ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Most Expensive Colour: ಬಂಗಾರಕ್ಕಿಂತಲೂ ದುಬಾರಿ ಈ ಬಣ್ಣ; 1 ಗ್ರಾಂಗೆ ಬರೋಬ್ಬರಿ 80,000 ರುಪಾಯಿ!

Viral News: ಅತ್ಯಂತ ದುಬಾರಿ ಬೆಲೆಯ ಬಣ್ಣದ ಬಗ್ಗೆ ನಿಮಗೆ ಗೊತ್ತಾ? ರಾಜ ಮನೆತನ ಮತ್ತು ಪವಿತ್ರ ಕಲೆಗಾಗಿ ಮೀಸಲಾಗಿದ್ದ ಈ ಪೌರಾಣಿಕ ನೀಲಿ ಬಣ್ಣವು ಚಿನ್ನದ ಮೌಲ್ಯವನ್ನು ಮೀರಿಸಿದೆ. ಇದರ ಬೆಲೆ 1 ಗ್ರಾಂಗೆ ಬರೋಬ್ಬರಿ 80,000 ರುಪಾಯಿ ಎಂದರೆ ನೀವು ನಂಬಲೇ ಬೇಕು. ಹೋಳಿ ಸಂಭ್ರಮದ ಮಧ್ಯೆ ಈ ನೀಲಿ ಬಣ್ಣ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವಿಶ್ವದ ಅತ್ಯಂತ ದುಬಾರಿ ಬಣ್ಣ ಇದು: ಒಂದು ಗ್ರಾಂಗೆ 80,000 ರುಪಾಯಿ!

ವಿಶ್ವದ ಅತ್ಯಂತ ದುಬಾರಿ ಬಣ್ಣ -

Profile
Pushpa Kumari Mar 4, 2026 7:33 PM

ನವದೆಹಲಿ, ಮಾ. 4: ದುಬಾರಿ ಬೆಲೆಯ ವಸ್ತು ಅಂದಾಗ ಸಾಮಾನ್ಯವಾಗಿ ಚಿನ್ನ, ವಜ್ರ, ಪ್ಲಾಟಿನಂ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಅತ್ಯಂತ ದುಬಾರಿ ಬೆಲೆಯ ವಸ್ತು ಬಣ್ಣ ಎನ್ನುವುದನ್ನು ನಂಬುತ್ತೀರಾ? ಹೌದು, ರಾಜಮನೆತನ ಮತ್ತು ಪವಿತ್ರ ಕಲೆಗಾಗಿ ಮೀಸಲಾಗಿದ್ದ ಈ ಪೌರಾಣಿಕ ನೀಲಿ ಬಣ್ಣದ ಬೆಲೆಯು ಚಿನ್ನದ ಮೌಲ್ಯವನ್ನು ಮೀರಿದೆ. ಇದರ 1 ಗ್ರಾಂ ಬೆಲೆ 80,000 ರುಪಾಯಿಗಿಂತ ಅಧಿಕ. ದೇಶಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿರುವ ಹಿನ್ನೆಲೆಯಲ್ಲಿ ಈ ದುಬಾರಿ ಬಣ್ಣದ ವಿಚಾರ ಮುನ್ನೆಲೆಗೆ ಬಂದಿದೆ.

ಬಣ್ಣಗಳು ಕೇವಲ ಅಲಂಕಾರಿಕವಾಗಿಲ್ಲ ಅಥವಾ ಹೋಳಿಯಂತಹ ಹಬ್ಬಗಳಿಗೆ ಮಾತ್ರ ಸೀಮಿತವಾಗಿಲ್ಲ. ಶತಮಾನಗಳಿಂದ ಅವು ನಾಗರಿಕತೆ, ಧರ್ಮ, ಕಲಾತ್ಮಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತಿವೆ. ಕೆಲವು ವರ್ಣದ್ರವ್ಯಗಳು ಚಿನ್ನ ಮತ್ತು ಬೆಳ್ಳಿಗಿಂತ ಹೆಚ್ಚು ಮೌಲ್ಯ ಹೊಂದಿವೆ. ಇವುಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಅಲ್ಟ್ರಾಮರೀನ್ ನೀಲಿ.

