Sheer Fashion: ಬೇಸಿಗೆಯಲ್ಲಿ ಶೀರ್ ಫ್ಯಾಷನ್ ವೇರ್ಸ್ ಹಂಗಾಮ
Sheer Fashion: ಪಾಶ್ಚಿಮಾತ್ಯ ಡಿಸೈನರ್‌ಗಳಿಂದ ಅಮದಾದ ಶೀರ್ ಔಟ್‌ಫಿಟ್ ಫ್ಯಾಷನ್ ಇಂದು ದೇಸಿ ಉಡುಪಿನೊಂದಿಗೆ ಸೇರಿ ಹೋಗಿದ್ದು, ಎಲ್ಲಾ ಬಗೆಯ ಡ್ರೆಸ್ ಡಿಸೈನ್‌ಗಳಲ್ಲೂ ನುಸುಳತೊಡಗಿದೆ. ಏನಿದು ಶೀರ್ ಫ್ಯಾಷನ್? ಫ್ಯಾಷನ್ ಎಕ್ಸ್‌ಪರ್ಟ್ಸ್ ಸಿಂಪಲ್ಲಾಗಿ ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾಶ್ಚಿಮಾತ್ಯ ಉಡುಪುಗಳಿಗೆ ಮಾತ್ರ ಮೀಸಲಾಗಿದ್ದ ಶೀರ್ಸ್ ಫ್ಯಾಷನ್ (Sheer Fashion) ಇದೀಗ ಕೊಂಚ ರೂಪ ಬದಲಿಸಿಕೊಂಡು, ಇಂಡಿಯನ್ ಡ್ರೆಸ್ ಡಿಸೈನ್‌ಗಳಲ್ಲೂ ಕಾಣಿಸಿಕೊಳ್ಳತೊಡಗಿದೆ. ಸಿಲ್ಕ್, ಕ್ರೇಪ್, ಜಾರ್ಜೆಟ್, ಶಿಫಾನ್ ಹೀಗೆ ಎಲ್ಲಾ ಬಗೆಯ ಮೇಟಿರಿಯಲ್‌ನ ಶಾರ್ಟ್ ಡ್ರೆಸ್, ಲಾಂಗ್ ಟಾಪ್ ಹಾಗೂ ಸಲ್ವಾರ್ ಟಾಪ್‌ನ ಡಿಸೈನರ್‌ವೇರ್‌ನಲ್ಲಿ ದೊರೆಯತೊಡಗಿದೆ. ಸಿಂಪಲ್ ಟಾಪ್ ಸೈಡ್‌ನಲ್ಲಿ, ಸ್ಲೀಕ್ ಕಟ್‌ನ ಗೌನ್‌ನಲ್ಲಿ, ಕ್ಲಾಸಿಕ್ ಲುಕ್ ನೀಡುವ ಫ್ರಾಕ್ ಹಾಗೂ ಫ್ಲೋಟಿ ಟಾಪ್‌ಗಳ ಸ್ಲೀವ್‌ನಲ್ಲಿ, ವಿಟೆಂಜ್ ಶೈಲಿಯ ಮ್ಯಾಕ್ಸಿ ಹಾಗೂ ಸಿಂಗಲ್ ಪೀಸ್ ಲಾಂಗ್ ಸ್ಕರ್ಟ್‌ನಲ್ಲಿ ಶೀರ್ಸ್ ಸ್ಟೈಲ್ ಟ್ರೆಂಡಿಯಾಗಿದೆ.

