ಅಮೆರಿಕದಿಂದ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್
America- Iran War: ಇರಾನ್ ಹಾಗೂ ಇಸ್ರೇಲ್, ಅಮೆರಿಕ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ ನಡೆದ ಇರಾನ್‌ನಲ್ಲಿ ನಡೆದ ಬೃಹತ್ ಸ್ಫೋಟದ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಟೆಹರಾನ್: ಇರಾನ್ ಹಾಗೂ ಇಸ್ರೇಲ್, ಅಮೆರಿಕ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ (America- Iran- Israel War) ನಡೆದ ಇರಾನ್‌ನಲ್ಲಿ ನಡೆದ ಬೃಹತ್ ಸ್ಫೋಟದ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಸರಣಿ ಸ್ಫೋಟಗಳನ್ನು ತೋರಿಸುತ್ತವೆ. 2.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮತ್ತು ಬದ್ರ್ ಮಿಲಿಟರಿ ವಾಯುನೆಲೆಯ ನೆಲೆಯಾಗಿರುವ ಇರಾನ್ ನಗರವಾದ ಇಸ್ಫಹಾನ್‌ನಲ್ಲಿರುವ ಪ್ರಮುಖ ಶಸ್ತ್ರಾಸ್ತ್ರ ಡಿಪೋದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಅಧಿಕಾರಿಯ ಪ್ರಕಾರ, ಅಮೆರಿಕದ ಪಡೆಗಳು ಇಸ್ಫಹಾನ್‌ನಲ್ಲಿರುವ ಮದ್ದುಗುಂಡು ಡಿಪೋವನ್ನು 2,000 ಪೌಂಡ್ (ಸುಮಾರು 907-ಕಿಲೋಗ್ರಾಂ) ಬಂಕರ್ ಬಸ್ಟರ್ ಬಾಂಬ್‌ಗಳೊಂದಿಗೆ ಹೊಡೆದವು. "ದಾಳಿಗೆ ಹೆಚ್ಚಿನ ಪ್ರಮಾಣದ ಬಂಕರ್ ಬಸ್ಟರ್‌ಗಳು ಅಥವಾ ಪೆನೆಟ್ರೇಟರ್ ಮದ್ದುಗುಂಡುಗಳನ್ನು ಬಳಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ. ಇತ್ತೀಚಿನ ವರದಿಗಳು ಇರಾನ್ ಸುಮಾರು 540 ಕೆಜಿ ತೂಕದ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನುಗಳನ್ನು ಇಸ್ಫಹಾನ್‌ನಲ್ಲಿರುವ ಭೂಗತ ಸೌಲಭ್ಯಕ್ಕೆ ಸಾಗಿಸಿರಬಹುದು ಎಂದು ಸೂಚಿಸಿವೆ. ಕಳೆದ ವರ್ಷ ಬೇಸಿಗೆಯಲ್ಲಿ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಅಡಿಯಲ್ಲಿ ಅಮೆರಿಕದ ದಾಳಿಯ ಸಮಯದಲ್ಲಿ ಈ ನಗರವನ್ನು ಗುರಿಯಾಗಿಸಲಾಗಿತ್ತು, ಇದು ಅದರ ಪರಮಾಣು ಸೌಲಭ್ಯಗಳ ಮೇಲೆ ಕೇಂದ್ರೀಕರಿಸಿತ್ತು.
ವಿಡಿಯೋ ನೋಡಿ
HUGE: The US confirms that it used heavy 2,000 pound “bunker-buster” munitions to penetrate deeply into the IRGC’s underground ballistic missile and ammunition stockpile in Isfahan, Iran tonight and sent it to kingdom come.
— Ian Miles Cheong (@ianmiles) March 31, 2026
There are now far weapons that the terrorist regime of… pic.twitter.com/nDoBQUKnbQ
Iran-Israel War: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್
ದಾಳಿ ಹೆಚ್ಚಿಸುತ್ತಾ ಅಮೆರಿಕ?
ಇರಾನ್ ಮೇಲಿನ ಭೂದಾಳಿಗೆ ಅಮೆರಿಕದ ಭೂ ಸೇನೆಯ 17 ಸಾವಿರ ತುಕಡಿಗಳು ಸಜ್ಜಾಗಿವೆ. ಮಾರು 3,500 ನೌಕಾಪಡೆಗಳೊಂದಿಗೆ ಯುಎಸ್ ಸೆಂಟ್ರಲ್ ಕಮಾಂಡ್ ಪ್ರದೇಶಕ್ಕೆ ಆಗಮಿಸಿದೆ. ಈ ಹಡಗು ಹೆಲಿಕಾಪ್ಟರ್‌ಗಳು, ಎಫ್-35 ಬಿ ಜಂಟಿ ಸ್ಟ್ರೈಕ್ ಫೈಟರ್ ಜೆಟ್‌ಗಳನ್ನ ಸಾಗಿಸಬಲ್ಲದಾಗಿದೆ. ಆಧುನಿಕ ಯುದ್ಧನೌಕೆ ಯುಎಸ್ ಟ್ರಿಪೋಲಿ ಮಧ್ಯಪ್ರಾಚ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ, ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡುವ ಭೀತಿ ಎದುರಾಗಿದೆ. ಅಗತ್ಯಬಿದ್ದರೆ, ಇನ್ನೂ 10 ಸಾವಿರ ಭೂದಳ ಪಡೆಗಳನ್ನು ಕಳುಹಿಸಲು ಪೆಂಟಗನ್ ನಿರ್ಧರಿಸಿದೆ. ಅಲ್ಲದೇ ಯುನೈಟೆಡ್ ಸ್ಟೇಟ್ಸ್ ಮೆರೈನ್ ಕಾರ್ಪ್ಸ್ ವಿಭಾಗದ 5,000 ಹೆಚ್ಚುವರಿ ಸೈನಿಕರು ಮತ್ತು ಸಾವಿರಾರು ಪ್ಯಾರಾಟ್ರೋಫ್‌ಗಳನ್ನ ಸೇರಿಸುವುದಾಗಿ ಹೇಳಿದೆ.