ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Saree Tips 2026: ಪಾರದರ್ಶಕ ಸೀರೆ ಉಡುವವರು ಗಮನದಲ್ಲಿಡಬೇಕಾದ ಸ್ಟೈಲಿಂಗ್‌ ಟಿಪ್ಸ್

Transparent Sarees: ಪಾರದರ್ಶಕ ಸೀರೆಯುಟ್ಟು ಸೆಲೆಬ್ರಿಟಿಗಳಂತೆ ಕಾಣಲು ಬಯಸುತ್ತೀರಾ! ಆದರೂ ಅದು ಸಾಧ್ಯವಾಗುತ್ತಿಲ್ಲವೇ? ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್‌ ಹಾಗೂ ಆಯ್ಕೆ ಮಾಡುವ ವಿಧಾನವನ್ನು ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್. ಇನ್ನು, ಪಾರದರ್ಶಕ ಸೀರೆಗಳನ್ನು ಕೇವಲ ಕೊಂಡು ಹೇಗೇ ಬೇಕೋ ಹಾಗೆ ಉಟ್ಟರೇ ಸಾಲದು. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮುಜುಗರಕ್ಕೆ ಈಡಾಗಬೇಕಾದಿತು! ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್.

ಪಾರದರ್ಶಕ ಸೀರೆ ಉಡುವವರು ಗಮನದಲ್ಲಿಡಬೇಕಾದ ಸ್ಟೈಲಿಂಗ್‌ ಟಿಪ್ಸ್

ಚಿತ್ರಗಳು: ನೇಹಾ ಪೆಂಡ್ಸೆ, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನೀವು ಪಾರದರ್ಶಕ ಸೀರೆ ಪ್ರಿಯರೇ! ಈ ಶೈಲಿಯ ಸೀರೆಯುಟ್ಟು (Saree Tips 2026) ಸೆಲೆಬ್ರಿಟಿಗಳಂತೆ ಕಾಣಲು ಬಯಸುತ್ತೀರಾ! ಆದರೂ ಅದು ಸಾಧ್ಯವಾಗುತ್ತಿಲ್ಲವೇ? ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್‌ ಹಾಗೂ ಆಯ್ಕೆ ಮಾಡುವ ವಿಧಾನವನ್ನು ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್. ಇನ್ನು, ಪಾರದರ್ಶಕ ಸೀರೆಗಳನ್ನು ಕೇವಲ ಕೊಂಡು ಹೇಗೇ ಬೇಕೋ ಹಾಗೆ ಉಟ್ಟರೇ ಸಾಲದು. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮುಜುಗರಕ್ಕೆ ಈಡಾಗಬೇಕಾದಿತು! ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್.

Saree Fashion

ಪಾರದರ್ಶಕ ಸೀರೆ ಆಯ್ಕೆ ಸರಿಯಾಗಿರಲಿ

ಸೆಲೆಬ್ರಿಟಿಯಂತೆ ಕಾಣಿಸುವುದಕ್ಕೊಸ್ಕರ ಪಾರದರ್ಶಕ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದಲ್ಲ! ಬದಲಿಗೆ ಅದು ಯಾವ ಫ್ಯಾಬ್ರಿಕ್‌ನದ್ದು ಎಂಬುದನ್ನು ಕಂಡುಕೊಳ್ಳಬೇಕು. ಅಲ್ಲದೇ ನಿಮ್ಮ ದೇಹಕ್ಕೆ ಹೊಂದುವಂತಹ ಫ್ಯಾಬ್ರಿಕ್‌ ಚೂಸ್‌ ಮಾಡಬೇಕು.

