ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ನಟಿ ಅಮಲಾ ಪೌಲ್‌ ಲುಕ್‌ ನಿಮ್ಮದಾಗಿಸಿಕೊಳ್ಳಲು ಇಲ್ಲಿವೆ 5 ಸ್ಟೈಲಿಂಗ್‌ ಐಡಿಯಾ

Star Fashion: ಗ್ಲಾಮರಸ್‌ ನಟಿ ಅಮಲಾ ಪೌಲ್‌, ಗ್ರ್ಯಾಂಡ್‌ ಶೀರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ಕನ್ನು ನೀವೂ ಕೂಡ ಪಡೆಯಬಹುದು. ಅದು ಹೇಗೆ? ಸ್ಟೈಲಿಸ್ಟ್‌ಗಳು 5 ಸಿಂಪಲ್‌ ಐಡಿಯಾ ನೀಡಿದ್ದಾರೆ. ಟ್ರೈ ಮಾಡಿ ನೋಡಿ.

ಗ್ರ್ಯಾಂಡ್‌ ಶೀರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ನಟಿ ಅಮಲಾ ಪೌಲ್‌

ಚಿತ್ರಗಳು: ಅಮಲಾ ಪೌಲ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಅಮಲಾ ಪೌಲ್‌ ಧರಿಸಿರುವ ಶೀರ್‌ ವಿನ್ಯಾಸದ ಗ್ರ್ಯಾಂಡ್‌ ಡಿಸೈನರ್‌ವೇರ್‌ ಇದೀಗ ಫ್ಯಾಷನ್‌ (Star Fashion) ಪ್ರಿಯರನ್ನು ಸೆಳೆದಿದೆ. ಮದುವೆಯಾಗಿ ಮಗುವಾದ ನಂತರವೂ ಅಷ್ಟೇ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿರುವ ಅವರ ಈ ಲುಕ್‌ ಮಾನಿನಿಯರಿಗೆ ಇಷ್ಟವಾಗಿದೆ. ಅವರ ಈ ಡಿಸೈನರ್‌ವೇರ್‌ ಸದ್ಯ ಟ್ರೆಂಡ್‌ ಲಿಸ್ಟ್‌ನಲ್ಲೂ ಇದೆ. ಸಮ್ಮರ್‌ ಸೀಸನ್‌ನಲ್ಲಿ ಪಾರದರ್ಶಕವಾಗಿರುವ ಜಾಕೆಟ್‌ ಶೈಲಿಯ ಶೀರ್‌ ಲೆಹೆಂಗಾಗಳು ಈಗಾಗಲೇ ಸಾಕಷ್ಟು ಯುವತಿಯರನ್ನು ಸೆಳೆದಿವೆ. ಸಾಕಷ್ಟು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಿರುವ ಅಮಲಾ ಪೌಲ್‌ ಗ್ಲಾಮರಸ್‌ ನಟಿ ಎಂದೇ ಹೆಸರು ಪಡೆದುಕೊಂಡಿರುವವರು. ಮದುವೆಯಾಗಿ ಮಗುವಾದ ನಂತರವೂ ಆಗಾಗ್ಗೆ ಫ್ಯಾಷನ್‌ ಫೋಟೋಶೂಟ್‌ಗಳಲ್ಲೂ ಕಾಣಿಸಿಕೊಳ್ಳುವ ಇವರು ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನು ಹೊಂದಿದ್ದು, ಸಾಕಷ್ಟು ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.‌

