ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Silk Saree Styling: ಮಾನಿನಿಯರ ಹಬ್ಬದ ರೇಷ್ಮೆ ಸೀರೆಯ ಸ್ಟೈಲಿಂಗ್‌ಗೆ 5 ಸಿಂಪಲ್‌ ಐಡಿಯಾ

Silk Saree Styling: ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುವ ರೇಷ್ಮೆ ಸೀರೆಗಳಲ್ಲಿ ಮಾನಿನಿಯರು ಆಕರ್ಷಕವಾಗಿ ಕಾಣಿಸುವಂತೆ ಸ್ಟೈಲಿಂಗ್‌ ಮಾಡುವುದು ಹೇಗೆ? ಯಾವ ಟಿಪ್ಸ್‌ ಫಾಲೋ ಮಾಡಿದರೆ ಉತ್ತಮ? ಎಂಬುದನ್ನು ಎಕ್ಸ್‌ಪರ್ಟ್ಸ್‌ ಸಿಂಪಲ್ಲಾಗಿ ತಿಳಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

ಮಾನಿನಿಯರ ಹಬ್ಬದ ರೇಷ್ಮೆ ಸೀರೆಯ ಸ್ಟೈಲಿಂಗ್‌ಗೆ 5 ಸಿಂಪಲ್‌ ಐಡಿಯಾ

ಚಿತ್ರಕೃಪೆ: ವೀರು ಫೋಟೋಗ್ರಾಫಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುವ ರೇಷ್ಮೆ ಸೀರೆಗಳಲ್ಲಿ (Silk Saree Styling) ಮಾನಿನಿಯರು ಆಕರ್ಷಕವಾಗಿ ಕಾಣಿಸುವುದು ತೀರಾ ಸುಲಭ. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ ಐಡಿಯಾಗಳನ್ನು ಫಾಲೋ ಮಾಡಬೇಕು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.‌ ಈ ಕುರಿತಂತೆ ಒಂದಿಷ್ಟು ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ. ನೀವು ಧರಿಸುತ್ತಿರುವ ರೇಷ್ಮೆ ಸೀರೆ ಯಾವ ಡಿಸೈನ್‌ ಹೊಂದಿದೆ? ಯಾವ ಬಗೆಯ ಬಾರ್ಡರ್‌ ಹೊಂದಿದೆ? ಸಾದಾ ಇದೆಯಾ ಅಥವಾ ಪ್ರಿಂಟ್ಸ್‌ ಹೊಂದಿದೆಯಾ! ಹ್ಯಾಂಡ್‌ವರ್ಕ್‌ ಮಾಡಲಾಗಿದೆಯಾ, ಇಲ್ಲವೇ ಸಿಂಪಲ್‌ ರೇಷ್ಮೆ ಸೀರೆಯಾ ಎಂಬುದನ್ನು ಮನಗಂಡು ಸ್ಟೈಲಿಂಗ್‌ ಡಿಸೈಡ್‌ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಚಿತ್ರಗಳು: ಸುಚಿತ್ರಾ, ಮಿಸೆಸ್‌ ಸೌತ್‌ ಇಂಡಿಯಾ (ಐಎಮ್‌ಪಿ) 2022

ರೇಷ್ಮೆ ಸೀರೆಯ ಬ್ಲೌಸ್‌ ಮ್ಯಾಚಿಂಗ್‌ ಹೇಗೆ?

ನೀವು ಸೀರೆಗೆ ಹೊಸ ಲುಕ್‌ ನೀಡಲು ಬಯಸುತ್ತಿರುವಿರಾದಲ್ಲಿ ಕಾಂಟ್ರಾಸ್ಟ್‌ ಬ್ಲೌಸ್‌ ಮ್ಯಾಚ್‌ ಮಾಡಿ. ಸಾದಾ ರೇಷ್ಮೆ ಸೀರೆಯಾದಲ್ಲಿ, ಡಿಸೈನರ್‌ ಹ್ಯಾಂಡ್‌ವರ್ಕ್‌ ಅಥವಾ ಡಿಸೈನರ್‌ ಬ್ಲೌಸ್‌ ಮ್ಯಾಚ್‌ ಮಾಡಿ. ಗ್ರ್ಯಾಂಡ್‌ ಸೀರೆಯಾದಲ್ಲಿ ಆದಷ್ಟೂ ಸಿಂಪಲ್‌ ಬ್ಲೌಸ್‌ ಧರಿಸಿ. ಇನ್ನು, ಗ್ಲಾಮರಸ್‌ ಲುಕ್‌ ಬೇಕಾದಲ್ಲಿ ಸಮ್ಮರ್‌ ಬ್ಲೌಸ್‌ ಧರಿಸಿ. ಸ್ಲಿವ್‌ಲೆಸ್‌ ಹಾಗೂ ಹಾಲ್ಟರ್‌ ನೆಕ್‌ಲೈನ್‌ನದ್ದನ್ನು ಧರಿಸಿ.

