Winter Party Pants: ವೀಕೆಂಡ್ ಪಾರ್ಟಿ ಪ್ರಿಯರನ್ನು ಸವಾರಿ ಮಾಡುತ್ತಿರುವ ಡಿಸ್ಕೊ ಪ್ಯಾಂಟ್ಸ್
Winter Party Pants Fashion 2025: ಈ ಸೀಸನ್‌ನಲ್ಲಿ ವೀಕೆಂಡ್ ಪಾರ್ಟಿ ಪ್ರಿಯರಿಗೆಂದೇ ನಾನಾ ಬಗೆಯ ಡಿಸ್ಕೋ ಪ್ಯಾಂಟ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಮಿಡ್ ವಿಂಟರ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಸ್ಟೈಲಿಂಗ್ ಹೇಗೆ? ಫ್ಯಾಷನಿಸ್ಟಾಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ
ಮಿಡ್ ವಿಂಟರ್ ಪಾರ್ಟಿ ಫ್ಯಾಷನ್‌ನಲ್ಲಿ ಇದೀಗ ವೈವಿಧ್ಯಮಯ ಡಿಸ್ಕೋ ಪ್ಯಾಂಟ್‌ಗಳು (Winter Party Pants Fashion 2025) ಎಂಟ್ರಿ ನೀಡಿವೆ. ಹೌದು, ಕೆಲವು ನೋಡಲು ಶೈನಿಂಗ್ ಫ್ಯಾಬ್ರಿಕ್‌ನಿಂದ ಮಿನುಗುತ್ತಿದ್ದರೆ, ಇನ್ನು ಕೆಲವು ಪ್ಯಾಂಟ್‌ಗಳು ವೆಲ್ವೆಟ್ ಇಲ್ಲವೇ ಪ್ರಿಂಟೆಡ್ ಅಥವಾ ಸಿಲ್ಕ್‌ನ ಫ್ಯಾಬ್ರಿಕ್‌ನಲ್ಲಿ ವೈಬ್ರೆಂಟ್ ಶೇಡ್‌ಗಳಲ್ಲಿ ಟ್ರೆಂಡಿಯಾಗಿವೆ. ವೀಕೆಂಡ್ ಪಾರ್ಟಿ ಪ್ರಿಯರನ್ನು ಹಾಗೂ ಫ್ಯಾಷನ್ ಪ್ರಿಯರನ್ನು ಸೆಳೆದಿವೆ. ನಿಯಾನ್, ಬ್ಲ್ಯೂ, ರೆಡ್, ರೇಡಿಯಂ, ಮಜೆಂತಾ, ಯೆಲ್ಲೊ, ಸನ್ ಕಲರ್, ಪಿಸ್ತಾ, ಸ್ಟ್ರಾಬೆರಿ ಶೇಡ್, ಕರೆಂಟ್ ಬ್ಲ್ಯೂ ಹೀಗೆ ನಾನಾ ಬಗೆಯ ವೈಬ್ರೆಂಟ್ ಶೇಡ್‌ನವು ಅತಿ ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ.
ಗ್ಯಾಲಕ್ಸಿ/ಪ್ರಿಂಟೆಡ್ ಡಿಸ್ಕೊ ಪ್ಯಾಂಟ್ಸ್
ಸೀದಾ ಸಾದಾ ಡಿಸೈನ್‌ನಲ್ಲಿ ಲಭ್ಯವಿದ್ದ ಡಿಸ್ಕೋ ಪ್ಯಾಂಟ್‌ಗಳು ಇಂದು ಗ್ಯಾಲಕ್ಸಿ ಹಾಗೂ ಪ್ರಿಂಟೆಡ್ ಶೈನಿಂಗ್ ಫ್ಯಾಬ್ರಿಕ್‌ನಲ್ಲೂ ಬಂದಿವೆ. ಇನ್ನು ಸ್ಟಾರ್ಸ್ ಲೋಕ ಸೇರಿದಂತೆ ನಾನಾ ಬಗೆಯ ಚಿತ್ತಾರಗಳು ಮೂಡಿರುವಂತಹ ಡಿಸೈನ್‌ಗಳು ಕಾಮನ್ ಆಗಿವೆ. ಇನ್ನು ಪ್ರಿಂಟೆಡ್ ಡಿಸೈನ್‌ನಲ್ಲಿ ಫ್ಲೋರಲ್ ಹಾಗೂ ಜಾಮೆಟ್ರಿಕಲ್ ವಿನ್ಯಾಸದವು ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಾಗಾ.

