Woolen Dress Fashion 2025: ಸೀಸನ್ ಎಂಡ್‌ನಲ್ಲೂ ಸೈಡಿಗೆ ಸರಿಯದ ಲೈಟ್‌ವೇಟ್ ಗ್ಲಾಮರಸ್ ಉಲ್ಲನ್ ಡ್ರೆಸ್‌ಗಳಿವು
Woolen Dress Fashion 2025: ವಿಂಟರ್ ಸೀಸನ್ ಎಂಡ್ ಆಗುತ್ತಿದೆ. ಆದರೂ ಕೆಲವು ಉಲ್ಲನ್ ಡ್ರೆಸ್‌ಗಳು ಇನ್ನೂ ಸೈಡಿಗೆ ಸರಿದಿಲ್ಲ! ಸಂಜೆ ಹಾಗೂ ರಾತ್ರಿ ವೇಳೆ ಔಟಿಂಗ್ ಹೋಗುವವರನ್ನು ಇವು ಸವಾರಿ ಮಾಡುತ್ತಿವೆ. ಯಾವ್ಯಾವ ಬಗೆಯ ಉಡುಪುಗಳು ಇನ್ನು ಚಾಲ್ತಿಯಲ್ಲಿವೆ? ಇಲ್ಲಿದೆ ಒಂದಿಷ್ಟು ವಿವರ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್ ಮುಗಿಯುವ ಹಂತದಲ್ಲಿದೆ. ಆದರೂ ಕೆಲವು ಉಲ್ಲನ್ ಉಡುಪುಗಳು (Woolen Dress Fashion 2025) ಮಾತ್ರ ಇನ್ನೂ ಸೈಡಿಗೆ ಸರಿಯದೇ ಚಾಲ್ತಿಯಲ್ಲಿವೆ. ಹೌದು, ಸಂಜೆ ಹಾಗೂ ರಾತ್ರಿ ವೇಳೆ ಔಟಿಂಗ್ ಹೋಗುವವರನ್ನು ಸವಾರಿ ಮಾಡುತ್ತಿವೆ. ಸ್ಟೈಲಿಸ್ಟ್ ರಾಜಿ ಪ್ರಕಾರ, ಈ ಸೀಸನ್‌ನಲ್ಲಿ ಲೈಟ್‌ವೇಟ್ ಉಲ್ಲನ್ ಡ್ರೆಸ್‌ಗಳು ಪಾಪುಲರ್ ಆಗಿವೆ. ನಾನಾ ಬಗೆಯ ವಿನ್ಯಾಸದವು ಕಾಲಿಟ್ಟಿವೆ. ಹುಡುಗಿಯರಿಗೆ ಗ್ಲಾಮರ್ ಟಚ್ ನೀಡುತ್ತಿವೆ. ಇವು ಸಂಜೆಯ ಚಳಿಯಲ್ಲಿ ದೇಹವನ್ನು ಬೆಚ್ಚಗಿಡುವುದರ ಜತೆಗೆ ನೋಡಲು ಆಕರ್ಷಕವಾಗಿ ಬಿಂಬಿಸುತ್ತಿವೆ. ಹಾಗಾಗಿ ಇತರೆ ಡ್ರೆಸ್‌ಗಳ ಬದಲು ಮಾನಿನಿಯರು ಇವುಗಳನ್ನು ಸೀಸನ್ ಮುಗಿದರೂ ಕಂಟಿನ್ಯೂ ಮಾಡುತ್ತಲೇ ಇದ್ದಾರೆ.