ರೇಷ್ಮೆ ಸೀರೆಯ ಮೇಕಪ್‌ ಮೇಕೋವರ್‌

ರೇಷ್ಮೆ ಸೀರೆಗೆ ಮೇಕಪ್‌ ಮಾಡುವಾಗ ನೀವು ಯಾವ ಬಗೆಯ ಸೀರೆ ಧರಿಸಿದ್ದೀರಾ? ಎಂಬುದನ್ನು ಗಮನಿಸಬೇಕಾಗುತ್ತದೆ. ಇನ್ನು ಗ್ರ್ಯಾಂಡ್‌ ಲುಕ್‌ಗಾಗಿ ಆದಷ್ಟೂ ಮೇಕಪ್‌ ಹೊಂದುವಂತಿರಲಿ. ಕಾಡಿಗೆ, ಐ ಲೈನರ್‌ ಹಾಗೂ ಬಿಂದಿ ನಿಮ್ಮ ಲುಕ್ಕನ್ನು ಇಮ್ಮಡಿಗೊಳಿಸುವುದು. ಸ್ಮೋಕಿ ಮೇಕಪ್‌ ಅವಾಯ್ಡ್‌ ಮಾಡಿ. ಟ್ರೆಡಿಷನಲ್‌ ಲುಕ್‌ಗೆ ಆದ್ಯತೆ ನೀಡಿ.

8

ರೇಷ್ಮೆ ಸೀರೆಯ ಹೇರ್‌ಸ್ಟೈಲ್‌ ಆಕರ್ಷಕವಾಗಿರಲಿ

ರೇಷ್ಮೆ ಸೀರೆ ಉಟ್ಟಾಗ ನಿಮ್ಮ ಹೇರ್‌ಸ್ಟೈಲ್‌ ನಿಮ್ಮ ಮುಖಕ್ಕೆ ಹೊಂದುವಂತಿರಬೇಕು. ಟ್ರೆಡಿಷನಲ್‌ ಬೇಕಿದ್ದಲ್ಲಿ ಜಡೆ ಹೆಣೆದು ಡಿಸೈನ್‌ ಮಾಡಿ. ಮಾಡರ್ನ್‌ ಲುಕ್‌ ಬೇಕಿದ್ದಲ್ಲಿ ಫ್ರೀ ಹೇರ್‌ ಅಥವಾ ಮೆಸ್ಸಿ ಹೇರ್‌ ಸ್ಟೈಲ್‌ನ ಯಾವುದಾದರೂ ಡಿಸೈನ್‌ ಮಾಡಿ. ಕರ್ಲ್‌ ಮಾಡಿಸಿದಲ್ಲೂ ಆಕರ್ಷಕವಾಗಿ ಕಾಣಿಸುವುದು. ನಿಮ್ಮ ಮುಖಚರ್ಯೆಯೇ ಬದಲಾಗುವುದು.

ರೇಷ್ಮೆ ಸೀರೆಯ ಜ್ಯುವೆಲರಿ ಹೀಗಿರಲಿ

ಹಬ್ಬದಂದು ಉಡುವ ರೇಷ್ಮೆ ಸೀರೆಯ ಜ್ಯುವೆಲರಿಗಳು ಆಂಟಿಕ್‌ ಅಥವಾ ಟ್ರೆಡಿಷನಲ್‌ ಇದ್ದಲ್ಲಿ ಫೆಸ್ಟಿವ್‌ ಲುಕ್‌ ನಿಮ್ಮದಾಗುವುದು. ಹಾರ, ನೆಕ್ಲೇಸ್‌, ಕಡ, ಇಯರಿಂಗ್ಸ್‌, ಮಾಂಗ್‌ಟೀಕಾ, ಮಾಟಿ, ಕಮರ್‌ಬಾಂದ್‌ ನಿಮ್ಮ ರೇಷ್ಮೆ ಸೀರೆಯ ಲುಕ್‌ ಅನ್ನು ಮತ್ತಷ್ಟು ಸುಂದರವಾಗಿಸುವುದು. ನೋಡಲು ದೇವತೆಯಂತೆ ಕಾಣಿಸುವಿರಿ ಎನ್ನುತ್ತಾರೆ ಆದ್ಯಾ ಡಿಸೈನರ್‌ ಸ್ಟುಡಿಯೋದ ಡಿಸೈನರ್‌ ಪೂನಮ್‌.

ಈ ಸುದ್ದಿಯನ್ನೂ ಓದಿ | Ugadi Fashion: ಯುಗಾದಿ ಹಬ್ಬದ ಸಂಭ್ರಮಕ್ಕೆ ವೈವಿಧ್ಯಮಯ ರೇಷ್ಮೆ ಉಡುಗೆಗಳ ಸಾಥ್‌

ಒಟ್ಟಿನಲ್ಲಿ, ಹಬ್ಬದ ದಿನದಂದು ಒಂದಿಷ್ಟು ಸಿಂಪಲ್‌ ಮೇಕೋವರ್‌ ಐಡಿಯಾಗಳನ್ನು ಪಾಲಿಸಿದಲ್ಲಿ, ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ! ಎನ್ನುತ್ತಾರೆ ಮಿಸೆಸ್‌ ಸೌತ್‌ ಇಂಡಿಯಾ (ಐಎಮ್‌ಪಿ) ಸುಚಿತ್ರಾ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)