Holi Dresscode 2025: ಹೋಳಿ ಸಂಭ್ರಮಕ್ಕೆ ಬಂತು 3 ಶೈಲಿಯ ಡ್ರೆಸ್ ಕೋಡ್ಸ್
Holi Dresscode 2025: ಹೋಳಿ ಹಬ್ಬದಂದು ಯಾವ ಬಗೆಯ ಡ್ರೆಸ್‌ಗಳನ್ನು ಧರಿಸಿದರೇ ಸೂಕ್ತ? ಟ್ರೆಂಡ್‌ನಲ್ಲಿ ಯಾವ್ಯಾವುದಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಮಾಹಿತಿ ನೀಡುವರೊಂದಿಗೆ ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಸೆಲೆಬ್ರೇಷನ್‌ಗೆ ನಾನಾ ಬಗೆಯ ವೆರೈಟಿ ವಿನ್ಯಾಸದ ಆಕರ್ಷಕ ಡಿಸೈನರ್‌ವೇರ್‌ಗಳು ಆಗಮಿಸಿವೆ. ಕೇವಲ ಶ್ವೇತ ವರ್ಣದವು ಮಾತ್ರವಲ್ಲ, ಇಂಡೋ-ವೆಸ್ಟರ್ನ್ ಶೈಲಿಯವು, ವಾಟರ್ ಫ್ರೂಫ್ ಫ್ಯಾಬ್ರಿಕ್‌ನವು ಸೇರಿದಂತೆ ನಾನಾ ವಿನ್ಯಾಸದವು ಈ ಸೀಸನ್‌ನಲ್ಲಿ ಬಿಡುಗಡೆಗೊಂಡಿವೆ. ಇನ್ನು, ಹೋಳಿ ಸಂಭ್ರಮಕ್ಕೆ ಆದಷ್ಟೂ ಹೆವಿ ಹಾಗೂ ಡಿಸೈನರ್‌ವೇರ್‌ಗಳ ಬದಲು ಸಿಂಪಲ್ ಶೇಡ್‌ವೇರ್‌ಗೆ ಪ್ರಾಮುಖ್ಯತೆ ನೀಡಿ ಎನ್ನುತ್ತಾರೆ ಡಿಸೈನರ್‌ಗಳು. ಅವರ ಪ್ರಕಾರ, ಹೋಳಿಯಂದು ಧರಿಸುವ ಡ್ರೆಸ್‌ಗಳು (Holi Dresscode 2025) ಮತ್ತೊಮ್ಮೆ ಧರಿಸಲು ಸಾಧ್ಯವಾಗುವುದಿಲ್ಲ. ಆಟವಾಡಿದ ನಂತರ ಬಣ್ಣಗಳ ಕಲೆಯು ಹಾಗೆಯೇ ಡ್ರೆಸ್ ಮೇಲೆ ಉಳಿಯಬಹುದು. ಇಲ್ಲವೇ ಮಾಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ವೈಟ್ ಡ್ರೆಸ್‌ಗಳಲ್ಲೂ ವೆರೈಟಿ ವಿನ್ಯಾಸ
ಡಿಸೈನರ್ ದೀಕ್ಷಾ ಹೇಳುವಂತೆ, ಹೋಳಿಯಂದು ಪಕ್ಕಾ ಶ್ವೇತ ವರ್ಣದ ಉಡುಪನ್ನೇ ಅಂದು ಧರಿಸಬೇಕೆಂಬುದಿಲ್ಲ. ಆದರೂ, ಮಿಲ್ಕಿ ವೈಟ್, ಐವರಿ, ಕ್ರೀಮಿಶ್ ವೈಟ್ ಹೀಗೆ ಸಾಕಷ್ಟು ವೈವಿಧಯಮಯ ಪ್ರಿಂಟ್ಸ್ ಇಲ್ಲವೇ ಸಾದಾ ಚೈನಾ ಕಾಲರ್ ಕುರ್ತಾ, ಲಾಂಗ್ ಸಲ್ವಾರ್ ಹಾಗೂ ಕ್ಯಾಶುವಲ್ ಲುಕ್ ನೀಡುವ ಲಾಂಗ್ ಫ್ರಾಕ್ ಸ್ಟೈಲ್ನ ಟೀ ಶರ್ಟ್‌ಗಳು ಹೋಳಿ ಫ್ಯಾಷನ್‌ಗೆ ಎಂಟ್ರಿ ನೀಡಿವೆ.

