ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಶರ್ಟ್ ಫ್ಲೋರಲ್‌ ಸ್ಕರ್ಟ್ ಸೆಟ್‌ ಮಹಿಮೆ ಅಪಾರ

Shirt Floral Skirt Set: ಶರ್ಟ್ ಫ್ಲೋರಲ್‌ ಸ್ಕರ್ಟ್ ಸೆಟ್‌ಗಳು ಇದೀಗ ಜೆನ್‌ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿವೆ. ಇದ್ಯಾವ ಬಗೆಯ ಔಟ್‌ಫಿಟ್‌? ಏನಿದರ ಸ್ಪೆಷಲಿಟಿ? ಸ್ಟೈಲಿಂಗ್‌ ಹೇಗೆ? ಇಲ್ಲಿದೆ ಡಿಟೇಲ್ಸ್.

ಶರ್ಟ್ ಫ್ಲೋರಲ್‌ ಸ್ಕರ್ಟ್ ಸೆಟ್‌ ಮಹಿಮೆ ಅಪಾರ

ಚಿತ್ರಗಳು: ಸಂಜಾನ ಸಂಘಿ, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶರ್ಟ್ ಫ್ಲೋರಲ್‌ ಸ್ಕರ್ಟ್ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಆಕರ್ಷಿಸಿವೆ. ಹೌದು, ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಇವು ಧರಿಸಿದಾಗ ಉಲ್ಲಾಸವನ್ನು ಹೆಚ್ಚಿಸುತ್ತವೆ.

ಸಂಜನಾ ಸಂಘಿಯ ಫ್ಲೋರಲ್‌ ಸ್ಕರ್ಟ್ ಚಮತ್ಕಾರ

ಬಾಲಿವುಡ್‌ ನಟಿ ಸಂಜನಾ ಸಂಘಿ ಧರಿಸಿದ್ದ ಈ ಅತ್ಯಾಕರ್ಷಕ ಅಲೋರಾ ಶರ್ಟ್ ಹಾಗೂ ಫ್ಲೋರಲ್‌ ಸ್ಕರ್ಟ್ ಸೆಟ್‌ ಈಗಾಗಲೇ ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದು, ಜೆನ್‌ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿದೆ. ಇದಕ್ಕೆ ಕಾರಣ, ಇದರ ಅತ್ಯಾಕರ್ಷಕ ಪ್ರಿಂಟ್ಸ್ ಹಾಗೂ ವಿನ್ಯಾಸ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Shirt Floral skirt

ಟ್ರೆಂಡಿಯಾಗಿರುವ ಫ್ಲೋರಲ್‌ ಸ್ಕರ್ಟ್ ಸೆಟ್‌

ಟುಲಿಪ್‌, ಲಿಲ್ಲಿ, ಸೇವಂತಿ, ಜಾಸ್ಮಿನ್‌, ಗುಲಾಬಿ ಸೇರಿದಂತೆ ದೇಸಿ ಹಾಗೂ ವಿದೇಶಿ ಹೂಗಳ ಚಿತ್ತಾರವಿರುವ ಫ್ಲೋರಲ್‌ ಪ್ರಿಂಟ್ಸ್ ಸ್ಕರ್ಟ್ ಸೆಟ್ ಚಾಲ್ತಿಯಲ್ಲಿವೆ. ಅದರಲ್ಲೂ ಕ್ರೀಮಿಶ್‌ ಅಥವಾ ಆಫ್‌ ವೈಟ್‌ ಶೇಡ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಈ ಶೇಡ್‌ ಮೇಲಿನ ಪ್ರಿಂಟ್ಸ್ ಎದ್ದು ಕಾಣಿಸುತ್ತವೆ ಎಂಬ ಕಾರಣಕ್ಕೆ ಈ ವಿನ್ಯಾಸದವು ಹೆಚ್ಚು ಬಿಡುಗಡೆಗೊಂಡಿವೆ ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

New Fashion

ಅಲೋರಾ ಅರ್ಗಾನ್ಜಾ ಶರ್ಟ್ ಸಾಥ್‌

ಇನ್ನು, ಈ ಫ್ಲೋರಲ್‌ ಸ್ಕರಟ್‌ ಜೊತೆಯಲ್ಲಿರುವ ಅಲೋರಾ ಅರ್ಗಾನ್ಜಾ ಕ್ರೀಮ್‌ ಶೇಡ್‌ನ ಫುಲ್‌ ಸ್ಲೀವ್‌ ಶರ್ಟ್ ಸಖತ್‌ ಲುಕ್‌ ನೀಡುವುದರೊಂದಿಗೆ ಕಂಪ್ಲೀಟ್‌ ವೆಸ್ಟೆರ್ನ್‌ ಲುಕ್‌ ನೀಡುತ್ತದೆ. ಅಲ್ಲದೇ, ಎಲಿಗೆಂಟ್‌ ಲುಕ್‌ ಕಲ್ಪಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೈ.

Fashion wears

ಹೀಗಿರಲಿ ಶರ್ಟ್ ಫ್ಲೋರಲ್‌ ಸ್ಕರ್ಟ್ ಸೆಟ್‌ ಸ್ಟೈಲಿಂಗ್‌

  • ಸಿಂಪಲ್‌ ಮೇಕೋವರ್‌ ಸಾಕು!
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
  • ಡ್ರೆಸ್‌ ಹೈಲೈಟ್‌ ಆಗುವುದರಿಂದ ಹೆಚ್ಚು ಮೇಕಪ್‌ ಬೇಕಾಗುವುದಿಲ್ಲ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)