ನ ಮಾನ್ಸೂನ್ ಫ್ಯಾಷನ್‌ನಲ್ಲಿದೆ.

ವಿಶ್ವವಾಣಿ ನ್ಯೂಸ್: ನಿಮ್ಮ ಜೀವನದ ಗುರಿಯೇನು? ಕನಸೇನು?
ಹರಿಣಿ ಆನಂದ್: ಫ್ಯಾಷನ್ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡುವ ಉದ್ದೇಶವಿದೆ. ಇನ್ನು, ಮುಂದೊಮ್ಮೆ ಖ್ಯಾತ ಡಿಸೈನರ್ ರೋಹಿತ್ ಬಾಲ್‌ರ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕುವ ಕನಸಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon Nail Art 2025: ಈ ಸೀಸನ್‌ನಲ್ಲಿ ಟ್ರೆಂಡಿಯಾದ ಮಾನ್ಸೂನ್ ನೇಲ್ ಆರ್ಟ್‌ಗಳಿವು!