ಹೊರ್ಮುಜ್ ಜಲಸಂಧಿಯಲ್ಲಿ 27 ಭಾರತೀಯರಿದ್ದ ಹಡಗಿನ ಮೇಲೆ ದಾಳಿ
ಹೊರ್ಮುಜ್ ಜಲಸಂಧಿಯಲ್ಲಿ 27 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಹಡಗು ಲಿಂಪೆಟ್ ಗಣಿ (ಸಮುದ್ರ ಬಾಂಬ್ ) ದಾಳಿ ತುತ್ತಾಗಿದೆ. ಕಳೆದ ಫೆಬ್ರವರಿಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಪ್ರಾರಂಭವಾದ ಮೇಲೆ ಇಲ್ಲಿನ ಜಲ ಮಾರ್ಗದಲ್ಲಿ ಲಿಂಪೆಟ್ ಗಣಿಗಳನ್ನು ಇಡಲಾಗಿತ್ತು. ಈ ದಾಳಿಗೆ ಇದೇ ಮೊದಲ ಬಾರಿಗೆ ಪನಾಮ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಶುಕ್ರವಾರ ತುತ್ತಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಇರಾನ್ ಮತ್ತು ಇಸ್ರೇಲ್ (Iran and Israel war) ನಡುವೆ ಕಳೆದ ಫೆಬ್ರವರಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ತೈಲ ಟ್ಯಾಂಕರ್ ಹೊತ್ತಿದ್ದ ಹಡಗೊಂಡು ಸಮುದ್ರ ಬಾಂಬ್ ದಾಳಿಗೆ (Limpet Mines attack) ತುತ್ತಾಗಿದೆ. ಈ ಹಡಗಿನಲ್ಲಿ 27 ಭಾರತೀಯರಿದ್ದರು. ಪನಾಮ ಧ್ವಜ (Panama flagged) ಹೊಂದಿದ್ದ ಕಚ್ಚಾ ತೈಲ ಟ್ಯಾಂಕರ್ (crude oil tanker) ಶುಕ್ರವಾರ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಲಿಂಪೆಟ್ ಗಣಿಗಳಿಗೆ ಡಿಕ್ಕಿ ಹೊಡೆದಿದೆ. ಲಿಂಪೆಟ್ ಗಣಿ ಎಂಬುದು ನೌಕಾಪಡೆಗಳು ಶತ್ರುಗಳ ಹಡಗುಗಳನ್ನು ಧ್ವಂಸಗೊಳಿಸಲು ಬಳಸುವ ಒಂದು ಬಗೆಯ ಸಮುದ್ರದ ಬಾಂಬ್ ಆಗಿದೆ.
ಪನಾಮ ಧ್ವಜ ಹೊಂದಿದ್ದ ಎಂಟಿ ಲೂಯಿಸ್ 1 ರ ಮೇಲೆ ಎರಡು ಲಿಂಪೆಟ್ ಗಣಿಗಳನ್ನು ಅದರ ಹಲ್ಗೆ ಜೋಡಿಸಿದ ಸಣ್ಣ ನೌಕೆ ಗುರಿಯಾಗಿಸಿಕೊಂಡಿತು. ಈ ದಾಳಿಯಿಂದ ಭಾರಿ ಸ್ಫೋಟ ಉಂಟಾಗಿದೆ. ಬಳಿಕ ಎಂಜಿನ್ ಕೋಣೆಯಲ್ಲಿ ಬೆಂಕಿಯುಂಟಾಗಿತ್ತು. ಇದರಿಂದ ಹಡಗು ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿತು. ಹಡಗಿನಲ್ಲಿದ್ದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಇದು ಪರಿಸರದ ಮೇಲೆ ಯಾವುದೇ ಪರಿಣಾಮ ಬೀರದೇ ಇದ್ದುದರಿಂದ ಟ್ಯಾಂಕರ್ ತನ್ನ ಪ್ರಯಾಣವನ್ನು ಮುಂದುವರೆಸಿತು ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ನಿಲ್ಲಿಸಿದ ಆಂಬ್ಯುಲೆನ್ಸ್ ಒಳಗೆ ಆಮ್ಲಜನಕ ಸಿಲಿಂಡರ್ ಸ್ಫೋಟ: 10 ಮಂದಿ ಸಾವು
ಕಳೆದ ಫೆಬ್ರವರಿಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಪ್ರಾರಂಭವಾದ ಮೇಲೆ ಇಲ್ಲಿನ ಜಲ ಮಾರ್ಗದಲ್ಲಿ ಲಿಂಪೆಟ್ ಗಣಿಗಳನ್ನು ಇಡಲಾಗಿತ್ತು. ಈ ದಾಳಿಗೆ ಇದೇ ಮೊದಲ ಬಾರಿಗೆ ಪನಾಮ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಶುಕ್ರವಾರ ತುತ್ತಾಗಿದೆ. ಈ ಘಟನೆಯ ಕುರಿತು ಮಾಹಿತಿ ನೀಡಿರುವ ಬ್ರಿಟಿಷ್ ನೌಕಾಪಡೆಯ ಸಂಸ್ಥೆ ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್, ಪನಾಮ ಧ್ವಜ ಹೊತ್ತ ಹಡಗಿನ ಮೇಲೆ ಒಮಾನ್ ಖಾಸಾಬ್ನ ಈಶಾನ್ಯದಿಂದ ಸುಮಾರು 46 ಕಿಮೀ ದೂರದಲ್ಲಿ ದಾಳಿಯಾಗಿದೆ ಎಂದು ತಿಳಿಸಿದೆ.
