Star Cannes Fashion: ಮೆನ್ಸ್ ಫ್ಯಾಷನ್ ಟಾಪ್ ಲಿಸ್ಟ್ಗೆ ಎಂಟ್ರಿ ಕೊಟ್ಟ ಇಶಾನ್ ಕಟ್ಟರ್ ವೆಲ್ವೆಟ್ ಬಂದ್ಗಾಲ
Ishaan Khatter: ಕಾನ್ಸ್ನಲ್ಲಿ ಬಾಲಿವುಡ್ನ ಯುವ ನಟ ಇಶಾನ್ ಕಟ್ಟರ್ ಧರಿಸಿದ್ದ, ವೆಲ್ವೆಟ್ನ ಬಂದ್ಗಾಲ ಡಿಸೈನರ್ವೇರ್ ಇದೀಗ ಮೆನ್ಸ್ ಫ್ಯಾಷನ್ ಟಾಪ್ ಲಿಸ್ಟ್ಗೆ ಎಂಟ್ರಿ ನೀಡಿದೆ. ನೋಡಲು ಕ್ಲಾಸಿ ಲುಕ್ ನೀಡುವ ಈ ಔಟ್ಫಿಟ್ ಇದೀಗ ಪುರುಷರನ್ನು ಆಕರ್ಷಿಸಿದ್ದು, ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

ಚಿತ್ರಗಳು: ಇಶಾನ್ ಕಟ್ಟರ್, ಬಾಲಿವುಡ್ ನಟ.


ಟ್ರೆಂಡ್ ಸೆಟ್
ಕಾನ್ಸ್ ಫೆಸ್ಟಿವಲ್ನಲ್ಲಿ ಬಾಲಿವುಡ್ ನಟ ಇಶಾನ್ ಕಟ್ಟರ್ ಧರಿಸಿದ್ದ ವೆಲ್ವೆಟ್ ಬಂದ್ಗಾಲ ಇದೀಗ ಮೆನ್ಸ್ ಫ್ಯಾಷನ್ ಟಾಪ್ ಲಿಸ್ಟ್ಗೆ ಸೇರಿಕೊಂಡಿದೆ. ಕಾನ್ಸ್ ಫೆಸ್ಟಿವಲ್ನಲ್ಲಿ ಅನಾವರಣಗೊಳ್ಳುವ ಫ್ಯಾಷನ್ವೇರ್ಗಳು ಜನಪ್ರಿಯವಾದಲ್ಲಿ, ಅವು ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸುವುದರೊಂದಿಗೆ ಮಾರುಕಟ್ಟೆಗೂ ಎಂಟ್ರಿ ನೀಡುತ್ತವೆ. ಅಂತಹ ಔಟ್ಫಿಟ್ಗಳ ಲಿಸ್ಟ್ನಲ್ಲಿ ಇದೀಗ, ಬಾಲಿವುಡ್ನ ಯುವ ನಟ ಇಶಾನ್ ಕಟ್ಟರ್ ಧರಿಸಿದ್ದ ವೆಲ್ವೆಟ್ನ ಬಂದ್ಗಾಲಗೆ ಈ ಅವಕಾಶ ದೊರಕಿದೆ. ಅಲ್ಲದೇ, ಮುಂಬರುವ ಸೀಸನ್ನ ಮೆನ್ಸ್ ಫ್ಯಾಷನ್ನಲ್ಲಿ ಟ್ರೆಂಡ್ ಸೆಟ್ ಮಾಡಲು ಸಜ್ಜಾಗಿದೆ.

ಇಶಾನ್ ಫ್ಯಾಷನ್ ಲವ್
ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಬಾಲಿವುಡ್ನಲ್ಲಿ ಕಾಣಿಸಿಕೊಂಡಿರುವ ಇಶಾನ್ ಕಟ್ಟರ್, ನಟ ಶಾಹಿದ್ ಕಪೂರ್ನ ಸಹೋದರ. ಇತ್ತೀಚೆಗೆ ʼರಾಯಲ್ಸ್ʼ ಎಂಬ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ. ಇವುಗಳೆಲ್ಲದರ ಮಧ್ಯೆ ಆಗಾಗ್ಗೆ ಫ್ಯಾಷನ್ ವೀಕ್ ಹಾಗೂ ರನ್ ವೇ ಫ್ಯಾಷನ್ ಶೋಗಳಲ್ಲೂ ಶೋ ಸ್ಟಾಪರ್ ಆಗಿ ಕಾಣಿಸಿಕೊಳ್ಳುವ ಇಶಾನ್, ಕಾನ್ಸ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲೂ ಹೆಜ್ಜೆ ಹಾಕಿದ್ದಾರೆ.

