International Women's Day 2025: ವುಮೆನ್ಸ್ ಡೇ ಸಂಭ್ರಮಕ್ಕೆ ವಿಂಟೇಜ್ ಫ್ಯಾಷನ್ ಜ್ಯುವೆಲರಿಗಳ ಸಾಥ್
Vintage Jewel Fashion: ವುಮೆನ್ಸ್ ಡೇ ಸಂಭ್ರಮಕ್ಕೆ ವಿಂಟೇಜ್ ಲುಕ್ ಅಥವಾ ಆ್ಯಂಟಿಕ್ ಲುಕ್ ನೀಡುವ ಮ್ಯಾಟ್ ಅಥವಾ ಡಲ್ ಫಿನಿಶಿಂಗ್ ಆಭರಣಗಳು ಸಾಥ್ ನೀಡಲು ಸಜ್ಜಾಗಿವೆ. ಯಾವ್ಯಾವ ಡಿಸೈನ್‌ನವು ಮಾರುಕಟ್ಟೆಗೆ ಕಾಲಿಟ್ಟಿವೆ? ಯಾವುದೆಲ್ಲಾ ಹೆಚ್ಚು ಚಾಲ್ತಿಯಲ್ಲಿವೆ? ಈ ಎಲ್ಲದರ ಕುರಿತಂತೆ ಜ್ಯುವೆಲ್ ಡಿಸೈನರ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳಾ ದಿನಾಚಾರಣೆ ಸಂಭ್ರಮಕ್ಕೆ(International Women's Day 2025) ವಿಂಟೇಜ್ ಜ್ಯುವೆಲರಿಗಳು (Vintage Jewel Fashion) ಸಾಥ್ ನೀಡಲು ಸಜ್ಜಾಗಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ಹೌದು, ಧರಿಸಿದಾಗ ಡಲ್ ಲುಕ್ ನೀಡಿದರೂ, ನೋಡಲು ಆಕರ್ಷಕವಾಗಿ ಕಾಣಿಸುವ, ಮ್ಯಾಟ್ ಫಿನಿಶಿಂಗ್ ಇರುವಂತಹ ವಿಂಟೇಜ್ ಲುಕ್ ನೀಡುವ ಆಭರಣಗಳು ಈ ಮಾಸದಲ್ಲಿ ಟ್ರೆಂಡಿಯಾಗಿವೆ. ಅವು ಬಂಗಾರದ್ದೇ ಆಗಿರಬಹುದು, ಇಲ್ಲವೇ ಇತರೇ ಲೋಹದ್ದಾಗಿರಬಹುದು. ಒಟ್ಟಿನಲ್ಲಿ, ಝಗಮಗಿಸದ ಈ ಜ್ಯುವೆಲರಿಗಳು, ಈ ಬಾರಿಯ ವುಮೆನ್ಸ್ ಡೇ ಸೆಲೆಬ್ರೇಷನ್‌ಗೆ ಜತೆಯಾಗಲು ಸಜ್ಜಾಗಿವೆ. ಇದಕ್ಕೆ ಕಾರಣವೂ ಇದೆ. ಇವು ಮಹಿಳೆಯರಿಗೆ ವಿಂಟೇಜ್ ಲುಕ್ ಜತೆ ಜತೆಗೆ ಕ್ಲಾಸಿ ಲುಕ್ ನೀಡುತ್ತವೆ. ಜವಾಬ್ದಾರಿ ಮಹಿಳೆಯರಂತೆ ಬಿಂಬಿಸುತ್ತವೆ ಎಂಬುದು ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ ದಿಯಾ.

ಕ್ಲಾಸಿ ಲುಕ್ ನೀಡುವ ವಿಂಟೇಜ್ ಜ್ಯುವೆಲರಿಗಳು
ಅಂದ ಹಾಗೆ, ಸದಾ ಹೊಳೆಯುವ ಆಭರಣಗಳೆಲ್ಲವನ್ನು ಧರಿಸಲಾಗುವುದಿಲ್ಲ! ಇನ್ನು, ತೀರಾ ಜಗಮಗಿಸುವ ಆಭರಣಗಳನ್ನು ಧರಿಸುವುದರಿಂದ ಕೆಲವೊಮ್ಮೆ ಮುಖದ ಸೌಂದರ್ಯ ಡಲ್ ಆಗುತ್ತದೆ. ರೇಷ್ಮೆ ಉಡುಪು ಹಾಗೂ ಸೀರೆಗಳನ್ನು ಧರಿಸಿದಾಗ, ಕೆಲವೊಮ್ಮೆ ಡಲ್ ಫಿನಿಶಿಂಗ್ ಆಭರಣಗಳನ್ನು ಧರಿಸುವುದರಿಂದ ರಿಚ್ ರಾಯಲ್ ಲುಕ್ ಪಡೆಯಬಹುದು ಎನ್ನುವ ಜ್ಯುವೆಲ್ ಸ್ಟೈಲಿಸ್ಟ್ ಸಾಕ್ಷಿ ಪ್ರಕಾರ, ಈ ಸೀಸನ್‌ನಲ್ಲಿ, ಅದರಲ್ಲೂ ಮಾರ್ಚ್ ಮಾಸದಲ್ಲಿ, ಎಲ್ಲೆಡೆ ಮಹಿಳಾ ದಿನಾಚಾರಣೆಯ ಸಮಾರಂಭಗಳು ನಡೆಯುತ್ತವೆ. ಹಾಗಾಗಿ ಈ ಬಗೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳೆಯರು, ಕ್ಲಾಸಿ ಲುಕ್ ನೀಡುವಂತಹ ವಿಂಟೇಜ್ ಫ್ಯಾಷನ್ ಜ್ಯುವೆಲರಿಗಳನ್ನೇ ಆಯ್ಕೆ ಮಾಡತೊಡಗಿದ್ದಾರೆ. ಅಚ್ಚರಿ ಎಂದರೆ, ಬಂಗಾರದ್ದಕ್ಕಿಂತ ಸಿಲ್ವರ್, ಬ್ಲ್ಯಾಕ್-ವೈಟ್ ಮೆಟಲ್, ಆಕ್ಸಿಡೈಸ್ಡ್ ವಿಂಟೇಜ್ ಆಭರಣಗಳನ್ನು ಕೊಳ್ಳುವವರೇ ಹೆಚ್ಚಾಗಿದ್ದಾರೆ ಎನ್ನುತ್ತಾರೆ.