⚠️ IMPORTANT UPDATE ⚠️ On Oct 29, Liberia-flagged VLCC MT ARZANAH, carrying 2 Indian nationals, and on Oct 30, Panama-flagged crude oil tanker MT LOUISE 1, carrying 27 Indian seafarers, were targeted in projectile attacks in the Strait of Hormuz. All 29 Indian seafarers across both vessels are completely safe with no injuries. We are continuously monitoring the situations & coordinating with the ship management companies to ensure the ongoing security and wellbeing of our crew.
— Sarbananda Sonowal (@sarbanandsonwal) October 30, 2026
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಮಾಹಿತಿ ನೀಡಿದ್ದು, ನಾವಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಸಿಬ್ಬಂದಿಯ ನಿರಂತರ ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ ಹಾಗೂ ಹಡಗು ನಿರ್ವಹಣಾ ಕಂಪನಿಗಳೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಲಿಂಪೆಟ್ ಗಣಿಗಳನ್ನು 2017 ರಲ್ಲಿ ಈ ಪ್ರದೇಶದಲ್ಲಿ ನಿಯೋಜಿಸಲಾಯಿತು. ಅನಂತರದ ವರ್ಷಗಳಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ಗಳ ವಿರುದ್ಧ ಬಳಸಲಾಯಿತು. ಗ್ರೀಸ್ ಮೂಲದ ಕಡಲ ಅಪಾಯ ನಿರ್ವಹಣಾ ಗುಂಪು ಮಾರಿಸ್ಕ್, ಲಿಂಪೆಟ್ ಗಣಿಗಳು ಅಗ್ಗವಾಗಿವೆ ಮತ್ತು ಸುಲಭವಾಗಿ ಲಭ್ಯವಿದೆ ಎಂದು ತಿಳಿಸಿದೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಲಿಂಪೆಟ್ ಗಣಿಗಳನ್ನು ಹೆಚ್ಚು ಬಳಕೆ ಮಾಡಲಾಗಿತ್ತು. ಲಿಂಪೆಟ್ ಗಣಿಗಳು ಹೆಚ್ಚು ಬಲವಾದ ಕಾಂತೀಯ ಶಕ್ತಿಯನ್ನು ಹೊಂದಿರುತ್ತದೆ. ಇವು ಶತ್ರು ಹಡಗುಗಳ ಕಬ್ಬಿಣದ ತಳಭಾಗಕ್ಕೆ ಸುಲಭವಾಗಿ ಅಂಟಿಸಬಹುದು. ಈ ದಾಳಿಯನ್ನು ರಹಸ್ಯವಾಗಿ ಮಾಡಲಾಗುತ್ತದೆ.
ಸಣ್ಣ ದೋಣಿಗಳ ಮೂಲಕ ರಹಸ್ಯವಾಗಿ ಶತ್ರು ಹಡಗಿನ ಬಳಿ ಹೋಗಿ ಈ ಬಾಂಬ್ಗಳನ್ನು ಹಡಗಿನ ತಳಭಾಗಕ್ಕೆ ಅಂಟಿಸಲಾಗುತ್ತದೆ. ಇದರಲ್ಲಿ ಟೈಮರ್ ಅಳವಡಿಸಲಾಗಿದ್ದು, ಬಾಂಬ್ ಅಂಟಿಸಿದ ಬಳಿಕ ದಾಳಿಕೋರರು ಸುರಕ್ಷಿತವಾಗಿ ದೂರ ಹೋಗಲು ಇದು ಸಮಯಾವಕಾಶ ನೀಡುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ಸ್ಫೋಟಗೊಂಡು ಹಡಗಿಗೆ ದೊಡ್ಡ ರಂಧ್ರವನ್ನು ಉಂಟು ಮಾಡಿ ಹಡಗು ಮುಳುಗುವಂತೆ ಮಾಡಲಾಗುತ್ತದೆ.
'ಲಿಂಪೆಟ್' ಎಂಬುದು ಸಮುದ್ರದ ಬಂಡೆಗಳಿಗೆ ಅತ್ಯಂತ ಗಟ್ಟಿಯಾಗಿ ಅಂಟಿಕೊಳ್ಳುವ ಒಂದು ಸಣ್ಣ ಕಡಲ ಜೀವಿಯ ಹೆಸರು. ಹೀಗಾಗಿ ಈ ಬಾಂಬ್ ಗೆ ಲಿಂಪೆಟ್ ಗಣಿ ಎಂದು ಹೆಸರಿಸಲಾಗಿದೆ.
ಹೈಸ್ಪೀಡ್ ರೈಲು ಅಪಘಾತದಲ್ಲಿ 68 ಮಂದಿ ಸಾವು: ಹೊತ್ತಿ ಉರಿದ ಸ್ಪೇನ್, ಸರ್ಕಾರದ ವಿರುದ್ಧ ಬೀದಿಗಿಳಿದ ಜನ
ಎಂಟಿ ಲೂಯಿಸ್ 1 ರ ಮೇಲೆ ದಾಳಿಗೂ ಮೊದಲು ಇಬ್ಬರು ಭಾರತೀಯರಿದ್ದ ಲೈಬೀರಿಯಾ ಧ್ವಜವನ್ನು ಹೊಂದಿರುವ ಅತಿ ದೊಡ್ಡ ಕಚ್ಚಾ ವಾಹಕ (ವಿಎಲ್ಸಿಸಿ) ಎಂಟಿ ಅರ್ಜಾನಾಹ್ ಮೇಲೆ ದಾಳಿ ನಡೆಸಲಾಯಿತು. ಇರಾನ್ ಜಲಮಾರ್ಗದಲ್ಲಿ ತನ್ನ ಸಾಗಣೆ ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಹಡಗುಗಳನ್ನು ಗುರಿಯಾಗಿಸಿಕೊಂಡಿದೆ.