ನ್ಯಾಚುರಲ್ ಅಲ್ಟ್ರಾಮರೀನ್ ಬ್ಲೂ ಎಂಬ ಈ ಅಪರೂಪದ ನೀಲಿ ಬಣ್ಣದ 1 ಗ್ರಾಂ ಬೆಲೆ ಇಂದು ಮಾರುಕಟ್ಟೆಯಲ್ಲಿ 80,000 ರುಪಾಯಿಗೂ ಹೆಚ್ಚು. ಈ ಅದ್ಭುತ ಬಣ್ಣವನ್ನು 'ಲಾಪಿಸ್ ಲಾಜುಲಿ' ಎಂಬ ಅರೆ-ಅಮೂಲ್ಯ ರತ್ನದಿಂದ ತಯಾರಿಸಲಾಗುತ್ತದೆ. ಲ್ಯಾಪಿಸ್ ಲಾಜುಲಿಯನ್ನು ನುಣ್ಣಗೆ ಪುಡಿಮಾಡಿ, ತೈಲಗಳು ಮತ್ತು ರಾಸಾಯನಿಕಗಳನ್ನು ಬಳಸಿ ಶುದ್ಧೀಕರಿಸಿ ಶುದ್ಧ ನೀಲಿ ಬಣ್ಣವನ್ನು ಹೊರ ತೆಗೆಯಲಾಗುತ್ತದೆ.

ಲ್ಯಾಪಿಸ್ ಲಾಜುಲಿ ಕೇವಲ ವರ್ಣದ್ರವ್ಯವಲ್ಲ. ಅಮೂಲ್ಯ ಕಲ್ಲು ಕೂಡ ಹೌದು. ಇದು ಆಳವಾದ, ಪ್ರಕಾಶಮಾನವಾದ ನೀಲಿ ಬಣ್ಣಕ್ಕೆ ಹೆಸರುವಾಸಿ. ಈ ಕಲ್ಲುಗಳು ಮುಖ್ಯವಾಗಿ ಅಫ್ಘಾನಿಸ್ತಾನದ ಬದಕ್ಷಾನ್ ಪ್ರಾಂತ್ಯದ ಗಣಿಗಳಲ್ಲಿ ಮಾತ್ರ ಸಿಗುತ್ತವೆ. ಆಗಾಗ್ಗೆ ಖನಿಜ ಪೈರೈಟ್‌ನಿಂದ ಉಂಟಾಗುವ ಚಿನ್ನದ ಚುಕ್ಕೆಗಳಿಂದ ಇದು ಕೂಡಿದ್ದು, ಇದು ನಕ್ಷತ್ರಗಳಿಂದ ತುಂಬಿದ ರಾತ್ರಿ ಆಕಾಶದ ನೋಟವನ್ನು ನೀಡುತ್ತದೆ.

ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ವಾಹನ ಸವಾರರು ಹೈರಾಣ

14 ಮತ್ತು 16ನೇ ಶತಮಾನದ ನಡುವೆ, ಯುರೋಪಿಯನ್ ಧಾರ್ಮಿಕ ವರ್ಣಚಿತ್ರಗಳಲ್ಲಿ ಅಲ್ಟ್ರಾಮರೀನ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿತ್ತು. ಶುದ್ಧತೆ, ಭಕ್ತಿ ಮತ್ತು ದೈವತ್ವವನ್ನು ಸಂಕೇತಿಸುವ ಮಾತೃ ಮೇರಿಯ ನಿಲುವಂಗಿಯ ಬಣ್ಣಕ್ಕೆ ಇದನ್ನು ಬಳಸಲಾಗುತ್ತಿತ್ತು. ಲಿಯೊನಾರ್ಡೊ ಡಾ ವಿಂಚಿ ಮತ್ತು ಮೈಕಲ್‌ ಆಂಜೆಲೊಅವರಂತಹ ಪ್ರಸಿದ್ಧ ಕಲಾವಿದರು ತಮ್ಮ ಅಮರ ಕಲಾಕೃತಿಗಳಲ್ಲಿ ಈ ಬಣ್ಣವನ್ನು ಬಳಸಿದ್ದಾರೆ. ಇಂದು ರಾಸಾಯನಿಕವಾಗಿ ತಯಾರಿಸಿದ ಅಗ್ಗದ ನೀಲಿ ಬಣ್ಣಗಳು ಲಭ್ಯವಿದ್ದರೂ, ನೈಸರ್ಗಿಕ ಅಲ್ಟ್ರಾಮರೀನ್ ಬಣ್ಣಕ್ಕೆ ಬೆಲೆ ಇಂದು ಕೂಡ ಕಡಿಮೆ ಆಗಿಲ್ಲ.