Star Saree Fashion 2026: ಕರೀನಾ ಕಪೂರ್ ಶಿಫಾನ್ ಸೀರೆಗೆ ಸೀರೆ ಪ್ರಿಯರು ಫಿದಾ!
Kareena Kapoor: ಬಾಲಿವುಡ್ ನಟಿ ಕರೀನಾ ಕಪೂರ್ ಇವೆಂಟ್‌ವೊಂದರಲ್ಲಿ ಉಟ್ಟಿದ್ದ ಸಿಂಪಲ್ ಮಲ್ಟಿ ಕಲರ್‌ನ ಶಿಫಾನ್ ಸೀರೆಗೆ ಸೀರೆ ಪ್ರಿಯರು ಫಿದಾ ಆಗಿದ್ದಾರೆ. ಇದ್ಯಾವ ಬಗೆಯ ಸೀರೆ? ಅವರಂತೆಯೇ ಕಾಣಿಸಲು ನೀವು ಮಾಡಬೇಕಾದ್ದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಕರೀನಾ ಕಪೂರ್, ಬಾಲಿವುಡ್ ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕರೀನಾ ಕಪೂರ್ ಉಟ್ಟಿದ್ದ ಮಲ್ಟಿಕಲರ್ ಪಾಸ್ಟೆಲ್ ಸೀರೆ (Star Saree Fashion 2026) ಸದ್ಯ ಟ್ರೆಂಡಿಯಾಗಿದೆ. ಹೌದು, ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಇವೆಂಟ್‌ವೊಂದರಲ್ಲಿ ಉಟ್ಟಿದ್ದ, ರೈನ್ಬೋ ಶೇಡ್‌ನ ಸಿಂಪಲ್ ಲೆಹರಿಯಾ ಪ್ರಿಂಟ್ಸ್‌ನ ಮಲ್ಟಿ ಕಲರ್‌ನ ಶಿಫಾನ್ ಸೀರೆ ಸದ್ಯ ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸಿದ್ದು, ಸೀರೆ ಪ್ರಿಯರು ಫಿದಾ ಆಗಿದ್ದಾರೆ.
ಶಿಫಾನ್ ಸೀರೆಯ ಸ್ಪೆಷಾಲಿಟಿ
ಅಂದಹಾಗೆ, ಕರೀನಾ ಕಪೂರ್ ಉಟ್ಟಿರುವ ಶಿಫಾನ್ ಸೀರೆಯು ಹೊಸ ಪ್ರಿಂಟ್ ಅಥವಾ ನಯಾ ಲುಕ್ ನೀಡುವಂತದ್ದೇನಲ್ಲ! ಬದಲಿಗೆ ಹಳೆಯ ಸಿನಿಮಾದಲ್ಲಿ ದಶಕಗಳ ಹಿಂದೆ ಟ್ರೆಂಡಿಯಾಗಿದ್ದ, ಒಂಬ್ರೆ ಅಂದರೇ ಮಲ್ಟಿ ಶೇಡ್‌ನ ಟೈ ಅಂಡ್ ಡೈ ಕಾನ್ಸೆಪ್ಟ್‌ನ ಸಿಂಪಲ್ ಸೀರೆಯಿದು. ಆದರೆ, ಇದೀಗ ಲೈಟ್ ಅಥವಾ ಪಾಸ್ಟೆಲ್ ಶೇಡ್‌ನಲ್ಲಿದೆ. ಅದಷ್ಟೇ ಈ ಸೀರೆಯ ವಿಶೇಷತೆ. ಇನ್ನು ಉಳಿದಂತೆ ಇದೊಂದು ಹಳೆಯ ಸೀರೆಯ ಹೊಸ ಲುಕ್ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್ ವಿಶ್ಲೇಷಕರು.
ಮರು ಟ್ರೆಂಡಿಯಾಗಿಸಿದ ಕರೀನಾ ಸೀರೆ
ಈ ಸೀರೆ ಟ್ರೆಂಡಿಯಾಗಲು ಕಾರಣ ಕರೀನಾ ಕಪೂರ್ ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಲೈಟ್‌ವೈಟ್ ಸೀರೆಗಳನ್ನು ಇಷ್ಟಪಡುವ ಮಾನಿನಿಯರಿಗೆ ಕರೀನಾ ಇವೆಂಟ್‌ನಲ್ಲಿ ಉಟ್ಟ ನಂತರ ಕಣ್ಮನ ಸೆಳೆದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚು ಬೆಲೆಯೂ ಅಲ್ಲದ ಈ ಸೀರೆ ಉಟ್ಟಾಗ ಕಂಫರ್ಟಬಲ್ ಫೀಲ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಮಲ್ಟಿ ಶೇಡ್ ಪಾಸ್ಟೆಲ್ ಶಿಫಾನ್ ಸೀರೆಯಲ್ಲಿ ಕರೀನಾ ಲುಕ್‌ಗೆ ಟಿಪ್ಸ್
- ಡಾರ್ಕ್ ಬದಲು ಆದಷ್ಟೂ ಪಾಸ್ಟೆಲ್ ಶೇಡ್‌ನದ್ದೇ ಆಯ್ಕೆ ಮಾಡಿ ಉಟ್ಟುಕೊಳ್ಳಿ.
- ಮಿನಿಮಲ್ ಮೇಕೋವರ್ ಮಾಡಿ.
- ಗ್ಲಾಮರಸ್ ಬ್ಲೌಸ್ ಧರಿಸಿ.
- ಸಿಂಪಲ್ ಲುಕ್ ನಿಮ್ಮದಾಗಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)