ಇರಾನ್‌ನಲ್ಲಿ ಭೀಕರ ಸ್ಫೋಟ; 4 ಮಂದಿ ಸಾವು, ಕನಿಷ್ಠ 500 ಮಂದಿಗೆ ಗಾಯ
Massive Explosion: ದಕ್ಷಿಣ ಇರಾನ್‌ನ ಬಂದರು ನಗರ ಬಂದರ್ ಅಬ್ಬಾಸ್‌ನ ಶಾಹಿದ್ ರಾಜೀ ಬಂದರ್‌ನಲ್ಲಿ ಶನಿವಾರ (ಏ. 26) ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಕಾರನ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.


ತೆಹ್ರಾನ್: ದಕ್ಷಿಣ ಇರಾನ್‌ನ ಬಂದರು ನಗರ (Port city) ಬಂದರ್ ಅಬ್ಬಾಸ್‌ನ (Bandar Abbas) ಶಾಹಿದ್ ರಾಜೀ ಬಂದರ್‌ನಲ್ಲಿ (Shahid Rajaee port) ಶನಿವಾರ (ಏ. 26) ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 4 ಮಂದಿ ಮೃತಪಟ್ಟು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಸಂಸ್ಥೆ ತಿಳಿಸಿವೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಫೋಟದ ಸಮಯದಲ್ಲಿ ನೂರಾರು ಸಂಖ್ಯೆಯಲ್ಲಿ ಬಂದರು ಉದ್ಯೋಗಿಗಳು ಸ್ಥಳದಲ್ಲಿದ್ದ ಕಾರಣ ಸಾವು ಸಂಭವಿಸಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಶಾಹಿದ್ ರಾಜೀ ಪೋರ್ಟ್ ವಾರ್ಫ್ ಪ್ರದೇಶದಲ್ಲಿದ್ದ ಹಲವು ಕಂಟೇನರ್‌ಗಳು ಘಟನೆಯಲ್ಲಿ ಸ್ಫೋಟಗೊಂಡಿವೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಮಾನ್‌ನಲ್ಲಿಇರಾನ್ ಅಮೆರಿಕದೊಂದಿಗೆ 3ನೇ ಸುತ್ತಿನ ಪರಮಾಣು ಮಾತುಕತೆಯನ್ನು ಪ್ರಾರಂಭಿಸುತ್ತಿದ್ದಂತೆ ಈ ಸ್ಫೋಟ ಸಂಭವಿಸಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಸ್ಫೋಟದ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊಗಳಲ್ಲಿ ಸ್ಫೋಟದ ನಂತರ ಮೋಡವು ರೂಪುಗೊಳ್ಳುತ್ತಿರುವುದು ಕಂಡು ಬಂದಿದೆ. ಸದ್ಯ ಸ್ಫೋಟದ ಹಿಂದಿನ ಕಾರಣ ಕಂಡುಹಿಡಿಯಲು ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದಕ್ಷಿಣ ಇರಾನ್‌ನಲ್ಲಿ ನಡೆದ ಭೀಕರ ಸ್ಫೋಟದ ದೃಶ್ಯ:
BREAKING: Massive explosion hits the Iranian port of Bandar Abbas pic.twitter.com/PDNvcmCVOi
— BNO News (@BNONews) April 26, 2025
ಈ ಸುದ್ದಿಯನ್ನೂ ಓದಿ: Viral Video: ಬಲೂಚ್ ಪ್ರತ್ಯೇಕತಾವಾದಿಗಳಿಂದ ಐಇಡಿ ಬ್ಲಾಸ್ಟ್... ಪಾಕ್ ಸೇನೆಯ 10 ಯೋಧರು ಸಾವು
ವರದಿಯಲ್ಲಿ ಏನಿದೆ?
ಆರಂಭಿಕ ಅಂದಾಜಿನ ಪ್ರಕಾರ 4 ಜನರು ಗಾಯಗೊಂಡಿದ್ದಾರೆ ಎಂದು ಫಾರ್ಸ್ ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಬೆಂಕಿಯನ್ನು ನಂದಿಸಲು ಬಂದರಿನ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಲಾಗಿದೆ ಎಂದು ಅದು ಹೇಳಿದೆ. ಸ್ಫೋಟದ ಪರಿಣಾಮವಾಗಿ ಕಿ.ಮೀ.ಗಟ್ಟಲೆ ವ್ಯಾಪ್ತಿಯಲ್ಲಿನ ಕಟ್ಟಡಗಳ ಕಿಟಕಿಗಳು ಪುಡಿಪುಡಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಟ್ಟಡಗಳಿಗೆ ಹಾನಿ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಸ್ಫೋಟ ನಡೆದ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಕಪ್ಪು ಹೊಗೆ ಹೊಗೆ ಮೇಲೇಳುತ್ತಿರುವುದು ಕಂಡು ಬಂದಿದೆ. ಹಲವು ಕಟ್ಟಡಗಳು, ವಾಹನಗಳು ಜಖಂಗೊಂಡಿವೆ. ಶಾಹಿದ್ ರಾಜೇ ಬಂದರು ಪ್ರಮುಖ ಕಂಟೇನರ್ ಟರ್ಮಿನಲ್ ಆಗಿದ್ದು, ತೈಲ ಶೇಖರಣಾ ಟ್ಯಾಂಕ್‌ಗಳು ಮತ್ತು ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಸಹ ಹೊಂದಿದೆ. ಇದು ಸ್ಫೋಟದ ನಂತರ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಕಳವಳವನ್ನು ಉಂಟು ಮಾಡಿದೆ.