ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾರ್ಮೊಜ್‌ ಬಳಿಕ ಮತ್ತೊಂದು ಪ್ರಮುಖ ಜಲಸಂಧಿ ಮುಚ್ಚುವುದಾಗಿ ಇರಾನ್‌ ಬೆದರಿಕೆ; ಜಗತ್ತಿನ ಆರ್ಥಿಕತೆಗೆ ಬೀಳುತ್ತಾ ಪೆಟ್ಟು?

ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿದ್ದು ಇರಾನ್‌ ಈಗಾಗಲೇ ಹಾರ್ಮೊಜ್‌ ಜಲಸಂಧಿಯನ್ನು ಮುಚ್ಚಿದೆ. ಇದೀಗ ಮತ್ತೊಂದು ಬೆದರಿಕೆ ಹಾಕಿದ್ದು, ಅಮೆರಿಕ ಹಾಗೂ ಇಸ್ರೇಲ್ ಖಾರ್ಗ್ ಸೇರಿದಂತೆ ತನ್ನ ದ್ವೀಪಗಳ ಮೇಲೆ ದಾಳಿ ಮಾಡುವ ಮೂಲಕ ಯುದ್ಧವನ್ನು ತೀವ್ರಗೊಳಿಸಿದರೆ ಮತ್ತೊಂದು ಪ್ರಮುಖ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದೆ.

ಹಾರ್ಮೊಜ್‌ ಬಳಿಕ ಮತ್ತೊಂದು ಜಲಸಂಧಿ ಮುಚ್ಚುವುದಾಗಿ ಇರಾನ್‌ ಬೆದರಿಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 26, 2026 12:10 PM

ಟೆಹರಾನ್‌: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿದ್ದು ಇರಾನ್‌ ಈಗಾಗಲೇ ಹಾರ್ಮೊಜ್‌ ಜಲಸಂಧಿಯನ್ನು ಮುಚ್ಚಿದೆ. ಇದೀಗ (Hormuz) ಮತ್ತೊಂದು ಬೆದರಿಕೆ ಹಾಕಿದ್ದು, ಅಮೆರಿಕ ಹಾಗೂ ಇಸ್ರೇಲ್ ಖಾರ್ಗ್ ಸೇರಿದಂತೆ ತನ್ನ ದ್ವೀಪಗಳ ಮೇಲೆ ದಾಳಿ ಮಾಡುವ ಮೂಲಕ ಯುದ್ಧವನ್ನು ತೀವ್ರಗೊಳಿಸಿದರೆ, ಸೂಯೆಜ್ ಕಾಲುವೆಯ ಕಡೆಗೆ ಸಮುದ್ರ ಸಂಚಾರವನ್ನು ನಿಯಂತ್ರಿಸುವ ಕಿರಿದಾದ ಜಲಮಾರ್ಗವಾದ ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ನಿರ್ಬಂಧಿಸುವುದಾಗಿ ಇರಾನ್ ಹೇಳಿದೆ.

ಇರಾನ್‌ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಇದೀಗ ಬಾಬ್ ಅಲ್-ಮಂಡೇಬ್‌ ಸಹ ಮುಚ್ಚಿದರೆ ತೈಲದ ಕೊರತೆ ಇನ್ನಷ್ಟು ಹೆಚ್ಚಾಗುತ್ತದೆ. ಜಾಗತಿಕ ಸಮುದ್ರದ ಮೂಲಕ ಸಾಗಿಸುವ ತೈಲದ ಸುಮಾರು ಶೇಕಡಾ 12 ರಷ್ಟು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಮಾರ್ಗದ ಮೂಲಕ ಹಾದುಹೋಗುತ್ತದೆ, ಇದು ವಿಶ್ವದ ನಾಲ್ಕನೇ ಅತಿದೊಡ್ಡ ಹಡಗು ಮಾರ್ಗವಾಗಿದೆ. ಇದು ಯೆಮೆನ್‌ನ ನೈಋತ್ಯದಲ್ಲಿದೆ, ಅಲ್ಲಿ ಇರಾನ್ ಬೆಂಬಲಿತ ಹೌತಿಗಳು ಅಲ್ಲಿ ನೆಲೆಸಿದ್ದಾರೆ.

ಯೆಮನ್ ಬಳಿಯ ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿರುವ ಬಾಬ್ ಅಲ್-ಮಂಡೇಬ್ ಅನ್ನು ಹಿಡಿತ ಸಾಧಿಸಲು ಟೆಹ್ರಾನ್‌ಗೆ ಸಹಾಯ ಮಾಡಲು ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿಗಳು ಅಮೆರಿಕ ಮತ್ತು ಇಸ್ರೇಲಿ ಪಡೆಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸೇರಲಿದ್ದಾರೆ ಎಂದು ಇರಾನ್‌ನ ಅರೆ-ಅಧಿಕೃತ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯೆಮೆನ್‌ನಲ್ಲಿರುವ ಹೌತಿ ಬಂಡಾಯ ಗುಂಪನ್ನು ಇರಾನ್ ಬೆಂಬಲಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನು ನೀಡುತ್ತದೆ.

ಅಮೆರಿಕದ ಎಫ್-18 ಫೈಟರ್ ಜೆಟ್ ಹೊಡೆದುರುಳಿಸಿತಾ ಇರಾನ್‌? ವೈರಲ್‌ ಆಗುತ್ತಿರುವ ವಿಡಿಯೋದಲ್ಲೇನಿದೆ?

ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹೊರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ. ಇದರ ಮೇಲೆ ಇರಾನ್‌ ಸಂಪೂರ್ಣ ಹಿಡಿತವನ್ನು ಹೊಂದಿದ್ದು, ಮತ್ತೊಂದು ಜಲಸಂಧಿಯನ್ನು ಮುಚ್ಚಿದರೆ ಜಗತ್ತಿನ ಆರ್ಥಿಕತೆಗೆ ಇನ್ನಷ್ಟು ಪೆಟ್ಟು ಬೀಳುವ ಸಾಧ್ಯತೆ ಇದೆ.