5

ಸಮ್ಮರ್‌ಗೆ ಶೀರ್‌ ಡಿಸೈನ್‌ನ ಡಿಸೈನರ್‌ವೇರ್‌

ಧರಿಸಿದಾಗ ಆರಾಮದಾಯಕವೆನಿಸುವ, ಜತೆಗೆ ಗ್ರ್ಯಾಂಡ್‌ ಲುಕ್‌ ನೀಡುವ ಶೀರ್‌ ಡಿಸೈನರ್‌ವೇರನ್ನು ಅಮಲಾ ಧರಿಸಿದ್ದಾರೆ. ಬ್ರಿಥಬಲ್‌ ಶೀರ್‌ ವಿನ್ಯಾಸ ಹೊಂದಿರುವ ಅವರ ಈ ಉಡುಗೆ ರುಬೀನಾ ಲೆಬಲ್‌ನದ್ದಾಗಿದ್ದು, ಲೈಟ್‌ವೈಟ್‌ ಫ್ಯಾಬ್ರಿಕ್‌ ಒಳಗೊಂಡಿದೆ. ಹಾಗಾಗಿ ಈ ಉರಿ ಬಿಸಿಲಲ್ಲೂ ಸೆಕೆಯಾಗದು. ಭಾರವಾಗದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಜತೆಗೆ ನಟಿ ಅಮಲಾ ಪೌಲ್‌ನಂತೆ ಕಾಣಿಸಲು ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ.

ಸಮ್ಮರ್‌ಗೆ ಲೈಟ್‌ವೈಟ್‌ ಫ್ಯಾಬ್ರಿಕ್‌ ಆಯ್ಕೆ

ಯಾವುದೇ ಗ್ರ್ಯಾಂಡ್‌ ಡಿಸೈನರ್‌ವೇರ್‌ ಆಯ್ಕೆ ಮಾಡುವಾಗ ಮೊದಲು ಭಾರವಿರದ ಲೈಟ್‌ವೇಟ್‌ ಉಡುಪುಗಳಿಗೆ ಆದ್ಯತೆ ನೀಡಿ. ಆಗ ಸೆಕೆಯಾಗದು.

ಲೈಟ್‌ ಕಲರ್ಸ್‌ ಉಡುಗೆಗಳ ಸೆಲೆಕ್ಷನ್‌

ಈ ಸೀಸನ್‌ನಲ್ಲಿ ಡಾರ್ಕ್‌ ವರ್ಣದವನ್ನು ಸೆಲೆಕ್ಟ್‌ ಮಾಡಲೇಬೇಡಿ. ಲೈಟ್‌ ವರ್ಣದವನ್ನು ಚೂಸ್‌ ಮಾಡಿ. ಇವು ನೋಡಲು ನಿಮ್ಮನ್ನು ಬ್ರೈಟಾಗಿ ಬಿಂಬಿಸುತ್ತವೆ.

6

ಶೀರ್‌ ಡಿಸೈನ್‌ಗೆ ಆದ್ಯತೆ ನೀಡಿ

ಪಾರದರ್ಶಕವಾಗಿರುವ ಶೀರ್‌ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಿ ಧರಿಸಿ. ಉದಾಹರಣೆಗೆ ಸಾಫ್ಟ್‌ ನೆಟ್‌ ಫ್ಯಾಬ್ರಿಕ್‌ನವು.

ಆಕರ್ಷಕ ಡಿಸೈನರ್‌ವೇರ್ಸ್‌

ನಿಮ್ಮ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಹ ಡಿಸೈನರ್‌ವೇರ್‌ ಖರೀದಿಸಿ. ಲೆಹೆಂಗಾವಾದಲ್ಲಿ ಅದರಲ್ಲೆ ನಾನಾ ಬಗೆಯ ಮಾಡರ್ನ್‌ ಡಿಸೈನ್‌ನವು ದೊರೆಯುತ್ತವೆ. ಅವುಗಳನ್ನು ಧರಿಸಿ. ನಯಾ ಲುಕ್‌ ನಿಮ್ಮದಾಗುವುದು.

ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್‌ ಫ್ಯಾಷನ್‌ ಹಂಗಾಮ

ಸ್ಟೈಲಿಂಗ್‌ ಮ್ಯಾಚ್‌ ಆಗುವಂತಿರಲಿ

ಡಿಸೈನರ್‌ವೇರ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ. ಆಭರಣಗಳನ್ನು ಕಡಿಮೆ ಧರಿಸಿ. ಮೇಕಪ್‌ ತಿಳಿಯಾಗಿರಲಿ. ಹೇರ್‌ಸ್ಟೈಲ್‌ ಸಿಂಪಲ್ಲಾಗಿರಲಿ. ಆಗ ನೀವೂ ಕೂಡ ನಟಿ ಅಮಲಾ ಪೌಲ್‌ನಂತೆ ಆಕರ್ಷಕವಾಗಿ ಕಾಣಿಸುವಿರಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)