ಇಶಾನ್ ಕಟ್ಟರ್ ವೆಲ್ವೆಟ್ ಬಂದ್ಗಾಲ ವಿಶೇಷತೆ
ಅಂದಹಾಗೆ, ನಟ ಇಶಾನ್ ಧರಿಸಿರುವ ವೆಲ್ವೆಟ್ ಬಂದ್ಗಾಲ, ಡೀಪ್ ವೈನ್ ರೆಡ್ ಕಲರ್ನದ್ದಾಗಿದೆ. ಅವರಿಗೆ ಕ್ಲಾಸಿ ಲುಕ್ ಕಲ್ಪಿಸಿದೆ. ಡಿಸೈನರ್ ಗೌರವ್ ಗುಪ್ತಾ ಅವರ ಡಿಸೈನರ್ವೇರ್ ಇದಾಗಿದೆ. ಇನ್ನು, ಬಂದ್ಗಾಲದ ಜಾಕೆಟ್ ಮೇಲೆ ಬ್ಲಾಕ್ ಕಲರ್ನ ಜರ್ದೋಸಿ ಸೆಲ್ಟಿಕ್ ನಾಟ್ ಎಂಬ್ರಾಯ್ಡರಿ ಡಿಸೈನ್ ವಿನ್ಯಾಸಗೊಳಿಸಲಾಗಿದೆ. ಈ ಡಿಸೈನ್ ಭಾರತೀಯ ಮೂಲದ ವಿನ್ಯಾಸಗಾರರ ಕೌಶಲ್ಯತೆಗೆ ಸಾಕ್ಷಿಯಾಗಿದೆ. ಅಲ್ಲದೇ, ಈ ಬಂದ್ಗಾಲದ ಜಾಕೆಟ್ನೊಳಗೆ ಬ್ಲ್ಯಾಕ್ ಕಲರ್ನ ಸಿಲ್ಕ್ ವ್ರಾಪ್ ಶರ್ಟನ್ನು ಇಶಾನ್ ಧರಿಸಿದ್ದು, ಹೊರಗೆ ನೋಡಲು ಕಾಣಿಸದಂತೆ ಧರಿಸಿದ್ದಾರೆ. ಈ ಔಟ್ಫಿಟ್ಟನ್ನು ಮಾರ್ಡನ್ ಹಾಗೂ ಟ್ರೆಡಿಷನಲ್ ಡಿಸೈನ್, ಎರಡನ್ನು ಸಮ್ಮಿಲನಗೊಳಿಸಿ ಸಿದ್ಧಪಡಿಸಲಾಗಿದೆ ಎಂದಿವೆ ಮೂಲಗಳು.

ಇಶಾನ್ಗೆ ಕ್ಲಾಸಿ ಲುಕ್ ನೀಡಿದ ಬಂದ್ಗಾಲ
ನೋಡಲು ಅಷ್ಟಾಗಿ ವಿನ್ಯಾಸಗಳಿಂದ ತುಂಬಿರದ ಈ ವೆಲ್ವೆಟ್ ಬಂದ್ಗಾಲ ನಟ ಇಶಾನ್ಗೆ ಕ್ಲಾಸಿ ಲುಕ್ ನೀಡಿದೆ. ಹಾಗಾಗಿ ಈ ಔಟ್ಫಿಟ್ ಮುಂಬರುವ ಸೀಸನ್ ಮೆನ್ಸ್ ಫ್ಯಾಷನ್ ಲಿಸ್ಟ್ಗೆ ಎಂಟ್ರಿ ನೀಡಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಆಕರ್ಷಕ ಲುಕ್ ನೀಡುವ ಬಂದ್ಗಾಲ
ಕ್ಲಾಸಿ ಲುಕ್ನೊಂದಿಗೆ ಯಂಗ್ ಲುಕ್ ಪಡೆಯಲು ಈ ಔಟ್ಫಿಟ್ ಧರಿಸುವುದು ಹೆಚ್ಚು ಎಂದಿರುವ ಮೆನ್ಸ್ ಸ್ಟೈಲಿಸ್ಟ್ ರಾಯನ್, ಈ ಔಟ್ಫಿಟ್ ಎಲ್ಲ ಬಾಡಿ ಟೈಪ್ ಇರುವ ಪುರುಷರಿಗೂ ಹೊಂದುತ್ತದೆ ಎಂದು ತಿಳಿಸಿದ್ದಾರೆ.