Star Fashion: ಕಣ್ಮನ ಸೆಳೆದ ನಟಿ ಆರಾಧನಾ ರಾಮ್ ಸಮ್ಮರ್ ಲುಕ್
Star Fashion: ಸ್ಯಾಂಡಲ್‌ವುಡ್ ನಟಿ ಆರಾಧನಾ ರಾಮ್ ಅವರ ಇತ್ತೀಚಿನ ಫೋಟೋಶೂಟ್‌ವೊಂದರಲ್ಲಿ ಧರಿಸಿದ್ದ ಸಮ್ಮರ್ ಔಟ್‌ಫಿಟ್, ಟೀನೇಜ್-ಕಾಲೇಜ್ ಹುಡುಗಿಯರನ್ನು ಸೆಳೆದಿದೆ. ಬೇಸಿಗೆಯ ಈ ಸೀಸನ್‌ಗೆ ಪಕ್ಕಾ ಮ್ಯಾಚ್ ಆಗುತ್ತಿರುವ ಅವರ ಔಟ್‌ಫಿಟ್ ಯಾವುದು? ಹುಡುಗಿಯರು ಅವರಂತೆಯೇ ಕಾಣಿಸಲು ಮಾಡಬೇಕಾದ್ದೇನು? ಈ ಕುರಿತಂತೆ ಫ್ಯಾಷನ್ ಎಕ್ಸ್‌ಪರ್ಟ್ಸ್ ಇಲ್ಲಿ ಸಿಂಪಲ್ಲಾಗಿ ತಿಳಿಸಿದ್ದಾರೆ.

ಚಿತ್ರಗಳು: ಆರಾಧನಾ ರಾಮ್, ನಟಿ., ಫೋಟೋಗ್ರಾಫಿ: ಕುನಾಲ್ ಗುಪ್ತಾ

-ಶೀಲಾ ಇ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ನ ಯುವ ನಟಿ ಆರಾಧನಾ ರಾಮ್, ಫ್ಯಾಷನ್ ಫೋಟೋಶೂಟ್‌ವೊಂದರಲ್ಲಿ (Star Fashion) ಧರಿಸಿರುವ ಸಮ್ಮರ್ ಔಟ್‌ಫಿಟ್ ಇದೀಗ ಟೀನೇಜ್-ಕಾಲೇಜ್ ಹುಡುಗಿಯರನ್ನು ಸೆಳೆದಿದೆ. ಈ ಸೀಸನ್‌ನ ಟ್ರೆಂಡ್‌ನಲ್ಲಿರುವ ಈ ಫ್ಯಾಷನ್‌ವೇರ್ ಈಗಾಗಲೇ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಆರಾಧನಾ ಕೂಡ ಸಮ್ಮರ್ ಕ್ರಾಪ್ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿರುವುದು ಫ್ಯಾಷನ್ ಪ್ರಿಯ ಹುಡುಗಿಯರನ್ನು ಆಕರ್ಷಿಸಲು ಕಾರಣವಾಗಿದೆ. ಅಂದಹಾಗೆ, ಆರಾಧನಾ ಹಿರಿಯ ನಟಿ ಮಾಲಾ ಶ್ರೀ ಅವರ ಮಗಳು. ಆಗಾಗ್ಗೆ ಫ್ಯಾಷನ್ ಪ್ರಮೋಷನ್ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುವ ಇವರು, ಈಗಾಗಲೇ ಡಿ ಬಾಸ್ ದರ್ಶನ್ ಅವರೊಂದಿಗೆ ಕಾಟೇರದಲ್ಲಿ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು, ಆಗಾಗ್ಗೆ ಸಾಕಷ್ಟು ಜ್ಯುವೆಲರಿ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುವ ಆರಾಧನಾ, ಇತ್ತೀಚೆಗೆ ಮುಂಬಯಿಯ ಫ್ಯಾಷನ್ ಫೋಟೋಶೂಟ್‌ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟೈಲಿಸ್ಟ್ ನಿಧಿ ಅಗರ್‌ವಾಲ್ ಅವರ ಸ್ಟೈಲಿಂಗ್‌ನಲ್ಲಿ, ಈ ಸೀಸನ್‌ಗೆ ಮ್ಯಾಚ್ ಆಗುವಂತಹ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಔಟ್‌ಫಿಟ್ ಅನ್ನು ಟ್ರೆಂಡಿಯಾಗಿಸಿದ್ದಾರೆ.