ಬಂಗಾರದ ವಿಂಟೇಜ್ ಜ್ಯುವೆಲರಿ ಖರೀದಿಸುವಾಗ ಜಾಗೃತೆ
ಬಂಗಾರದ ವಿಂಟೇಜ್ ಜ್ಯುವೆಲರಿ ಖರೀದಿ ಮಾಡುವುದಾದಲ್ಲಿ ಮಾತ್ರ ಜಾಗೃತೆ ವಹಿಸಿ. ಡಲ್ ಫಿನಿಶಿಂಗ್ ಡಿಸೈನ್‌ನಲ್ಲಿ ಯಾವುದೇ ಕಾರಣಕ್ಕೂ ಪರಿಶುದ್ಧದ ಬಂಗಾರದ್ದನ್ನು ಕೊಳ್ಳಲು ಸಾಧ್ಯವಿಲ್ಲ. ಇನ್ನು ಕೆಲವರ ಸ್ಕಿನ್ ಟೋನ್‌ಗೆ ಈ ಡಲ್ ಫಿನಿಶಿಂಗ್ ಆಭರಣಗಳು ಒಪ್ಪುವುದಿಲ್ಲ. ಮತ್ತಷ್ಟು ಡಲ್ ಆಗಿ ಬಿಂಬಿಸುತ್ತವೆ. ಕೆಲವು ಕಾಪರ್ ಫಿನಿಶಿಂಗ್ ಹೆಸರಲ್ಲೂ ಡಲ್ ಫಿನಿಶಿಂಗ್‌ನಲ್ಲಿ ದೊರೆಯುತ್ತವೆ. ಹಾಗಾಗಿ ಬಂಗಾರದ್ದನ್ನು ಕೊಳ್ಳುವಾಗ ಮಾತ್ರ ಎಚ್ಚರವಹಿಸಬೇಕು ಎನ್ನುತ್ತಾರೆ ಜ್ಯುವೆಲ್ ಸಲಹೆಗಾರರು.

ಆರ್ಟಿಫಿಷಿಯಲ್ ವಿಂಟೇಜ್ ಫ್ಯಾಷನ್ ಆಭರಣಗಳು
ಆರ್ಟಿಫಿಷಿಯಲ್ ವಿಂಟೇಜ್ ಆಭರಣಗಳನ್ನು ಧರಿಸುವುದು ಬೆಸ್ಟ್ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಕಿ, ಅವರು ಹೇಳುವಂತೆ, ಇವು ಕೈಗೆಟಕುವ ಬೆಲೆಯಲ್ಲಿ ದೊರಕುತ್ತವೆ ಅಲ್ಲದೇ, ಉಡುಗೆಗಳಿಗೆ ಮ್ಯಾಚ್ ಆಗುವಂತೆಯೂ ಧರಿಸಬಹುದು. ಬೇಕಾದ ಟ್ರೆಂಡಿ ಡಿಸೈನ್‌ನವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ.

ವಿಂಟೇಜ್ ಫ್ಯಾಷನ್ ಆಭರಣಗಳ ಪ್ರಿಯರಿಗೆ ಸಿಂಪಲ್ ಟಿಪ್ಸ್
- ನಿಮ್ಮ ಡ್ರೆಸ್‌ಕೋಡ್‌ಗೆ ಹೊಂದುವಂತದ್ದನ್ನು ಧರಿಸಿ.
- ಫಿನಿಶಿಂಗ್ ಇರುವಂತದ್ದನ್ನು ಧರಿಸಿ, ಇಲ್ಲವಾದಲ್ಲಿ ಉಡುಗೆಯ ದಾರ ಕಿತ್ತು ಬರಬಹುದು.
- ಗ್ರ್ಯಾಂಡ್ ಸಮಾರಂಭಗಳಿಗೆ ಆಕರ್ಷಕವಾಗಿ ಕಾಣುತ್ತವೆ.
- ಸೂಕ್ತ ನಿರ್ವಹಣೆ ಜತೆಗೆ ಧರಿಸಿದ ನಂತರ ಪ್ರತ್ಯೇಕವಾಗಿ ಎತ್ತಿಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಬಂತು ಫೆಮಿನೈನ್ ಲುಕ್ ನೀಡುವ ಡಿಸೈನರ್‌ವೇರ್ಸ್