ಬೇಸಿಗೆಯ ಲೇಯರ್ ಲುಕ್‌ಗೆ ಸಾಥ್
ಫ್ಯಾಷನಿಸ್ಟಾ ಜಾನ್ ಹೇಳುವಂತೆ ಬಗೆಬಗೆ ವಿನ್ಯಾಸದ ಶೀರ್ಸ್ ಫ್ಯಾಷನ್ ಟಾಪ್ ಹಾಗೂ ಫ್ರಾಕ್‌ಗಳು ಸೀದಾ-ಸದಾ ಡಿಸೈನ್‌ನಲ್ಲಿ, ಬಗೆಬಗೆಯ ನೆಕ್‌ಲೈನ್‌ಗಳಲ್ಲಿ, ವೈವಿಧ್ಯಮಯ ಸ್ಲೀವ್‌ಗಳಲ್ಲಿ ಡಾರ್ಕ್-ಲೈಟ್ ಶೇಡ್ಸ್‌ನಲ್ಲಿ ಫ್ಯಾಷನ್ ಲೋಕದ ಬಾಗಿಲು ತಟ್ಟಿದೆ. ಯಾವುದೇ ಬಗೆಯ ಪ್ಯಾಂಟ್ ಮೇಲೂ ಧರಿಸಬಹುದಾದ ಸಿಂಪಲ್ ಹಾಗೂ ಡಿಸೈನರ್ ನೆಕ್‌ಲೈನ್ ಇರುವ ಶೀರ್ಸ್ ಟಾಪ್ ಬೇಸಿಗೆಯ ಲೇಯರ್ ಲುಕ್‌ನ ಇಲ್ಯೂಷನ್ ಕ್ರಿಯೆಟ್ ಮಾಡುತ್ತದಂತೆ. ಇಂದು ಶೀರ್ಸ್ ಹೆಸರಿನ ವಿನ್ಯಾಸದ ಟಾಪ್ ಹಾಗೂ ಕುರ್ತಾಗಳು ಯಾವ ಮಟ್ಟಿಗೆ ಜನಪ್ರಿಯಗೊಂಡಿದೆ ಅಂದರೆ, ಎಲ್ಲಾ ವಯಸ್ಸಿನ ಮಾನಿನಿಯರಿಗೂ ಇಷ್ಟವಾಗತೊಡಗಿದೆ.

ಆಕರ್ಷಕ ಶೀರ್ಸ್ ಲುಕ್
ಫಂಕಿ ಫಾರ್ಮಲ್ಸ್ ಸ್ಟೈಲ್ ಧ್ಯೋತಕವಾಗಿರುವ ಇವು ಮೊದಮೊದಲಿಗೆ ವೆಸ್ಟರ್ನ್ ಫಾರ್ಮಲ್ ಸ್ಟೈಲಿಶ್ ಡ್ರೆಸ್ ಲಿಸ್ಟ್‌ಗೆ ಎಂಟ್ರಿ ಪಡೆದಿದ್ದವು. ಮೊದಲೆಲ್ಲಾ ಶೀರ್ಸ್ ಶೈಲಿ ಹೆಚ್ಚು ಪ್ರಚಲಿತದಲ್ಲಿರಲಿಲ್ಲ. ಇದೀಗ ಟಿಪಿಕಲ್ ಫಾರ್ಮಲ್ ಧರಿಸುವ ಮಾನಿನಿಯರಿಗೂ ಸೂಟ್ ಆಗುವಂತೆ ವಿನ್ಯಾಸಗೊಂಡಿವೆ. ಪುಶ್ ಬ್ಯಾಕ್, ಲೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್, ಇತರೆ ಯಾವುದೇ ಶೈಲಿಯ ಪ್ಯಾಂಟ್ ಜತೆ ಧರಿಸಬಹುದಾಗಿದೆ. ಅಚ್ಚರಿಯ ವಿಚಾರವೆಂದರೆ ಇವು ಸಲ್ವಾರ್‌ಗೂ ಶಿಫ್ಟ್ ಆಗಿವೆ.

ಶೀರ್ಸ್ ಸ್ಟೈಲಿಂಗ್ ಟಿಪ್ಸ್
ಸಂಪೂರ್ಣ ವೆಸ್ಟರ್ನ್ ಫಾರ್ಮಲ್ಸ್ ಲುಕ್ ನೀಡುವ ಶೀರ್ಸ್ ಶೈಲಿಯ ಉಡುಪುಗಳನ್ನು ಸರಿಯಾದ ಪ್ಯಾಂಟ್‌ಗಳೊಂದಿಗೆ ಮ್ಯಾಚ್ ಮಾಡಿದರೆ ಉತ್ತಮ. ಶೀರ್ಸ್ ಡಿಸೈನ್ ಫ್ಯಾಷನ್‌ನಲ್ಲಿ ಸಾಕಷ್ಟು ವೆರೈಟಿಗಳಿವೆ. ಡಿಸೈನ್ಸ್‌ಗಂತೂ ಲೆಕ್ಕವೇ ಇಲ್ಲ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಅಂದಹಾಗೆ, ಈ ಶೀರ್ಸ್ ಟಾಪ್‌ಗಳು ವಿಚಿತ್ರ ಕಟ್ ಹೊಂದಿರುತ್ತವೆ. ಕೆಲವು ಸಿಂಪಲ್ ಆಗಿ ಕಂಡರೂ ವಿಭಿನ್ನ ಹೊಲಿಗೆ ಹೊಂದಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್ ವಿದ್ಯಾ. ರಾಯಲ್ ಬ್ಲ್ಯೂ, ಚಾಕೋಲೇಟ್, ಟಾಫಿ, ಬ್ಲ್ಯಾಕ್, ಮಜೆಂತಾ, ತಿಳಿ ಗುಲಾಬಿ, ತಿಳಿ ಹಳದಿ, ಕೆಂಪು, ನೀಲಿ, ಹಸಿರು, ರೇಡಿಯಂ, ಕೇಸರಿ ಬಣ್ಣಗಳು ಶೀರ್ಸ್ ವಿನ್ಯಾಸದ ಟ್ರೆಂಡಿ ಕಲರ್ಸ್.