ಸಮ್ಮರ್ ಔಟ್‌ಫಿಟ್ ಡಿಟೇಲ್ಸ್
ಇನ್ನು, ನಟಿ ಆರಾಧನಾ ಧರಿಸಿರುವ ಸಮ್ಮರ್ ಔಟ್‌ಫಿಟ್ ಈ ಸೀಸನ್‌ನ ಟಾಪ್ ಫ್ಯಾಷನ್ ಲಿಸ್ಟ್‌ನಲ್ಲಿದೆ. ಮಲ್ಟಿ ಕಲರ್ ಸ್ಟ್ರೈಪ್ಸ್ ಜತೆಗೆ ಕಾಲರ್ ಹೊಂದಿರುವ ಕ್ರಾಪ್ ಟಾಪ್ ಹಾಗೂ ಸಾಲಿಡ್ ಸ್ಕೈ ಬ್ಲ್ಯೂ ಶೇಡ್‌ನ ಮಿನಿ ಸ್ಕರ್ಟ್ ಇದಾಗಿದೆ. ಆನ್‌ಲೈನ್‌ನಲ್ಲಿ ಈ ಔಟ್‌ಫಿಟ್‌ನ ಮಾರಾಟ ಭರಾಟೆ ಹೆಚ್ಚಾಗಿಯೇ ಇದೆ. ಸಮ್ಮರ್ ಕೂಲ್ ಲುಕ್‌ಗೆ ಸಾಥ್ ನೀಡುವ ಈ ಔಟ್‌ಫಿಟ್‌ಗೆ ಮೇಕಪ್ ಕೂಡ ಬೇಕಾಗಿಲ್ಲ! ಆಕ್ಸೆಸರೀಸ್‌ನ ಅಗತ್ಯವೂ ಇಲ್ಲ! ಧರಿಸಿದವರೆಲ್ಲರೂ ಸಖತ್ತಾಗಿ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಆರಾಧನಾ ಕೂಲ್ ಫ್ಯಾಷನ್ ನಿಮ್ಮದಾಗಿಸಿಕೊಳ್ಳಲು 7 ಸಿಂಪಲ್ ಸಲಹೆ
- ಟ್ರೆಂಡಿಯಾಗಿರುವ ಸಮ್ಮರ್ ಔಟ್‌ಫಿಟ್ಸ್ ಆಯ್ಕೆ ಮಾಡಿ.
- ಪಾಸ್ಟೆಲ್ ಅಥವಾ ಸಮ್ಮರ್ ಕಲರ್ಸ್ ಚೂಸ್ ಮಾಡಿ.
- ಆಕ್ಸೆಸರೀಸ್ ಅವಾಯ್ಡ್ ಮಾಡಿ.
- ಹೆವ್ವಿ ಮೇಕಪ್ ಬೇಡವೇ ಬೇಡ.
- ಸ್ಟೈಲಿಂಗ್ ತೀರಾ ಸಿಂಪಲ್ಲಾಗಿರಲಿ.
- ಔಟ್‌ಫಿಟ್‌ಗಳ ಮಿಕ್ಸ್ ಮ್ಯಾಚ್ ಸೂಕ್ತವಾಗಿರಲಿ.
- ಫುಟ್‌ವೇರ್ ಮಾರ್ಡನ್ ಲುಕ್ ನೀಡುವಂತಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Big Jumka Fashion: ಮಾನಿನಿಯರನ್ನು ಸೆಳೆಯುತ್ತಿವೆ ಕಿವಿಗಿಂತ ಅಗಲವಾದ ಬಿಗ್ ಜುಮುಕಿಗಳು