Star Fashion: ರೆಡ್ ಸೀರೆಯಲ್ಲಿ ಮಾಲಾಶ್ರೀ ಮಗಳಂತೆ ಕಾಣಿಸಲು ಇಲ್ಲಿದೆ 5 ಸಿಂಪಲ್ ಐಡಿಯಾ
Star Fashion: ಮಾಲಾಶ್ರೀ ಮಗಳಾದ ನಟಿ ಆರಾಧನಾ, ಸಿಂಪಲ್ ಬಾರ್ಡರ್‌ನ ಸಾದಾ ರೆಡ್ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಂತೆಯೇ ನೀವೂ ಕೂಡ ಅಂದವಾಗಿ ಕಾಣಿಸಬಹುದು. ಅದಕ್ಕಾಗಿ ಒಂದಿಷ್ಟು ಸಿಂಪಲ್ ಐಡಿಯಾಗಳನ್ನು ಫಾಲೋ ಮಾಡಬೇಕು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

ಚಿತ್ರಗಳು: ಆರಾಧನಾ, ನಟಿ., ಚಿತ್ರಕೃಪೆ: ಕುನಾಲ್ ಗುಪ್ತಾ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಲಾಶ್ರೀ ಮಗಳಾದ ನಟಿ ಆರಾಧನಾ ಬಾರ್ಡರ್‌ನ ಸಿಂಪಲ್ ರೆಡ್ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಆರಾಧನಾ ಆಗಾಗ್ಗೆ ಒಂದಲ್ಲ ಒಂದು ಫ್ಯಾಷೆನಬಲ್ ಫೋಟೋಶೂಟ್‌ಗಳಲ್ಲಿ (Star Fashion) ಕಾಣಿಸಿಕೊಳ್ಳುತ್ತಿರುತ್ತಾರೆ. ಕಾಟೇರ ಸಿನಿಮಾದ ಮೂಲಕ ಡಿ ಬಾಸ್ ದರ್ಶನ್ ಅವರೊಂದಿಗೆ ಸಿನಿಮಾ ಲೋಕಕ್ಕೆ ಕಾಲಿಟ್ಟಿರುವ ಆರಾಧನಾ, ಈಗಾಗಲೇ ಸಾಕಷ್ಟು ಜ್ಯುವೆಲ್ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಫ್ಯಾಷೆನಬಲ್ ಫೋಟೊಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಸ್ಟೈಲಿಸ್ಟ್ ನಿಧಿ ಅಗರ್‌ವಾಲ್ ಸ್ಟೈಲಿಂಗ್‌ನಲ್ಲಿ, ಕಾವ್ಯಾ ಶರ್ಮ ಅವರ ಮೇಕಪ್‌ನಲ್ಲಿ ಕಾಣಿಸಿಕೊಂಡಿರುವ ಆರಾಧನರಂತೆ, ಸಾಮಾನ್ಯ ಯುವತಿಯರು ಕಾಣಿಸಿಕೊಳ್ಳಬಹುದು. ಅದಕ್ಕೆ ಒಂದಿಷ್ಟು ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ.

ರೆಡ್ ಶೇಡ್ ಸೀರೆಯ ಆಯ್ಕೆ ಸೂಕ್ತವಾಗಿರಲಿ
ಯಾವುದೇ ರೆಡ್ ಸೀರೆ ಆಯ್ಕೆ ಮಾಡುವಾಗ ಆ ಶೇಡ್ ನಿಮ್ಮ ಸ್ಕಿನ್ ಟೋನ್‌ಗೆ ಹೊಂದುತ್ತದೆಯೇ ಎಂಬುದನ್ನು ಮೊದಲು ನೋಡಿ, ನಂತರ ಉಟ್ಟುಕೊಳ್ಳಿ.
ಬಾರ್ಡರ್‌ನ ಸಾದಾ ಕೆಂಪು ಸೀರೆ
ಸಿಂಪಲ್ ಬಾರ್ಡರ್‌ನ ಸಾದಾ ಕೆಂಪು ಸೀರೆ ಎಲಿಗೆಂಟ್ ಲುಕ್ ನೀಡುವುದು. ಹಾಗಾಗಿ ಗ್ರ್ಯಾಂಡ್ ಲುಕ್ ನೀಡುವ ಪ್ರಿಂಟ್ಸ್ ಸೀರೆ ಆಯ್ಕೆ ಬೇಡ.

ಮೇಕಪ್ ಟ್ರೆಡಿಷನಲ್ ಲುಕ್ ನೀಡಲಿ
ಈ ಸೀರೆ ಉಟ್ಟಾಗ ಟ್ರೆಡಿಷನಲ್ ಸಿಂಪಲ್ ಮೇಕಪ್ ನಿಮ್ಮದಾಗಲಿ. ರೆಡ್ ಲಿಪ್‌ಸ್ಟಿಕ್ ಮ್ಯಾಚ್ ಮಾಡಿ. ವಧನ ಹೈಲೈಟಾಗಲು ಕಣ್ಣಿಗೆ ಐಲೈನರ್ ಹಾಗೂ ಕಾಜಲ್ ಹಚ್ಚಿ.
ಧರಿಸುವ ಆಕ್ಸೆಸರೀಸ್ ಹೀಗಿರಲಿ
ಗೋಲ್ಡನ್ ಬಾರ್ಡರ್ ಇದ್ದಲ್ಲಿ ಆದಷ್ಟೂ ಗೋಲ್ಡ್ ಕವರಿಂಗ್ ಅಥವಾ ಬಂಗಾರದ ಆಭರಣ ಧರಿಸುವುದು ಸೂಕ್ತ. ಇದು ನಿಮ್ಮನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.
ಹೇರ್‌ಸ್ಟೈಲ್ ಹೊಂದುವಂತಿರಲಿ
ಸಮ್ಮರ್ ಹೇರ್‌ಸ್ಟೈಲ್‌ನಲ್ಲಿರುವ ನಾನಾ ಬಗೆಯ ಬನ್ ಹೇರ್‌ಸ್ಟೈಲ್ ಮಾಡಿ ನೋಡಿ. ಸೈಡಿನಲ್ಲಿ ಫ್ಲೋರಲ್ ಆಕ್ಸೆಸರೀಸ್ ಅಥವಾ ರೆಡ್ ರೋಸ್‌ಗಳನ್ನು ಧರಿಸಿ. ನೋಡಲು ಮತ್ತಷ್ಟು ಅಂದವಾಗಿ ಕಾಣಿಸುವಿರಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Statement Belt Fashion: ಸಿಂಪಲ್ ಉಡುಗೆಗಳನ್ನು ಆಕರ್ಷಕವಾಗಿಸುವ ಸ್ಟೇಟ್‌ಮೆಂಟ್ ಬೆಲ್ಟ್ಸ್