ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Model Summer Fashion: ಯುವಕರಿಗೆ ಮಾಡೆಲ್‌ & ನಟ ವಿನಯ್‌ ಸಿಂಧ್ಯಾ ಸಮ್ಮರ್‌ ಫ್ಯಾಷನ್‌ ಟಿಪ್ಸ್‌

Model Summer Fashion: ನಟ ಕಮ್‌ ಮಾಡೆಲ್‌ ವಿನಯ್‌ ಸಿಂಧ್ಯಾ ತಮ್ಮ ಸಮ್ಮರ್‌ ಲೈಫ್‌ಸ್ಟೈಲ್‌ ಹಾಗೂ ಫ್ಯಾಷನ್‌ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿರುವುದಲ್ಲದೇ, ಯುವಕರಿಗೆ ಈ ಸೀಸನ್‌ನಲ್ಲಿ ಹೇಗಿರಬೇಕು? ಏನು ಮಾಡಬೇಕು? ಎಂಬುದರ ಬಗ್ಗೆ ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ.

ಯುವಕರಿಗೆ ಮಾಡೆಲ್‌ & ನಟ ವಿನಯ್‌ ಸಿಂಧ್ಯಾ ಸಮ್ಮರ್‌ ಫ್ಯಾಷನ್‌ ಟಿಪ್ಸ್‌

ಚಿತ್ರಗಳು: ವಿನಯ್‌ ಸಿಂಧ್ಯಾ, ಮಾಡೆಲ್‌/ನಟ

ಸಂದರ್ಶನ: ಶೀಲಾ ಸಿ. ಶೆಟ್ಟಿ

ನಟ ಹಾಗೂ ಮಾಡೆಲ್‌ ವಿನಯ್‌ ಸಿಂಧ್ಯಾ ಈಗಾಗಲೇ ಸಮ್ಮರ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಹೌದು, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಇಂಡಿಯಾದ ಹಾಟ್‌ ಮಾಡೆಲ್‌ ಎಂದೆನಿಸಿಕೊಂಡ ಮಾಡೆಲ್‌ ವಿನಯ್‌ (Model Summer Fashion), ಮುಂಬಯಿ, ಕೊಚ್ಚಿನ್‌, ಜೈಪುರ್‌, ಚೆನ್ನೈ ಎಂದೆಲ್ಲಾ ಸಾಕಷ್ಟು ಕಡೆ ರಾರ‍ಯಂಪ್‌ವಾಕ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಮ್ಯಾಗಜೀನ್‌ಗಳಲ್ಲೂ ಮಿಂಚಿದ್ದಾರೆ. ಒಟ್ಟಾರೆ, ಮಾಡೆಲಿಂಗ್‌ ಜಗತ್ತನ್ನು ಇಷ್ಟಪಟ್ಟು ಅಪ್ಪಿಕೊಂಡಿರುವ ವಿನಯ್‌, ಕನ್ನಡ ಸಿನಿಮಾಗಳಲ್ಲೂ ಖಡಕ್‌ ಪಾತ್ರಗಳಲ್ಲಿ ಕಾಣಿಸಿಕೊಂಡು̤ ಇದೀಗ ಬೇರೆ ಭಾಷೆಯ ಸೀರಿಯಲ್‌ನಲ್ಲೂ ನಟಿಸುತ್ತಿದ್ದಾರೆ.

1

ವಿಶ್ವವಾಣಿ ನ್ಯೂಸ್‌: ವಿನಯ್‌ ನಿಮ್ಮ ಸಮ್ಮರ್‌ ಫ್ಯಾಷನ್‌ ಏನು?

ವಿನಯ್‌ ಸಿಂಧ್ಯಾ: ಕೂಲಾಗಿರುವ ಕಂಫರ್ಟಬಲ್‌ ಫ್ಯಾಷನ್‌ ನನ್ನದು! ಸಿಂಪಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ. ಸಿಂಪಲ್‌ ಟೀ ಶರ್ಟ್ಸ್‌ ನನಗಿಷ್ಟ. ಆಯಾ ಸಂದರ್ಭಕ್ಕೆ ತಕ್ಕಂತೆ ಔಟ್‌ಫಿಟ್‌ ಚೂಸ್‌ ಮಾಡಿ ಧರಿಸುತ್ತೇನೆ.

ವಿಶ್ವವಾಣಿ ನ್ಯೂಸ್‌: ಮಾಡೆಲ್‌ನಂತೆ ಆಕರ್ಷಕವಾಗಿ ಕಾಣಿಸಲು ಏನು ಮಾಡಬೇಕು?

