Star Saree Fashion 2026: ಅರ್ಗಾನ್ಜಾ ಸೀರೆಯಲ್ಲಿ ಪೂಜಾ ಹೆಗ್ಡೆಯಂತೆ ಕಾಣಿಸಲು ಇಲ್ಲಿವೆ ಟಿಪ್ಸ್
Star Saree Fashion 2026: ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಉಟ್ಟಿರುವ ಫ್ಲೋರಲ್ ಅರ್ಗಾನ್ಜಾ ಸೀರೆ ಲುಕ್ ನಿಮಗೂ ಬೇಕೇ! ಹಾಗಾದಲ್ಲಿ ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಪೂಜಾ ಹೆಗ್ಡೆ, ಬಾಲಿವುಡ್ ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಖ್ಯಾತ ಬಹುಭಾಷಾ ನಟಿ ಪೂಜಾ ಹೆಗ್ಡೆ (Star Saree Fashion 2026) ಉಟ್ಟಿರುವ ಫ್ಲೋರಲ್ ಅರ್ಗಾನ್ಜಾ ಸೀರೆಯು ಸದ್ಯ ಸೀರೆ ಪ್ರಿಯರನ್ನು ಸೆಳೆದಿದೆ. ಹಾಗಾದಲ್ಲಿ, ಅರ್ಗಾನ್ಜಾ ಸೀರೆಯಲ್ಲಿ ನೀವೂ ಕೂಡ ಸ್ಟಾರ್ ನಟಿಯಂತೆಯೇ ಕಾಣಿಸಬೇಕೇ! ಅದಕ್ಕಾಗಿ ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.
ಮಿಕ್ಸ್ ಶೇಡ್‌ನ ಅರ್ಗಾನ್ಜಾ ಸೀರೆಯ ಆಯ್ಕೆ
ನೀವು ಇದೇ ಪಕ್ಕಾ ಲುಕ್ ಬೇಕಿದ್ದಲ್ಲಿ ಪೂಜಾ ಹೆಗ್ಡೆ ಉಟ್ಟಿರುವ ಸೇಮ್ ಟು ಸೇಮ್ ಶೇಡ್‌ನ ಅರ್ಗಾನ್ಜಾ ಸೀರೆಯನ್ನೇ ಹುಡುಕಿ, ಆಯ್ಕೆ ಮಾಡಿ. ಸಿಗದಿದ್ದಲ್ಲಿ ಆದಷ್ಟೂ ಮಿಕ್ಸ್ ಕಲರ್ಸ್ ಇರುವಂತಹ ಡಾರ್ಕ್ ಶೇಡ್ ಅರ್ಗಾನ್ಜಾ ಆಯ್ಕೆ ಮಾಡಿ.
ಫ್ಲೋರಲ್ ಪ್ರಿಂಟ್ಸ್ ಇರುವ ಸೀರೆ
ಅರ್ಗಾನ್ಜಾ ಸೀರೆಗಳಲ್ಲಿ ನಾನಾ ಬಗೆಯ ವಿನ್ಯಾಸಗಳು ಲಭ್ಯ. ಅದರಲ್ಲೂ ಪ್ರಿಂಟೆಡ್‌ನವಲ್ಲಿ ನಾನಾ ಬಗೆಯ ಡಿಸೈನ್ಸ್ ಇರುವಂತವು ದೊರೆಯುತ್ತವೆ. ಆದರೆ, ನೀವು ಥೇಟ್ ಇದೇ ಲುಕ್ ಪಡೆಯಲು ಬಿಗ್ ಫ್ಲವರ್ಸ್ ಇರುವಂತಹ ಫ್ಲೋರಲ್ ಸೀರೆಯನ್ನೇ ಉಡಿ.
ಸ್ಲೀವ್‌ಲೆಸ್ ಡಿಸೈನರ್ ಬ್ಲೌಸ್
ಸಾಮಾನ್ಯವಾದ ವಿನ್ಯಾಸವಿರುವ ಬ್ಲೌಸ್‌ಗಳು ನಿಮಗೆ ಸೆಲೆಬ್ರೆಟಿ ಲುಕ್ ನೀಡಲಾರವು. ಹಾಗಾಗಿ ಸ್ಲೀವ್‌ಲೆಸ್ ಡಿಸೈನರ್ ಬ್ಲೌಸ್ ಹೊಲೆಸಿ ಧರಿಸಿ. ಇವು ಸ್ಟಾರ್ ಲುಕ್ ನೀಡುತ್ತವೆ. ಮಾಡರ್ನ್ ಟಚ್ ನೀಡುತ್ತವೆ.
ಬಾರ್ಡರ್ ಇರುವ ಅರ್ಗಾನ್ಜಾ ಸೀರೆ
ಇನ್ನು, ಪೂಜಾ ಹೆಗ್ಡೆ ಉಟ್ಟಿರುವ ಸೀರೆ ಚಿಕ್ಕ ಗೋಲ್ಡನ್ ಬಾರ್ಡರ್ ಹೊಂದಿದೆ. ಇದೇ ರೀತಿಯದ್ದನ್ನು ಹುಡುಕಿ. ಇಲ್ಲವಾದಲ್ಲಿ ಸೀರೆಗೆ ಗೋಲ್ಡನ್ ಲೇಸ್ ಬಾರ್ಡರ್ ನೀಡಿ, ಉಟ್ಟುಕೊಳ್ಳಿ.
Festive Season Fashion 2026: ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಎಥ್ನಿಕ್‌ವೇರ್ಸ್
ಸಿಂಪಲ್ ಮೇಕೋವರ್ ಮಾಡಿ
ನಿಮ್ಮ ಮೇಕೋವರ್ ಸಿಂಪಲ್ ಆಗಿರಲಿ. ಕಿವಿಗೆ ಬಿಗ್ ಇಯರಿಂಗ್ಸ್ ಅಗತ್ಯವಿದ್ದಲ್ಲಿ ನೆಕ್ಲೆಸ್, ಬಳೆಗಳನ್ನು ಧರಿಸಿ. ಹಣೆಗೊಂದು ಚಿಕ್ಕ ಬಿಂದಿ ಇರಿಸಿ. ಹೇರ್‌ಸ್ಟೈಲ್ ಕೂಡ ಮ್ಯಾಚ್ ಆಗಲಿ. ಮುಖದ ಮೇಲೊಂದು ಸ್ಮೈಲ್ ಇರಲಿ.
(ಲೇಖಕಿ, ಫ್ಯಾಷನ್ ಪತ್ರಕರ್ತೆ)