Gen G Fashion 2026: ಪಲಕ್ ತಿವಾರಿಯ ಜೆನ್ ಜಿ ಸ್ಟ್ರೀಟ್ ಸ್ಟೈಲ್ ಲುಕ್ಗೆ 5 ಸಿಂಪಲ್ ಟಿಪ್ಸ್
Gen G Street Style Look: ನಟಿ ಪಲಕ್ ತಿವಾರಿಯ ಜೆನ್ ಜಿ ಸ್ಟ್ರೀಟ್ ಸ್ಟೈಲ್ ಲುಕ್ ಸದ್ಯ ಟೀನೇಜ್ ಹುಡುಗಿಯರನ್ನು ಸಮ್ಮೋಹನಗೊಳಿಸಿದೆ. ಹಾಗಾದಲ್ಲಿ ಇವರಂತೆಯೇ ಕಾಣಿಸಿಕೊಳ್ಳುವುದು ಹೇಗೆ? ಈ ಕುರಿತು 5 ಸಿಂಪಲ್ ಟಿಪ್ಸ್.
ಚಿತ್ರಗಳು: ಪಲಕ್ ತಿವಾರಿ, ಬಾಲಿವುಡ್ ನಟಿ -
ಬಾಲಿವುಡ್ ನಟಿ ಪಲಕ್ ತಿವಾರಿಯ ಜೆನ್ ಜಿ ಸ್ಟ್ರೀಟ್ ಸ್ಟೈಲ್ ಸದ್ಯ ಟೀನೇಜ್ ಹುಡುಗಿಯರ ಮನ ಗೆದ್ದಿದೆ. ಪರಿಣಾಮ, ಸಾಕಷ್ಟು ಕಾಲೇಜು ಹಾಗೂ ಟೀನೇಜ್ ಹುಡುಗಿಯರು ಅವರಂತೆಯೇ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ. ಅಂತಹವರಿಗಾಗಿ ಸ್ಟೈಲಿಸ್ಟ್ಗಳು 5 ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಸ್ಟ್ರೀಟ್ ಸ್ಟೈಲ್ಗೆ ಸಾಥ್ ನೀಡುವ ಔಟ್ಫಿಟ್
ಮೊದಲಿಗೆ ಸ್ಟ್ರೀಟ್ ಸ್ಟೈಲ್ಗಾಗಿ ಧರಿಸುವ ಔಟ್ಫಿಟ್ ಸಿಂಪಲ್ ಹಾಗೂ ಕಂಫರ್ಟಬಲ್ ಆಗಿರಬೇಕು. ಅದು ಜೀನ್ಸ್ ಪ್ಯಾಂಟ್ ಆಗಬಹುದು ಅಥವಾ ಯಾವುದೇ ಡಿಸೈನ್ನ ಕ್ರಾಪ್ ಟಾಪ್ ಆಗಬಹುದು. ಅಂತಹದ್ದನ್ನೇ ಚೂಸ್ ಮಾಡಿ ಧರಿಸಿ.
ಶಿಮ್ಮರ್ ಕ್ರಾಪ್ ಟಾಪ್-ಡೆನಿಮ್ ಬ್ಯಾಗಿ ಪ್ಯಾಂಟ್ ಆಯ್ಕೆ
ಥೇಟ್ ಪಲಕ್ ತಿವಾರಿಯಂತೆ ಸ್ಟ್ರೀಟ್ ಸ್ಟೈಲ್ನಲ್ಲಿ ಕಾಣಿಸಿಕೊಳ್ಳ ಬೇಕಾದಲ್ಲಿ, ಅವರು ಧರಿಸಿರುವಂತಹ ಶಿಮ್ಮರ್ ಡಿಸೈನ್ನ ಕ್ರಾಪ್ ಟಾಪನ್ನೇ ಆಯ್ಕೆ ಮಾಡಿ, ಧರಿಸಿ. ಇನ್ನು, ಇದಕ್ಕೆ ಡೆನಿಮ್ ಬ್ಯಾಗಿ ಪ್ಯಾಂಟ್ ಮ್ಯಾಚ್ ಮಾಡಿ, ಧರಿಸಿ.
ಚಂಕಿ ಮಿನಿಮಲ್ ಆಕ್ಸೆಸರೀಸ್
ಅಂದಹಾಗೆ, ನಟಿ ಪಲಕ್ ಕುತ್ತಿಗೆಗೆ ಏನನ್ನೂ ಧರಿಸಿಲ್ಲ, ಬದಲಿಗೆ ಕೈಗಳಿಗೆ ದೊಡ್ಡ ದೊಡ್ಡ ಚಂಕಿ ಡಿಸೈನ್ನ ಕಡಗಗಳನ್ನು ಧರಿಸಿದ್ದಾರೆ ಹಾಗೂ ಕಿವಿಗೆ ಸಿಂಪಲ್ ಸಿಲ್ವರ್ ಜ್ಯುವೆಲರಿ ಧರಿಸಿದ್ದಾರೆ. ಹಾಗಾಗಿ ನೀವೂ ಕೂಡ ಇಂತಹ ಆಕ್ಸೆಸರೀಸ್ ಆಯ್ಕೆ ಮಾಡಿ. ಆಗ ನೀವು ಧರಿಸಿರುವ ಡ್ರೆಸ್ ಹೈಲೈಟ್ ಆಗುತ್ತದೆ.
ಕಣ್ಣಿಗೆ ಅಕ್ವಾ ಐ ಮೇಕಪ್
ಕಣ್ಣಿಗೆ ಅಕ್ವಾ ಐ ಮೇಕಪ್ ಮಾಡಿರುವುದು ಪಲಕ್ ಅವರ ಇಡೀ ಲುಕ್ಕನ್ನು ವೈಬ್ರೆಂಟ್ ಆಗಿಸಿದೆ. ಇದು ಸ್ಟ್ರೀಟ್ ಲುಕ್ ಜತೆಜತೆಗೆ ಪಾರ್ಟಿ ಲುಕ್ಕನ್ನು ನೀಡಿದೆ. ಸೋ, ನೀವೂ ಕೂಡ ಅಕ್ವಾ ಐ ಮೇಕಪ್ಗೆ ಮೊರೆ ಹೋಗಿ.
ಹೈ ಡೆಫನೇಷನ್ ಮೇಕಪ್
ಸ್ಟ್ರೀಟ್ ಲುಕ್ಗೆ ಸಾಥ್ ನೀಡಿರುವ ಪಲಕ್ ಅವರ ಶೈನಿಂಗ್ ಬ್ಲಷ್ ಹಾಗೂ ಮೇಕಪ್ ಕಾಪಿ ಮಾಡಿ. ಅವಂತೆಯೇ ಬಿಗ್ ರಿಂಗ್ಲೇಟ್ಸ್ ಹೇರ್ಸ್ಟೈಲ್ ಮಾಡಿಕೊಳ್ಳಿ. ಆಗ ನೀವು ಕೂಡ ಥೇಟ್ ಪಲಕ್ ಸ್ಟ್ರೀಟ್ ಲುಕ್ ಪಡೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಿಶಾನ್.