ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Fashion: ಯುವತಿಯರ ಯುಗಾದಿ ಸಂಭ್ರಮಕ್ಕೆ ಪ್ರಿಂಟೆಡ್‌ ಲೆಹೆಂಗಾ ಸಾಥ್‌

Ugadi Fashion: ಈ ಫೆಸ್ಟಿವ್‌ ಸೀಸನ್‌ನಲ್ಲಿ ಪ್ರಿಂಟೆಡ್‌ ಲೆಹೆಂಗಾಗಳು ಎಂಟ್ರಿ ನೀಡಿವೆ. ನೋಡಲು ಮನಮೋಹಕವಾಗಿ ಕಾಣಿಸುವ ಈ ಪ್ರಿಂಟೆಡ್‌ ಲೆಹೆಂಗಾಗಳನ್ನು ಧರಿಸುವಾಗ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್‌ ಪಾಲಿಸಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್‌ ಪೂನಂ ಹಾಗೂ ಮಾಡೆಲ್‌ ಪ್ರತಿಭಾ.

ಯುವತಿಯರ ಯುಗಾದಿ ಸಂಭ್ರಮಕ್ಕೆ ಪ್ರಿಂಟೆಡ್‌ ಲೆಹೆಂಗಾ ಸಾಥ್‌

ಚಿತ್ರಕೃಪೆ: ವೀರು ಫೋಟೋಗ್ರಫಿ, ಚಿತ್ರಗಳು: ಪ್ರತಿಭಾ ಗೋವಿಂದರಾಜು, ಮಾಡೆಲ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಯುಗಾದಿಯ ಫೆಸ್ಟಿವ್‌ ಸೀಸನ್‌ನಲ್ಲಿ ಅತ್ಯಾಕರ್ಷಕ ಪ್ರಿಂಟೆಡ್‌ ಲೆಹೆಂಗಾಗಳು ಫ್ಯಾಷನ್‌ ಲೋಕದಲ್ಲಿ (Ugadi Fashion) ಟ್ರೆಂಡಿಯಾಗಿವೆ. ಇನ್ನು, ನಾರ್ತ್‌ ಇಂಡಿಯನ್‌ ಸ್ಟೈಲ್‌ನಲ್ಲಿದ್ದ ಈ ಲೆಹೆಂಗಾಗಳು ಇದೀಗ ಸೌತ್‌ ಇಂಡಿಯನ್‌ ಲುಕ್‌ನಲ್ಲಿ ಕಾಣಿಸಿಕೊಂಡಿವೆ. ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ ಆಗಮಿಸಿವೆ. ಈ ಲೆಹೆಂಗಾಗಳು ಸೀಸನ್‌ನ ನಾನಾ ಕಲರ್‌ಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾ ವರ್ಗದ ಯುವತಿಯರಿಗೆ ಗ್ಲಾಮರಸ್‌ ಲುಕ್‌ ನೀಡುತ್ತಿವೆ ಎನ್ನುತ್ತಾರೆ ಮಾಡೆಲ್‌ ಪ್ರತಿಭಾ. ಫೆಸ್ಟಿವ್‌ ಸೀಸನ್‌ನ ಟ್ರೆಂಡ್‌ಗೆ ಸೂಟ್‌ ಆಗುವಂತೆ ಈ ಬಾರಿ ಸಮ್ಮರ್‌ ಫ್ಲೋರಲ್‌ ಪ್ರಿಂಟೆಡ್‌ ಹಾಗೂ ಹೆವ್ವಿ ಡಿಸೈನ್‌ನವು ಫೆಸ್ಟಿವ್‌ ಸೀಸನ್‌ ಟ್ರೆಂಡ್‌ನಲ್ಲಿ ಹಂಗಾಮ ಎಬ್ಬಿಸಿವೆ ಎನ್ನುತ್ತಾರೆ.

7

ಯುಗಾದಿ ಸಂಭ್ರಮಕ್ಕೆ ಸಾಥ್‌

ಇನ್ನು, ಯುಗಾದಿ ಸಂಭ್ರಮಕ್ಕೆ ಸಾಥ್‌ ನೀಡಲು ನಾನಾ ಬಗೆಯ ಎಥ್ನಿಕ್‌ ಲುಕ್‌ ನೀಡುವ ಪ್ರಿಂಟ್ಸ್‌ನಲ್ಲಿ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಫ್ಲೋರಲ್‌, ಜೆಮೆಟ್ರಿಕಲ್‌, ಮಂಡಲಾ ಆರ್ಟ್‌ ಸೇರಿದಂತೆ ನಾನಾ ಪ್ರಿಂಟೆಡ್‌ನವು ಸಮ್ಮರ್‌ ಸೀಸನ್‌ಗೆ ಮ್ಯಾಚ್‌ ಆಗುವಂತೆ ಬಂದಿವೆ. ಇವು ಅತ್ಯಾಕರ್ಷಕವಾಗಿ ಕಾಣಿಸುವುದರೊಂದಿಗೆ ಉಲ್ಲಾಸವನ್ನು ಹೆಚ್ಚಿಸುತ್ತವೆ. ಜತೆಗೆ ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಆದ್ಯಾ ಡಿಸೈನರ್‌ ಪೂನಂ ಅರುಣ್‌. ಅವರ ಪ್ರಕಾರ, ಫ್ಯಾಷನ್‌ ಲೋಕದಲ್ಲಿ ಈ ಬಾರಿ ಸಾಮಾನ್ಯ ಹುಡುಗಿಯರು ಧರಿಸಬಹುದಾದ ಈ ಪ್ರಿಂಟೆಡ್‌ ಲೆಹೆಂಗಾಗಳನ್ನು ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ನಲ್ಲಿ ಧರಿಸುವಂತೆ ಡಿಸೈನ್‌ ಮಾಡಲಾಗಿದೆ. ಅದರಲ್ಲೂ ಯಂಗ್‌ ಲುಕ್‌ ನೀಡುವ ಈ ಪ್ರಿಂಟ್ಸ್‌ನವು ಬಿಡುಗಡೆಗೊಂಡಿವೆ. ಮಾನಿನಿಯರ ಮನಸೆಳೆದಿವೆ ಎನ್ನುತ್ತಾರೆ.