ಲೈಟ್‌ವೇಟ್ ಉಲ್ಲನ್ ಫ್ರಾಕ್
ಸಿಂಪಲ್ ವಿನ್ಯಾಸದಿಂದಿಡಿದು, ನಾನಾ ವೆಸ್ಟರ್ನ್ ಡಿಸೈನ್‌ನಲ್ಲಿ ಲಭ್ಯವಿರುವ ಡಿಸೈನ್‌ನ ಲೈಟ್‌ವೇಟ್ ಇರುವಂತಹ ಕಂಫರ್ಟಬಲ್ ಫೀಲ್ ನೀಡುವ ಫ್ರಾಕ್‌ಗಳು ಈ ಸೀಸನ್‌ನ ನೈಟ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಉಲ್ಲನ್ ಟಾಪ್/ಪುಲ್ಓವರ್
ಇನ್ನು, ಸಿಂಪಲ್ ಪ್ಯಾಂಟ್ ಮೇಲೆ ಧರಿಸಬಹುದಾದ ಲೈಟ್‌ವೇಟ್‌ನ ತೆಳುವಾದ ಉಲ್ಲನ್ ಟಾಪ್‌ಗಳು ನೋಡಲು ಸೇಮ್ ಪುಲ್ ಓವರ್‌ನಂತೆಯೇ ಕಾಣುವುದರಿಂದ ಹುಡುಗಿಯರು ಇವನ್ನು ಹೆಚ್ಚಾಗಿ ಸಂಜೆ ವೇಳೆಯ ಔಟಿಂಗ್‌ಗಳಲ್ಲಿ ಧರಿಸತೊಡಗಿದ್ದಾರೆ. ಸೀಸನ್ ಕೊನೆಯಾಗುತ್ತಿದ್ದರೂ ಇವು ಸಖತ್ ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್. ಅವರ ಪ್ರಕಾರ, ಇವನ್ನು ಆದಷ್ಟೂ ಪರ್ಫೆಕ್ಟ್ ಫಿಟ್ ಜೀನ್‌ಗೆ ತಕ್ಕಂತೆ ಆಯ್ಕೆ ಮಾಡಿ ಧರಿಸಿದಾಗ ನೋಡಲು ಚೆನ್ನಾಗಿ ಕಾಣಿಸುತ್ತವೆ ಎನ್ನುತ್ತಾರೆ.

ಲೈಟ್‌ವೇಟ್ ಉಲ್ಲನ್ ಡ್ರೆಸ್‌ಗೂ ಗ್ಲಾಮರ್ ಟಚ್
ಈ ಸೀಸನ್‌ನ ಎಂಡ್‌ನಲ್ಲೂ ನಾನಾ ಬಗೆಯ ಟ್ರೆಂಡಿ ಉಲ್ಲನ್ ಡ್ರೆಸ್‌ಗಳನ್ನು ಕಾಣಬಹುದು. ಅವುಗಳಲ್ಲಿ ಕ್ರಾಪ್ ಟಾಪ್, ಕೋಲ್ಡ್ ಶೋಲ್ಡರ್ ಡ್ರೆಸ್, ಮಿನಿ, ಮಿಡಿ ಹಾಗೂ ಮ್ಯಾಕ್ಸಿಗಳು ಇನ್ನೂ ಟ್ರೆಂಡಿಯಾಗಿವೆ. ಇವು ಎಷ್ಟು ಟ್ರೆಂಡಿಯಾಗಿದ್ದಾವೆಂದರೆ, ವಯಸ್ಸಿನ ಭೇದವಿಲ್ಲದೇ ಮಹಿಳೆಯರು ಇಂದಿಗೂ ಧರಿಸತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
ಈ ಸುದ್ದಿಯನ್ನೂ ಓದಿ | Star Fashion Interview 2025: ಬಬ್ಲಿ ಲುಕ್‌ಗೆ ಸೈ ಎಂದ ಕನ್ನಡ ರ‍್ಯಾಪರ್ ಇಶಾನಿ
ಉಲ್ಲನ್ ಡ್ರೆಸ್ ನಿರ್ವಹಣೆ
- ಲೈಟ್‌ವೇಟ್ ಉಲ್ಲನ್ ಡ್ರೆಸ್ ಧರಿಸಿ, ಇಲ್ಲವಾದಲ್ಲಿ ಸೀಸನ್ ಮುಗಿಯುತ್ತಿರುವುದರಿಂದ ಧರಿಸಿದಾಗ ಸೆಕೆಯಾಗಬಹುದು.
- ಉಲ್ಲನ್ ಡ್ರೆಸ್‌ಗಳು ಸೀಸನಬಲ್ ಉಡುಪುಗಳು ಎಂಬುದನ್ನು ಮರೆಯಬೇಡಿ.
- ಉಲ್ಲನ್ ಡ್ರೆಸ್‌ಗಳು ಈ ಸೀಸನ್ನ ರಾತ್ರಿ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಡ್ರೆಸ್‌ಕೋಡ್. ಟಿನೇಜ್ ಹುಡುಗಿಯರು ಫ್ರಾಕ್‌ನಂತವನ್ನು ಧರಿಸಬಹುದು. ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)