ವಿನಯ್‌ ಸಿಂಧ್ಯಾ: ಫಿಟ್‌ ಹಾಗೂ ಫೈನ್‌ ಆಗಿ ಕಾಣಿಸಲು ಪುರುಷರು ಮಾಡೆಲ್‌ ಆಗಬೇಕೆಂದಿಲ್ಲ! ಒಂದಿಷ್ಟು ಸಿಂಪಲ್‌ ಟಿಪ್ಸ್‌ ಪಾಲಿಸಿದರೆ ಸಾಕು. ಪುರುಷರು ಫಿಟ್‌ನೆಸ್‌ಗೆ ಮ್ಯಾಚ್‌ ಆಗುವ ಉಡುಪು, ಅದರಲ್ಲೂ ಬೇಸಿಗೆಯಲ್ಲಿ ಜೀನ್ಸ್‌ ಜತೆ ಕಾಲರ್‌ಲೆಸ್‌ ಟೀ ಶರ್ಟ್‌. ಹೊರಗೆ ಹೋಗುವಾಗ ಸನ್‌ಗ್ಲಾಸ್‌, ಸ್ಕಿನ್‌ಗೆ ಸನ್‌ಸ್ಕ್ರೀನ್‌ ಬಳಸಬೇಕು. ಕೊಂಚ ಆರೈಕೆ ಕೂಡ ಅಗತ್ಯ. ಆಗ ತಂತಾನೆ ಮಾಡೆಲ್‌ನಂತೆ ಕಾಣಿಸಬಲ್ಲರು.

2

ವಿಶ್ವವಾಣಿ ನ್ಯೂಸ್‌: ಸೌಂದರ್ಯ ಎಂಬುದು ಹೆಣ್ಣಿಗೆ ಮಾತ್ರ ಸೀಮಿತವೇ?‌

ವಿನಯ್‌ ಸಿಂಧ್ಯಾ: ಖಂಡಿತಾ ಇಲ್ಲ! ಯುವಕರು ಕನಿಷ್ಠ ಪಕ್ಷ ಬೇಸಿಕ್‌ ಕಾಳಜಿ ವಹಿಸಿ, ತ್ವಚೆಯ ಆರೈಕೆ ಮಾಡಿದಲ್ಲಿ, ಮುಖವು ಆಕರ್ಷಕವಾಗಿ ಕಾಣಿಸುವುದು. ಮನೆಯಲ್ಲಿ ಸಾಧ್ಯವಾಗದಿದ್ದಲ್ಲಿ ಸಲೂನ್‌ಗಳಲ್ಲಿ ಈ ಸರ್ವೀಸ್‌ ದೊರಕುತ್ತದೆ. ಸದುಪಯೋಗಪಡಿಸಿಕೊಳ್ಳಬಹುದು.

ವಿಶ್ವವಾಣಿ ನ್ಯೂಸ್‌: ನಿಮ್ಮ ಫ್ಯಾಷನ್‌ ಐಕಾನ್‌ ?

ವಿನಯ್‌ ಸಿಂಧ್ಯಾ: ಹೃತಿಕ್‌ ರೋಷನ್‌.

ವಿಶ್ವವಾಣಿ ನ್ಯೂಸ್‌: ಯುವಕರಿಗೆ ನೀವು ನೀಡುವ ಸಿಂಪಲ್‌ ಸಮ್ಮರ್‌ ಟಿಪ್ಸ್‌?

ವಿನಯ್‌ ಸಿಂಧ್ಯಾ:

  • ಪ್ರತಿದಿನ ಕನಿಷ್ಠ 4 ಲೀಟರ್‌ ನೀರು ಕುಡಿಯಲೇ ಬೇಕು. ಜತೆಗೆ ಎಳನೀರು ಸೇವಿಸಿ.
  • ದ್ವಿ ಚಕ್ರ ಚಾಲನೆ ಮಾಡುವಾಗ ಹೆಲ್ಮೆಟ್‌ ಹಾಕಿದಲ್ಲಿ ಮುಖದ ಚರ್ಮ ಟ್ಯಾನ್‌ ಆಗುವುದನ್ನು ತಪ್ಪಿಸಬಹುದು.
  • ಹೊರಗೆ ಹೋಗುವಾಗ ಚರ್ಮಕ್ಕೆ ಸನ್‌ಸ್ಕ್ರೀನ್‌ ಲೇಪಿಸುವುದು ಉತ್ತಮ.
  • ತೀರಾ ಬೆವರುವಿರಾದರೆ ಡಿಯೋಡ್ರೆಂಟ್‌ ಬಳಕೆ ಮಾಡಿ.
  • ಎರಡು ತಿಂಗಳಿಗೊಮ್ಮೆ ಸಲೂನ್‌ನಲ್ಲಿ ಜೆಂಟ್ಸ್‌ ಫೇಶಿಯಲ್‌ ಮಾಡಿಸಿಕೊಳ್ಳಿ.
  • ಮಲಗುವ ಮುನ್ನ ಮುಖ ತೊಳೆಯುವುದನ್ನು ಮರೆಯದಿರಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಟಾಪ್‌ ಲಿಸ್ಟ್‌ಗೆ ಸೇರಿದ ಗ್ಲಾಮರಸ್‌ ಲುಕ್‌ ನೀಡುವ ಬ್ಯಾಕ್‌ಲೆಸ್‌ ಡ್ರೆಸ್‌