#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Promise Finger Rings Fashion 2025: ಸೀಸನ್ ಜ್ಯುವೆಲ್ ಫ್ಯಾಷನ್‌ನಲ್ಲಿ ಪ್ರಾಮಿಸ್ ಫಿಂಗರ್ ರಿಂಗ್ಸ್ ಹಂಗಾಮ

Promise Finger Rings Fashion 2025: ಈ ಸೀಸನ್‌ನಲ್ಲಿ ನಾನಾ ಬಗೆಯ ಪ್ರಾಮಿಸ್ ಫಿಂಗರ್ ರಿಂಗ್‌ಗಳು ಪ್ರೇಮಿಗಳ ಕೈ ಬೆರಳನ್ನು ಅಲಂಕರಿಸುತ್ತಿವೆ. ಪ್ರಾಮಿಸ್ ಡೇ ದಿನಕ್ಕೆ ಮಾತ್ರ ಇವು ಸೀಮಿತವಾಗಿಲ್ಲ, ಬದಲಿಗೆ ಈ ವಾರದ ಜ್ಯುವೆಲ್ ಫ್ಯಾಷನ್ ಕೆಟಗರಿಯಲ್ಲಿ ಇವು ಟ್ರೆಂಡಿಯಾಗಿವೆ. ಯಾವ್ಯಾವ ವಿನ್ಯಾಸದಲ್ಲಿ ಇವು ಲಭ್ಯ? ಇಲ್ಲಿದೆ ಡಿಟೇಲ್ಸ್.

ಸೀಸನ್ ಜ್ಯುವೆಲ್ ಫ್ಯಾಷನ್‌ನಲ್ಲಿ ಪ್ರಾಮಿಸ್ ಫಿಂಗರ್ ರಿಂಗ್ಸ್ ಹಂಗಾಮ

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ವೀಕ್‌ನ ಈ ಸೀಸನ್‌ನಲ್ಲಿ ನಾನಾ ಬಗೆಯ ಪ್ರಾಮಿಸ್ ಫಿಂಗರ್ ರಿಂಗ್‌ಗಳು (Promise Finger Rings Fashion 2025) ಪ್ರೇಮಿಗಳ ಕೈ ಬೆರಳುಗಳನ್ನು ಅಲಂಕರಿಸುತ್ತಿವೆ. ಹೌದು, ಪ್ರಾಮಿಸ್ ಡೇ ದಿನಕ್ಕೆ ಮಾತ್ರ ಇವು ಸೀಮಿತವಾಗಿಲ್ಲ, ಬದಲಿಗೆ ಈ ವಾರದ ಜ್ಯುವೆಲ್ ಫ್ಯಾಷನ್ ಕೆಟಗರಿಯಲ್ಲಿ ಇವು ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ಊಹೆಗೂ ಮೀರಿದ ಡಿಸೈನ್‌ನಲ್ಲಿ ಇವು ಲಗ್ಗೆ ಇಟ್ಟಿವೆ. ಬಂಗಾರೇತರ ಬಂಗಾರದ ಹಾಗೂ ಪ್ಲಾಟಿನಂ ಶೈಲಿಯವು ಸದ್ಯ ಟ್ರೆಂಡಿಯಾಗಿವೆ. ಅವುಗಳಲ್ಲಿ, ಸ್ಟೀಲ್ ಸಿಲ್ವರ್ ಪ್ಲೇಟೆಡ್, ಗೋಲ್ಡ್ ಪ್ಲೇಟೆಡ್, ಫ್ಯಾಷನ್ ಫ್ರಿಲ್ ಮೆಟಲ್ ರಿಂಗ್ಸ್, ಸಿಲ್ವರ್ ಕಪಲ್ ರಿಂಗ್ಸ್ ನಿಂದಿಡಿದು ಬಂಗಾರದ ಫ್ಯಾನ್ಸಿ ಪ್ರಾಮಿಸ್ ಕೈ ಉಂಗುರಗಳು, ಪ್ಲಾಟಿನಂನವು, ಅಮೆರಿಕನ್ ಡೈಮಂಡ್‌ನವು ಸೊಲಿಟೈರ್ ಡೈಮಂಡ್ ರಿಂಗ್‌ಗಳು ಈ ಸೀಸನ್‌ನ ಜ್ಯುವೆಲರಿ ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿವೆ. ಪ್ರೇಮಿಗಳ ಸ್ಟೇಟಸ್‌ಗೆ ಅನುಗುಣವಾಗಿ ಇವು ಸಂಗಾತಿಗಳ ಕೈ ಸಿಂಗರಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

2

ಏನಿದು ಪ್ರಾಮಿಸ್ ಫಿಂಗರ್ ರಿಂಗ್ಸ್?

ಅಂದಹಾಗೆ, ಯಾವುದೇ ಆಫಿಶಿಯಲ್ ಕಮಿಟ್ಮೆಂಟ್‌ಗೊಳಗಾಗದೇ ಇಷ್ಟಪಟ್ಟು ನೀಡುವ ಕೈ ಉಂಗುರಗಳಿವು. ಹಾಗೆಂದು ಇವೇನೂ ಎಂಗೇಜ್ಮೆಂಟ್ ರಿಂಗ್ಗಳಲ್ಲ! ಆದರೆ, ನೋಡಲು ಹಾಗೆಯೇ ಕಾಣಿಸುತ್ತವೆ. ಇವು ಸಂಗಾತಿ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್.

3

ಪ್ರೀತಿಯ ಧ್ಯೋತಕವಾಗಿರುವ ಫಿಂಗರ್ ರಿಂಗ್‌ಗಳಿವು

ಇವು ಸದಾ ಪ್ರೇಮಿಗಳ ಕೈಗಳಲ್ಲಿಯೇ ಇರುವುದರಿಂದ ಗಿಫ್ಟ್ ನೀಡಿದವರಿಗೂ ಖುಷಿಯಾಗುತ್ತದೆ. ಇವನ್ನು ಪ್ರಿ-ಎಂಗೇಜ್ಮೆಂಟ್ ಫಿಂಗರ್ ರಿಂಗ್‌ಗಳೆಂದು ಕರೆಬಹುದು ಎಂಬುದು ಜ್ಯುವೆಲ್ ಡಿಸೈನರ್ ಅಭಿಪ್ರಾಯ.

4

ಪ್ರಾಮಿಸ್ ರಿಂಗ್ ಪ್ರಿಯರಿಗೆ ಟಿಪ್ಸ್

  • ನಾನಾ ಮೆಟಲ್‌ಗಳಲ್ಲಿ ಇವು ದೊರೆಯುತ್ತವೆ.
  • ಕಪಲ್ ರಿಂಗ್ ಡಿಸೈನ್‌ನಲ್ಲೂ ಸಿಗುತ್ತವೆ.
  • ಯೂನಿಸೆಕ್ಸ್ ಡಿಸೈನ್‌ನವು ಟ್ರೆಂಡಿಯಾಗಿದೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Valentines Day Nail Art 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!