ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಶಕ್ಕೆ ಪಡೆದ ವೇಳೆ ಕ್ಯೂಬಾದ 32 ನಾಗರಿಕರ ಹತ್ಯೆ

32 civilians killed: ವೆನಿಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ಅಮೆರಿಕ ವಶಕ್ಕೆ ಪಡೆಯುವ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 32 ನಾಗರಿಕರು ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಸರ್ಕಾರ ಹೇಳಿಕೆ ನೀಡಿದೆ. ಮೃತರ ಗೌರವಾರ್ಥ ಜನವರಿ 5 ಮತ್ತು 6ರಂದು ಶೋಕಾಚರಣೆ ನಡೆಯಲಿದೆ ಎಂದು ಹವಾನಾ ತಿಳಿಸಿದೆ.

ನಿಕೋಲಸ್ ಮಡುರೊ ವಶಕ್ಕೆ ಪಡೆಯುವ ವೇಳೆ 32 ನಾಗರಿಕರ ಹತ್ಯೆ

ಅಮೆರಿಕ ನಡೆಸಿದ ದಾಳಿಯ ನಂತರ ವೆನಿಜುವೆಲಾದಲ್ಲಿನ ಹಾನಿಗೊಳಗಾದ ಕಟ್ಟಡ. -

Priyanka P
Priyanka P Jan 5, 2026 3:11 PM

ಹವಾನಾ, ಜ. 5: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಅವರನ್ನು ಬಂಧಿಸುವ ಸಲುವಾಗಿ ಅಮೆರಿಕ ನಡೆಸಿದ ದಾಳಿಯಲ್ಲಿ 32 ನಾಗರಿಕರು ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಸರ್ಕಾರ (Cuban government) ತಿಳಿಸಿದೆ. ಮೃತರ ಗೌರವಾರ್ಥ ಜನವರಿ 5 ಮತ್ತು 6ರಂದು ಶೋಕಾಚರಣೆ ನಡೆಯಲಿದೆ ಎಂದು ಹೇಳಿದೆ ಮತ್ತು ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಕ್ಯೂಬಾ ಸರ್ಕಾರವು ಕೆಲವಷ್ಟೇ ವಿವರಗಳನ್ನು ನೀಡಿದೆ. ಮೃತಪಟ್ಟವರೆಲ್ಲರೂ ಕ್ಯೂಬಾದ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸದಸ್ಯರು ಎಂದು ಹೇಳಿದೆ. ʼʼಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ತಮ್ಮ ಹೊಣೆಗಾರಿಕೆಗಳಿಗೆ ನಿಷ್ಠರಾಗಿದ್ದ ನಮ್ಮ ದೇಶವಾಸಿಗಳು ಗೌರವ ಹಾಗೂ ವೀರತ್ವದೊಂದಿಗೆ ಕರ್ತವ್ಯವನ್ನು ಘನತೆ ಮತ್ತು ಶೌರ್ಯದಿಂದ ನಿರ್ವಹಿಸಿದರು. ದಾಳಿಕೋರರ ವಿರುದ್ಧ ನೇರ ಸಮರದಲ್ಲಿ ತೀವ್ರ ಪ್ರತಿರೋಧ ತೋರಿದ ನಂತರ ನಡೆದ ಬಾಂಬ್ ದಾಳಿಗಳ ಪರಿಣಾಮವಾಗಿ ಅವರು ವೀರ ಮರಣ ಹೊಂದಿದರುʼʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವೆನೆಜುವೆಲಾದ ಮೇಲೆ ಅಮೆರಿಕ ಸೇನೆ ದಾಳಿ ನಡೆಸಲು ಕಾರಣವೇನು?

ಮಡುರೊ ಅಧಿಕಾರಕ್ಕೆ ಬಂದಾಗಿನಿಂದ ಕ್ಯೂಬಾ ಅವರಿಗೆ ಭದ್ರತಾ ಸಹಾಯವನ್ನು ಒದಗಿಸಿದೆ. ವೆನಿಜುವೆಲಾದ ಅಧ್ಯಕ್ಷರನ್ನು ವಶಕ್ಕೆ ಪಡೆದುಕೊಳ್ಳಲಾದ ಸಮಯದಲ್ಲಿ ಎಷ್ಟು ಕ್ಯೂಬನ್ನರು ಅವರನ್ನು ಕಾವಲು ಕಾಯುತ್ತಿದ್ದರು ಮತ್ತು ಎಷ್ಟು ಮಂದಿ ಮೃತಪಟ್ಟಿರಬಹುದು ಎಂಬುದು ಸ್ಪಷ್ಟವಾಗಿಲ್ಲ.

63 ವರ್ಷದ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಶನಿವಾರ (ಜನವರಿ 3) ವೆನಿಜುವೆಲಾ ರಾಜಧಾನಿ ಕಾರಕಾಸ್‌ನಲ್ಲಿ ಅಮೆರಿಕ ಪಡೆಗಳು ವಶಕ್ಕೆ ಪಡೆದಿದು ವಿಚಾರಣೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ಮಾದಕ ವಸ್ತು, ಭಯೋತ್ಪಾದನೆ ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ನ ಕಾರಾಗೃಹದಲ್ಲಿ ಇರಿಸಲಾಗಿದೆ.

2020ರಲ್ಲಿ ಮಡುರೊ ವಿರುದ್ಧ ಮಾದಕ ವಸ್ತು ಸಾಗಣೆ-ಭಯೋತ್ಪಾದನಾ ಸಂಚು ಸೇರಿದಂತೆ ಹಲವು ಆರೋಪಗಳನ್ನು ಅಮೆರಿಕ ದಾಖಲಿಸಿತ್ತು. ಆದರೆ ಅವರು ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲವೆಂದು ನಿರಾಕರಿಸುತ್ತಾ ಬಂದಿದ್ದಾರೆ.

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಅಧ್ಯಕ್ಷ

ಇನ್ನು ಅಮೆರಿಕದ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೊವನ್ನು ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಬೂದು ಬಣ್ಣದ ಸ್ವೆಟ್‌ಶರ್ಟ್ ಮತ್ತು ಸ್ವೆಟ್‌ಪ್ಯಾಂಟ್ ಧರಿಸಿ, ದೊಡ್ಡ ಹೆಡ್‌ಫೋನ್‌ಗಳನ್ನು ಧರಿಸಿ, 63 ವರ್ಷದ ಮಡುರೊ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್‌ ಆಗಿದೆ.

ವೆನಿಜುವೆಲಾ ಅಧ್ಯಕ್ಷರನ್ನು ಬಂಧಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಅಮೆರಿಕವು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುತ್ತಿದೆ. ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.