Hong kong fire tragedy: ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ, 36 ಸಾವು; ವಿಡಿಯೋ ಇಲ್ಲಿದೆ
Hong kong Fire: ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ 8 ವಸತಿ ಸಂಕೀರ್ಣದಲ್ಲಿ 2000 ಮನೆಗಳಿದ್ದು, ಇದರಲ್ಲಿ 4800ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 1980ರಲ್ಲಿ ನಿರ್ಮಿಸಿದ ಈ ಕಟ್ಟಡಗಳ ನವೀಕರಣ ನಡೆಯುತ್ತಿದ್ದು, ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನವೀಕರಣ ವೇಳೆ ಬಳಸಿದ ಸಾಮಗ್ರಿಗಳಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.
ಹಾಂಗ್ ಕಾಂಗ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ -
ಹಾಂಕಾಂಗ್, ನ.27: ಹಾಂಗ್ ಕಾಂಗ್‌ನ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ (Hong kong Fire tragedy) ಕಾಣಿಸಿಕೊಂಡು ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಂಗ್ ಕಾಂಗ್‌ನ ತೈ ಪೊ ಜಿಲ್ಲೆಯಲ್ಲಿ ಹಲವಾರು ಬಹುಮಹಡಿ ಅಪಾರ್ಟ್ಮೆಂಟ್ (Apartment building) ಕಟ್ಟಡಗಳಲ್ಲಿ ಇಂದು ಸಂಭವಿಸಿದ ದೊಡ್ಡ ಬೆಂಕಿ ದುರಂತದ ನಂತರ 36 ಜನರು ಸಾವನ್ನಪ್ಪಿದ್ದಾರೆ. 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಸೇವೆಗಳ ಇಲಾಖೆ ತಿಳಿಸಿದೆ.
ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಸುಮಾರು 700 ನಿವಾಸಿಗಳನ್ನು ತಾತ್ಕಾಲಿಕ ಬೇರೆಡೆಗೆ ಸ್ಥಳಾಂತರಿಸಲಾಯಿತು. ಬೆಂಕಿ ಆರಿಸಲು ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸೇರಿದಂತೆ 36 ಜನರು ಮೃತಪಟ್ಟಿದ್ದಾರೆ. ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ 8 ವಸತಿ ಸಂಕೀರ್ಣದಲ್ಲಿ 2000 ಮನೆಗಳಿದ್ದು, ಇದರಲ್ಲಿ 4800ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 1980ರಲ್ಲಿ ನಿರ್ಮಿಸಿದ ಈ ಕಟ್ಟಡಗಳ ನವೀಕರಣ ನಡೆಯುತ್ತಿದ್ದು, ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನವೀಕರಣ ವೇಳೆ ಬಳಸಿದ ಸಾಮಗ್ರಿಗಳಲ್ಲಿ ಮೊದಲಿಗೆ ಬೆಂಕಿ ಕಾಣಿಸಿದ್ದು, ಅದು ಕೆಲವೇ ಹೊತ್ತಿನಲ್ಲಿ ಎಲ್ಲೆಡೆ ಹಬ್ಬಿ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಹಬ್ಬಿತು.
ಬೆಂಕಿ ದುರಂತದ ವಿಡಿಯೋ ಇಲ್ಲಿದೆ:
#SCENE A #fire engulfed a residential building in #HongKong's northern #TaiPo district on Wednesday, with plumes of thick grey smoke billowing out as emergency services battled to subdue the blaze.#香港 #大埔 火灾 pic.twitter.com/QyiGmaDmMA
— ShanghaiEye🚀official (@ShanghaiEye) November 26, 2025
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವಲ್ಲಿ 128 ಅಗ್ನಿಶಾಮಕ ವಾಹನಗಳು, 57 ಅಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೆಲ ಸಮುಚ್ಚಯದಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಹಡಿಗಳಲ್ಲಿ ಸಿಲುಕಿರುವ ನಿವಾಸಿಗಳನ್ನು ತಲುಪಲು ಅಗ್ನಿಶಾಮಕ ದಳದವರು ಹೆಣಗಾಡುತ್ತಿದ್ದಾರೆ.
ಆಂಬ್ಯುಲೆನ್ಸ್‌ಗೆ ಬೆಂಕಿ; ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ
ಘಟನೆಗೆ ಸಂಬಂಧಿಸಿದಂತೆ ಮೂವರು ಪುರುಷರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಮುಂಜಾನೆ ಬಹಿರಂಗಪಡಿಸಿದ್ದಾರೆ, ಇಬ್ಬರು ನಿರ್ದೇಶಕರು ಮತ್ತು ನಿರ್ಮಾಣ ಕಂಪನಿಯ ಸಲಹೆಗಾರರು. ಸಿಎನ್ಎನ್ ಪ್ರಕಾರ, ಕೆಲವು ಅಪಾರ್ಟ್ಮೆಂಟ್‌ಗಳಲ್ಲಿ ಕಿಟಕಿಗಳನ್ನು ಮುಚ್ಚುವ, ಬೇಗನೆ ಸುಡುವ ಪಾಲಿಸ್ಟೈರೀನ್ ಬೋರ್ಡ್‌ಗಳು ಕಂಡುಬಂದಿವೆ. ರಕ್ಷಣಾ ಬಲೆಗಳು, ಕ್ಯಾನ್ವಾಸ್ ಹಾಳೆಗಳು, ಪ್ಲಾಸ್ಟಿಕ್ ಹೊದಿಕೆಗಳು ಸೇರಿದಂತೆ ಅಲ್ಲಿದ್ದ ನಿರ್ಮಾಣ ಸಾಮಗ್ರಿಗಳು ಅಗತ್ಯವಾದ ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಂಡಿಲ್ಲ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದು ಹಾಂಕಾಂಗ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಎರಡನೇ ಅತಿದೊಡ್ಡ ಅಗ್ನಿ ದುರಂತ. 1996ರ ನವೆಂಬರ್‌ಲ್ಲಿ ಕೌಲೂನ್‌ನಲ್ಲಿ ನಡೆದ ಅಗ್ನಿ ಅವಘಢದಲ್ಲಿ 41 ಮಂದಿ ಸಾವನ್ನಪ್ಪಿದ್ದರು.