ಇಂಡೋ-ವೆಸ್ಟರ್ನ್ ಶೈಲಿಯ ಡ್ರೆಸ್
ಎಥ್ನಿಕ್ ಹಾಗೂ ವೆಸ್ಟರ್ನ್ ಶೈಲಿಯ ಕ್ಯಾಶುವಲ್ ಡ್ರೆಸ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಿ ಡಿಸೈನ್ ಮಾಡಿದ ಕುರ್ತಾ, ಸಲ್ವಾರ್ ಹಾಗೂ ಶಾರ್ಟ್ ಹಾಗೂ ಲಾಂಗ್ ಶರಾರಗಳು ಈ ಹೋಳಿಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಲಾಂಗ್ ಟೀ ಶರ್ಟ್, ಫ್ಲಾಟರ್ ಸ್ಲೀವ್ ಹೊಂದಿರುವ ಶಾರ್ಟ್ ವೈಟ್ ಕುರ್ತಾ, ಹಾಲ್ಟರ್‌ನೆಕ್‌ನ ಫ್ರಾಕ್ ಶೈಲಿಯ ಲೈಟ್‌ವೇಟ್‌ನ ಮ್ಯಾಕ್ಸಿ, ಶಾರ್ಟ್ ಟಾಪ್, ಸ್ಟ್ರಾಪ್ ಇರುವ ಎಥ್ನಿಕ್ ಡಿಸೈನ್ ಹೊಂದಿರುವ ಕ್ರಾಪ್ ಟಾಪ್‌ಗಳು, ಅಂಬ್ರೆಲ್ಲಾ ಲೆಹೆಂಗಾ, ಫ್ರಿಲ್ನ ಸಿಂಪಲ್ ಲೆಹೆಂಗಾಗಳು ಚಾಲ್ತಿಯಲ್ಲಿವೆ.

ವಾಟರ್ ಪ್ರೂಫ್ ಫ್ಯಾಬ್ರಿಕ್ ಡ್ರೆಸ್
ಸಾದಾ ಇಲ್ಲವೇ ಮಲ್ಟಿಪಲ್ ಕಲರ್ಸ್‌ನ ಡಿಸೈನರ್‌ವೇರ್‌ಗಳು ಹೋಳಿಯ ಸೀಸನ್‌ನಲ್ಲಿಆಗಮಿಸಿವೆ. ಇವುಗಳ ಮೇಲೆ ಹೆಚ್ಚು ವರ್ಕ್ ಇರುವುದಿಲ್ಲ. ಕೆಲವಂತೂ ವಾಟರ್ ಪ್ರೂಫ್ ಕೂಡ ಆಗಿವೆ. ಇನ್ನು ಕೆಲವು ಹೋಳಿಯ ಬಣ್ಣ ಅಂಟದ ಸಿಂಥೆಟಿಕ್‌ನ ಫ್ಯಾಬ್ರಿಕ್‌ನ ಡ್ರೆಸ್‌ಗಳು ಬಂದಿವೆ.
ಈ ಸುದ್ದಿಯನ್ನೂ ಓದಿ | Makeup Ideas: 10 ನಿಮಿಷಕ್ಕೆ ಫಟಾಫಟ್ ಮೇಕಪ್ ಮಾಡುವುದು ಹೇಗೆ?
ಹೋಳಿಯ ರಂಗಿನಲ್ಲಿ ರಂಗಾಗುವರಿಗಾಗಿ ಟಿಪ್ಸ್
- ಭಾರವಿರುವ ಡ್ರೆಸ್ ಬೇಡ. ಲೈಟ್‌ವೇಟ್‌ನದ್ದು ಆಯ್ಕೆ ಮಾಡಿ.
- ಹೋಳಿಯ ಸೆಲೆಬ್ರೇಷನ್‌ನಲ್ಲಿ ಲೆಸ್ ಥೀಮ್ ಡ್ರೆಸ್‌ಕೋಡ್‌ಗೆ ಸೈ ಎನ್ನಿ.
- ಹೋಳಿ ಡ್ರೆಸ್‌ಗೆ ಹೆಚ್ಚು ದುಂದು ವೆಚ್ಚ ಮಾಡುವ ಅಗತ್ಯವಿರುವುದಿಲ್ಲ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)