ಸೆಲೆಬ್ರೆಟಿ ಲುಕ್‌

ಈ ಪ್ರಿಂಟೆಡ್‌ ಲೆಹೆಂಗಾಗಳನ್ನು ಧರಿಸಿದಾಗ ಸೆಲೆಬ್ರೆಟಿ ಲುಕ್‌ ನೀಡುತ್ತವೆ. ಇವುಗಳ ಮನಮೋಹಕ ಪ್ರಿಂಟ್ಸ್‌ ಹಾಗೂ ವಿನ್ಯಾಸ ಎಂತಹ ಹುಡುಗಿಯರನ್ನು ಕೂಡ ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ. ಸೂಕ್ತ ರೀತಿಯಲ್ಲಿ ಮೇಕೋವರ್‌ ಹಾಗೂ ಸ್ಟೈಲಿಂಗ್‌ ಮಾಡಿದಲ್ಲಿ ಸೆಲೆಬ್ರೆಟಿಯಂತೆ ಕಾಣಿಸುವುದು ಗ್ಯಾರಂಟಿ ಎನ್ನುತ್ತಾರೆ ಮಾಡೆಲ್‌ ಪ್ರತಿಭಾ.

8

ಗ್ಲಾಮರಸ್‌ ಲೆಹೆಂಗಾ ಡಿಸೈನ್‌

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಪ್ರಿಂಟೆಡ್‌ ಡಿಸೈನ್‌ ಚೂಸ್‌ ಮಾಡುವುದು ಉತ್ತಮ. ತೆಳ್ಳಗೆ ಉದ್ದಗಿದ್ದಲ್ಲಿ ಆದಷ್ಟೂ ಯಾವ ಶೈಲಿಯದ್ದಾದರೂ ಓಕೆ. ಕುಳ್ಳಗಿರುವವರಿಗೆ ಹೆವ್ವಿ ಡಿಸೈನ್‌ನದ್ದು, ಅಗಲವಾದ ಪ್ರಿಂಟ್ಸ್ನದ್ದು ಅವಾಯ್ಡ್‌ ಮಾಡಿ. ಸನ್‌ ಕಲರ್‌ ಈ ಸೀಸನ್‌ನ ಟ್ರೆಂಡ್‌. ಒಟ್ಟಿನಲ್ಲಿ ಗ್ರ್ಯಾಂಡ್‌ ಲುಕ್‌ಗೆ ಫ್ಯಾಬ್ರಿಕ್‌ ನೋಡಿ ಆಯ್ಕೆ ಮಾಡಿ ಎನ್ನುತ್ತಾರೆ ಡಿಸೈನರ್‌ ಪೂನಂ.

ಈ ಸುದ್ದಿಯನ್ನೂ ಓದಿ | Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ

ದುಪಟ್ಟಾ ಸ್ಟೈಲಿಂಗ್‌

ಲೆಹೆಂಗಾ ಆಕರ್ಷಕವಾಗಿ ಕಾಣಿಸಲು ಕೆಲವೊಮ್ಮೆ ದುಪಟ್ಟಾಗಳು ಕೂಡ ಕಾರಣವಾಗುತ್ತವೆ. ಹಾಗಾಗಿ ಪ್ರಿಂಟೆಡ್‌ ಲೆಹೆಂಗಾ ಜತೆ ಆದಷ್ಟೂ ಸಾದಾ ದುಪಟ್ಟಾ, ನೆಟ್ಟೆಡ್‌ ಅಥವಾ ಸಿಲ್ಕ್‌, ಅರ್ಗಾನ್ಜಾ ಅಂತವನ್ನು ಆಯ್ಕೆ ಮಾಡಿ, ಧರಿಸಿ. ದುಪಟ್ಟಾ ಡ್ರೇಪಿಂಗ್‌ ಲೆಹೆಂಗಾದ ಇಡೀ ಲುಕ್‌ ಬದಲಿಸುತ್ತದೆ ಎನ್ನುತ್ತಾರೆ ಡಿಸೈನರ್‌.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)