Shootout Case: ಶ್ವೇತಭವನನದ ಬಳಿ ಭಾರೀ ಗುಂಡಿನ ದಾಳಿ; ಬೆಚ್ಚಿ ಬಿದ್ದ ಅಮೆರಿಕ
ಶ್ವೇತಭವನದಲ್ಲಿ ಬಳಿ ಗುಂಡಿನ ದಾಳಿ ನಡೆದಿದ್ದು, ಇಡೀ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ಇಬ್ಬರು ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ನಿನ್ನೆ ಬುಧವಾರ ಶ್ವೇತಭವನದಿಂದ ಕೆಲವೇ ಬ್ಲಾಕ್‌ಗಳ ದೂರದಲ್ಲಿ ಗುಂಡಿನ ದಾಳಿ ನಡೆದಿದೆ. ಮೇಯರ್ ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ.
ಶ್ವೇತಭವನ (ಸಾಂದರ್ಭಿಕ ಚಿತ್ರ) -
ವಾಷಿಂಗ್ಟನ್: ಶ್ವೇತಭವನದಲ್ಲಿ (White House) ಬಳಿ ಗುಂಡಿನ ದಾಳಿ ನಡೆದಿದ್ದು, ಇಡೀ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ಇಬ್ಬರು ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ (Shootout Case) ಗಾರ್ಡ್ ಸದಸ್ಯರ ಮೇಲೆ ನಿನ್ನೆ ಬುಧವಾರ ಶ್ವೇತಭವನದಿಂದ ಕೆಲವೇ ಬ್ಲಾಕ್‌ಗಳ ದೂರದಲ್ಲಿ ಗುಂಡಿನ ದಾಳಿ ನಡೆದಿದೆ. ಮೇಯರ್ ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ತಿಳಿಸಿದ್ದಾರೆ.
ಟ್ರಂಪ್ ಆಡಳಿತವು ನಿಯಂತ್ರಣ ತಪ್ಪಿದ ಅಪರಾಧ ಸಮಸ್ಯೆ ಎಂದು ಅಧಿಕಾರಿಗಳು ಬಿಂಬಿಸುತ್ತಿರುವುದನ್ನು ಎದುರಿಸಲು ಮಿಲಿಟರಿಯನ್ನು ಬಳಸುವುದರ ಬಗ್ಗೆ ನ್ಯಾಯಾಲಯದ ಮೊಕದ್ದಮೆಗಳು ಮತ್ತು ವಿಶಾಲ ಸಾರ್ವಜನಿಕ ನೀತಿ ಚರ್ಚೆಗೆ ಉತ್ತೇಜನ ನೀಡುತ್ತಿರುವಾಗಲೇ ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆದಿದೆ. ಶಂಕಿತ ಆರೋಪಿಯನ್ನು ಅಫ್ಘಾನ್ ಪ್ರಜೆ ಎಂದು ನಂಬಲಾಗಿದ್ದು, ಆತ ಸೆಪ್ಟೆಂಬರ್ 2021 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿ ವಾಷಿಂಗ್ಟನ್‌ನಲ್ಲಿ ವಾಸಿಸುತ್ತಿದ್ದ ಎಂದು ಇಬ್ಬರು ಕಾನೂನು ಜಾರಿ ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆದ ದೃಶ್ಯಗಳು
Additional videos involving the shooting of two National Guardsmen today near the White House... -DW https://t.co/gSpDc8UWZy pic.twitter.com/q4upNjPBYr pic.twitter.com/pkyepLofTA
— DeSota Wilson (@desota) November 26, 2025
ಶಂಕಿತನನ್ನು ಕಾನೂನು ಜಾರಿ ಅಧಿಕಾರಿಗಳು ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಿದ್ದಾರೆ, ಆದರೆ ಅಧಿಕಾರಿಗಳು ಇನ್ನೂ ಆತನ ಹಿನ್ನೆಲೆಯನ್ನು ಸಂಪೂರ್ಣವಾಗಿ ದೃಢೀಕರಿಸಲು ತನಿಖೆ ನಡೆಸುತ್ತಿದ್ದಾರೆ. ಶ್ವೇತಭವನದ ವಾಯುವ್ಯಕ್ಕೆ ಸುಮಾರು ಎರಡು ಬ್ಲಾಕ್‌ಗಳಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮೊದಲು ಪ್ರತಿಕ್ರಿಯಿಸಿದವರು ಒಬ್ಬ ಸೈನಿಕರ ಮೇಲೆ ಸಿಪಿಆರ್ ಮಾಡುತ್ತಿರುವುದು ಹಾಗೂ ಇನ್ನೊಬ್ಬರಿಗೆ ಚಕಿತ್ಸೆ ನೀಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
Anmol Bishnoi: ಲಾರೆನ್ಸ್ ಬಿಷ್ಣೋಯ್ ಸಹೋದರನಿಗೆ ಬಿಗ್ ಶಾಕ್; ಅಮೆರಿಕದಿಂದ ಗ್ಯಾಂಗ್‌ಸ್ಟರ್ ಅನ್ಮೋಲ್ ಗಡಿಪಾರು
ಶ್ವೇತಭವನ ಹಾಗೂ ಸುತ್ತಮುತ್ತಲಿನ ಸರ್ಕಾರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಎಫ್‌ಬಿಐ ಈ ಘಟನೆಯನ್ನು ಭಯೋತ್ಪಾದಕ ಕೃತ್ಯದ ಸಾಧ್ಯತೆ ಎಂದು ತನಿಖೆ ಮಾಡುತ್ತಿದೆ. ಶಂಕಿತನ ಎಲ್ಲಾ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.ಇದು ಫೆಡರಲ್ ಅಧಿಕಾರಿಗಳ ಮೇಲೆ ನಡೆದ ದಾಳಿ ಹೀಗಾಗಿ, ಘಟನೆ ಬಳಿಕ ಟ್ರಂಪ್ ಆಡಳಿತವು, ನಗರಕ್ಕೆ 500 ಹೆಚ್ಚುವರಿ ನ್ಯಾಷನಲ್ ಗಾರ್ಡ್ ಯೋಧರನ್ನು ನಿಯೋಜಿಸಲು ಆದೇಶಿಸಿದೆ.