ಡಿಸ್ಕೊ ಲೆಗ್ಗಿಂಗ್ಸ್ ಜಾದೂ
ಸ್ಲಿಮ್ ಫಿಟ್ ಪ್ಯಾಂಟ್ ಹೊರತುಪಡಿಸಿದರೆ, ಸ್ಲಿಮ್ ಫಿಟ್ ಲೆಗ್ಗಿಂಗ್ಸ್‌ನಲ್ಲೂ ಇವು ಕಾಣಿಸಿಕೊಳ್ಳುತ್ತಿವೆ. ಹಾಗೆಂದು ಇವು ಎಲ್ಲಾ ಬಗೆಯ ಟಾಪ್‌ಗಳಿಗೆ ಸೂಟ್ ಆಗುತ್ತವೆ ಎಂದಲ್ಲ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಇವುಗಳಿಗೆ ಟಾಪ್ ಲೂಸಾಗಿರುವಂತವು ಮ್ಯಾಚ್ ಆಗುತ್ತವೆ. ಇನ್ನು ಕೆಪ್ರೀಸ್ ಶೈಲಿಯವು ಚಾಲ್ತಿಯಲ್ಲಿವೆ.

ಸ್ಲಿಮ್ ಹುಡುಗಿಯರ ಚಾಯ್ಸ್
ಸ್ಲಿಮ್ ಆಗಿರುವವರಿಗೆ ಇವು ನೋಡಲು ಚೆನ್ನಾಗಿ ಕಾಣುತ್ತವೆ. ಪರ್ಫೆಕ್ಟ್ ಬಾಡಿ ಮಾಸ್ ಇಂಡೆಕ್ಸ್ ಇರುವವರಿಗೆ ಇವು ಸೂಟ್ ಆಗುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರನ್ನ. ಪ್ಲಂಪಿಯಾಗಿರುವವರು ಕೂಡ ಇದನ್ನು ಧರಿಸಬಹುದು ಆದರೆ, ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು. ಕೊಂಚ ಟಾಪ್ ಉದ್ದನಾಗಿರುವುದನ್ನು ಧರಿಸಬೇಕು. ಟಮ್ಮಿಯ ಕೆಳ ಭಾಗದವರೆಗೆ ಇವು ಇರಬೇಕು ಎನ್ನುತ್ತಾರೆ ಅವರು.
ಈ ಸುದ್ದಿಯನ್ನೂ ಓದಿ | Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!
ಡಿಸ್ಕೊ ಪ್ಯಾಂಟ್ಸ್ ಪ್ರಿಯರಿಗಾಗಿ ಒಂದಿಷ್ಟು ಟಿಪ್ಸ್
- ಡಿಸ್ಕೊ ಪ್ಯಾಂಟ್ಸ್ ಶೇಡ್ ನೋಡಿ, ಟಾಪ್ ಸೆಲೆಕ್ಟ್ ಮಾಡಿ.
- ಫಂಕಿ ಲುಕ್‌ಗೆ ಇವು ಸಾಥ್ ನೀಡುವುದರಿಂದ ಆದಷ್ಟೂ ಟ್ರೆಡಿಷನಲ್ ಲುಕ್ ಬೇಡ.
- ಟ್ರೆಡಿಷನಲ್ ಲುಕ್ ಹಾಗೂ ರೆಟ್ರೊ ಫ್ಯಾಷನ್ ಒಟ್ಟೊಟ್ಟಿಗೆ ಮ್ಯಾಚ್ ಮಾಡಬೇಡಿ.
- ಹೇರ್‌ಸ್ಟೈಲ್ ಇದಕ್ಕೆ ಸೂಟ್ ಆಗುವಂತಿರಬೇಕು.
- ಫುಟ್‌ವೇರ್ ಕೂಡ ಡಿಸ್ಕೊ ಪ್ಯಾಂಟ್ ಶೇಡ್‌ಗೆ ಸೂಟ್ ಆಗುವಂತಿರಬೇಕು
(ಲೇಖಕಿ: ಫ್ಯಾಷನ್ ಪತ್ರಕರ್ತೆ)