ನಿಮಗಿದು ಗೊತ್ತೇ?
ಫ್ಯಾಷನಿಸ್ಟಾಗಳ ಪ್ರಕಾರ, ನೀವು ಧರಿಸುವ ಶೀರ್ಸ್ ನಿಮ್ಮ ಮೈಮಾಟ ಹಾಗೂ ವ್ಯಕ್ತಿತ್ವವನ್ನೇ ಬದಲಿಸಬಲ್ಲವು. ಹಾಗಾಗಿ ಧರಿಸುವಾಗ ನಿಮಗೆ ಹೊಂದುವಂತವನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ತೆಳ್ಳಗೆ ಬಳುಕುವಂತಹ ದೇಹ ಸೌಂದರ್ಯ ಹೊಂದಿರುವವರಿಗೆ ಎಲ್ಲಾ ಬಗೆಯ ಶೀರ್ಸ್ ಸೂಟ್ ಆಗುತ್ತವೆ. ಕಟ್ಟಮಸ್ತಾಗಿ ಉದ್ದಗಿರುವವರಿಗೆ ಕ್ರೆಪ್ ಹಾಗೂ ಜಾರ್ಜೆಟ್‌ನ ನೆಟ್ಟೆಡ್ ಶೀರ್ಸ್ ಸೂಕ್ತ. ದಪ್ಪಗೆ ಹಾಗೂ ಕುಳ್ಳಗಿರುವವರಿಗೆ ಸ್ಟ್ರೈಪ್ ಇರುವಂಥವು ಹಾಗೂ ಸಾದಾ ತಿಳಿ ಬಣ್ಣದವು ಹೊಂದಿಕೆಯಾಗುತ್ತವೆ. ಕಪ್ಪು ವರ್ಣದವರು ಆದಷ್ಟೂ ಮಿಶ್ರ ಬಣ್ಣ ಹಾಗೂ ಕಾಂಟ್ರಾಸ್ಟ್ ಬಣ್ಣವನ್ನು ಬಳಸುವುದು ಒಳಿತು. ಶ್ವೇತ ಹಾಗೂ ಗೋಧಿ ವರ್ಣದವರಿಗೂ ಎಲ್ಲ ಬಣ್ಣಗಳೂ ಓಕೆ.
ಈ ಸುದ್ದಿಯನ್ನೂ ಓದಿ | Statement Belt Fashion: ಸಿಂಪಲ್ ಉಡುಗೆಗಳನ್ನು ಆಕರ್ಷಕವಾಗಿಸುವ ಸ್ಟೇಟ್‌ಮೆಂಟ್ ಬೆಲ್ಟ್ಸ್
ಶೀರ್ಸ್ ಪ್ರಿಯರಿಗೆ ತಿಳಿದಿರಬೇಕಾದ್ದು ...
- ಪಾರ್ಟಿಗಳಲ್ಲಿ ಇವಕ್ಕೆ ಫುಲ್ ಮಾರ್ಕ್ಸ್.
- ಇವಕ್ಕೆ ಡಾರ್ಕ್ ಆಕ್ಸೆಸರೀಸ್ ಧರಿಸಿ.
- ಪ್ರಿಂಟೆಡ್ ಶೀರ್ಸ್‌ವೇರ್ ಟ್ರೆಂಡ್‌ನಲ್ಲಿಲ್ಲ.
- ಫಿಟ್ಟಿಂಗ್ ಇದ್ದರೇ ಮಾತ್ರ ಸೂಟ್ ಆಗುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)