ಸೀರೆ ಡಿಸೈನ್‌ ನೋಡಿ ಕೊಳ್ಳಿ

ನಿಮ್ಮನ್ನು ಅತ್ಯಾಕರ್ಷಕವಾಗಿರುವ ಸೀರೆಯ ಮೇಲಿನ ವಿನ್ಯಾಸವನ್ನು ನೋಡಿ, ಆಯ್ಕೆ ಮಾಡಿ. ಫ್ಲೋರಲ್‌, ಕಟ್‌ದಾನಾ, ಜರ್ದೋಸಿ, ಎಂಬ್ರಾಯ್ಡರಿ ಹೀಗೆ ನಾನಾ ಬಗೆಯ ಡಿಸೈನ್‌ನವು ಸಿಗುತ್ತವೆ. ಇವು ಸೀರೆಯನ್ನು ಹೈಲೈಟ್‌ ಮಾಡಿ ಸೆಲೆಬ್ರೆಟಿ ಲುಕ್‌ ನೀಡಬಲ್ಲವು.

Saree Tips

ಸೀರೆ ಬ್ಲೌಸ್‌ ಅತ್ಯಾಕರ್ಷಕವಾಗಿರಲಿ

ಪಾರದರ್ಶಕ ಸೀರೆಗೆ ಬ್ಲೌಸ್‌ ಅಂದವಾಗಿರಬೇಕು. ಹೆವಿ ಬಸ್ಟ್ ಇದ್ದಲ್ಲಿ ಆದಷ್ಟೂ ಸಿಂಗಲ್‌ ಪಿನ್‌ ಅವಾಯ್ಡ್ ಮಾಡಿ. ಇಲ್ಲವೇ ಬ್ಯಾಕ್‌ ಬಟನ್‌ ಬ್ಲೌಸ್‌ ಅಥವಾ ಲಾಂಗ್‌ ಬ್ಲೌಸ್‌ ಹೊಲೆಸಿ, ಧರಿಸಿ. ಇಲ್ಲವಾದಲ್ಲಿ ಅಸಹ್ಯವಾಗಿ ಕಾಣಿಸಬಹುದು.

Transparent Sarees

ಪರ್ಸನಾಲಿಟಿಗೆ ತಕ್ಕಂತಿರಲಿ

ನೀವು ಸ್ಲಿಮ್‌ ಆಗಿದ್ದರೇ ನೋ ಪ್ರಾಬ್ಲಂ! ಪ್ಲಂಪಿಯಾಗಿದ್ದಲ್ಲಿ ಅಥವಾ ಶೇಪ್‌ಲೆಸ್‌ ಆಗಿದ್ದಲ್ಲಿ ತೀರಾ ಸಾದಾ ಡಿಸೈನ್‌ನ ಎಲ್ಲವನ್ನೂ ತೋರ್ಪಡಿಸುವ ಪಾರದರ್ಶಕ ಸೀರೆ ಅವಾಯ್ಡ್ ಮಾಡಿ. ಉಡಲೇ ಬೇಕಿದ್ದಲ್ಲಿ ಆದಷ್ಟೂ ಪ್ರಿಂಟ್ಸ್ ಇಲ್ಲವೇ ಅತಿ ಹೆಚ್ಚು ವಿನ್ಯಾಸವಿರುವ ಶೀರ್‌ ಸೀರೆ ಆಯ್ಕೆ ಮಾಡಿ. ಮುಜುಗರವಾಗದಂತೆ ಉಟ್ಟುಕೊಳ್ಳಿ.

Social Media Trending 2026: ಇನ್ಸ್ಟಾಗ್ರಾಮ್‌ನಲ್ಲಿ ಇದೀಗ 80ರ ದಶಕದ ಫ್ಯಾಷನ್‌ ಫೋಟೋಗಳದ್ದೇ ಹವಾ!

ದೇಹ ಪ್ರದರ್ಶನ ಗ್ಯಾರಂಟಿ

ಪಾರದರ್ಶಕ ಸೀರೆಗಳು ದೇಹವನ್ನು ಪ್ರದರ್ಶಿಸುತ್ತವೆ. ಹಾಗಾಗಿ ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಆಯ್ಕೆ ಮಾಡಿ ಉಟ್ಟುಕೊಳ್ಳಿ. ಇಲ್ಲವಾದಲ್ಲಿ ನಗೆಪಾಟಲಿಗೀಡಾಗಬೇಕಾದಿತು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)