Nobel Prize 2025: ಈ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ- ಯಾರ್ಯಾರ ಹೆಸರು ಪಟ್ಟಿಯಲ್ಲಿದೆ?
ಇಂದು ರಸಾಯನಶಾಸ್ತ್ರವಿಷಯದ ಬಗ್ಗೆ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಶುಕ್ರವಾರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಸ್ವೀಡನ್‌ನ ರಾಜಕೀಯ ವಿಜ್ಞಾನ ಅಕಾಡೆಮಿಯು 2025ರ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನು ಸಸುಮು ಕಿಟಾಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ನೀಡಿದ್ದು, "ಮೆಟಲ್–ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳ ಅಭಿವೃದ್ಧಿಗೆ" ಸಂಬಂಧಿಸಿದ್ದ ಸಂಶೋಧನೆ ಈ ಗೌರವ ಲಭಿಸಿದೆ.

-

ಸ್ಟಾಕ್‌ಹೋಮ್: 2025ರ ನೊಬೆಲ್ ಪ್ರಶಸ್ತಿಗಳ(Nobel Prize 2025) ಘೋಷಣೆ ಸೋಮವಾರದಿಂದ (ಅಕ್ಟೋಬರ್ 6) ಆರಂಭವಾಗಿದ್ದು, ಈಗಾಗಲೇ ವೈದ್ಯಕೀಯ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಸಕ್ತ ವರ್ಷದ ರಸಾಯನಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಬುಧವಾರ (ಅಕ್ಟೋಬರ್ 8) ಅಂದರೆ ಇಂದು ಘೋಷಣೆ ಮಾಡಿದ್ದಾರೆ.
ಸ್ವೀಡನ್‌ನ ರಾಜಕೀಯ ವಿಜ್ಞಾನ ಅಕಾಡೆಮಿಯು 2025ರ ರಸಾಯನಶಾಸ್ತ್ರದ ನೋಬೆಲ್ ಬಹುಮಾನವನ್ನು ಸಸುಮು ಕಿಟಾಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ನೀಡಿದ್ದು, "ಮೆಟಲ್–ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳ ಅಭಿವೃದ್ಧಿಗೆ" ಸಂಬಂಧಿಸಿದ್ದ ಸಂಶೋಧನೆ ಈ ಗೌರವ ಲಭಿಸಿದೆ. ಇನ್ನು ನೆನೆಯಷ್ಟೇ ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ವಿಷಯಕ್ಕೆ ನಡೆಸಿದ ಆವಿಷ್ಕಾರಕ್ಕಾಗಿ ಅಮೇರಿಕನ್ ವಿಶ್ವವಿದ್ಯಾಲಯಗಳ ಭೌತಶಾಸ್ತ್ರ ಕ್ಷೇತ್ರದಲ್ಲಿನ ಮೂವರು ವಿಜ್ಞಾನಿಗಳು 2025ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಿದ್ದರು.
ಈ ಸುದ್ದಿಯನ್ನು ಓದಿ: Nobel Prize 2025: ಭೌತಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿ ವಿಜೇತರ ಹೆಸರು ಘೋಷಣೆ; ಇಲ್ಲಿದೆ ನೋಡಿ ಡಿಟೇಲ್ಸ್
ನೊಬೆಲ್ ಪ್ರಶಸ್ತಿಪುರಸ್ಕೃತರಿಗೆ ಎಷ್ಟು ಹಣ ಸಿಗಲಿದೆ?
2025ರ ನೊಬೆಲ್ ಪ್ರಶಸ್ತಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (SEK) ಮೊತ್ತವನ್ನು ನಿಗದಿಪಡಿಸಲಾಗಿದ್ದು, ಸ್ವೀಡಿಷ್ ಕ್ರೋನರ್ ಎಂಬುದು ನೊಬೆಲ್ ಪ್ರಶಸ್ತಿಗಳನ್ನು ನೀಡುವ ಸ್ವೀಡನ್ ದೇಶದ ಅಧಿಕೃತ ಕರೆನ್ಸಿ ಆಗಿದೆ. ಈ 11 ಮಿಲಿಯನ್ SEK ಮೊತ್ತವನ್ನು ಭಾರತೀಯ ಕರೆನ್ಸಿಗೆ ಕನ್ವರ್ಟ್ ಮಾಡಿದ್ದಾಗ, ₹10.38 ಕೋಟಿ (ಐದು ಕೋಟಿ ಮೂರು ಲಕ್ಷ) ರೂಪಾಯಿಗಳಷ್ಟು ಆಗುತ್ತದೆ.
BREAKING NEWS
— The Nobel Prize (@NobelPrize) October 8, 2025
The Royal Swedish Academy of Sciences has decided to award the 2025 #NobelPrize in Chemistry to Susumu Kitagawa, Richard Robson and Omar M. Yaghi “for the development of metal–organic frameworks.” pic.twitter.com/IRrV57ObD6
ಯಾರಿಗೆಲ್ಲ ಕೊಡುತ್ತಾರೆ?
ಜಗತ್ತಿನ ಪ್ರಮುಖ ಹಾಗೂ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ನೊಬೆಲ್ ಪ್ರಶಸ್ತಿ ಗಳಿಸಿದ್ದು, ಆರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ, ವೈದ್ಯ ವಿಜ್ಞಾನ, ಶಾಂತಿ, ಅರ್ಥಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿ ಆಯಾಯ ವಿಷಯದಲ್ಲಿ ನಿಪುಣತೆ ಹೊಂದಿರುವ ಮಹಾನ್ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಪ್ರಾರಂಭವಾಗಿದ್ದು ಯಾವಾಗ?
1901ರಿಂದ ನೊಬೆಲ್ ಪ್ರಶಸ್ತಿ ಪ್ರದಾನಕ್ಕೆ ಚಾಲನೆ ದೊರೆತಿದ್ದು, ಸ್ವೀಡಿಷ್ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಯಾವೆಲ್ಲ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವ ಬಗ್ಗೆ ವಿಲ್ ಬರೆದಿದ್ದರು. ಈ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿರಿಸಿದ್ದಾರೆ. ಪ್ರತಿ ನೊಬೆಲ್ ಪ್ರಶಸ್ತಿಯನ್ನು ಗರಿಷ್ಠ ಮೂರು ವ್ಯಕ್ತಿಗಳಿಗೆ ನೀಡಬಹುದು. ಅದರಲ್ಲಿ ಬಂದ ಹಣವನ್ನು ಮೂರು ಜನ ಹಂಚಿಕೊಳ್ಳುತ್ತಾರೆ.
ಇನ್ನು ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಔಷಧ, ಸಾಹಿತ್ಯ ಮತ್ತು ಶಾಂತಿ ಎಂಬು ನಾಲ್ಕು ವಿಭಾಗಗಳಿಗೆ ನೀಡುತ್ತಾ ಬಂದಿದ್ದು, ಇಂದು ಮೂರನೇ ಹಂತದ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಿದೆ. ಒಂದು ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗುವುದು ಬಾಕಿ ಇದ್ದು, ಅಕ್ಟೋಬರ್ 10ರಂದು ನೊಬೆಲ್ ಪ್ರಶಸ್ತಿಗೆ ಭಾಜನರಾದವರ ಕೊನೆಯ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.