ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Car Accident: ಯುಕೆಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌- ಗಣೇಶೋತ್ಸವ ಮುಗ್ಸಿಕೊಂಡು ವಾಪಾಸಾಗ್ತಿದ್ದ ಭಾರತೀಯ ವಿದ್ಯಾರ್ಥಿಗಳಿಬ್ಬರು ಬಲಿ

ಯುಕೆಯ ಎಸ್ಸೆಕ್ಸ್ ನಗರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car Accident) ಹೈದರಾಬಾದ್‌ನ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶ ನಿಮ್ಮಜನಂ ಆಚರಣೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದೆ.

ಯುಕೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಬ್ಬರು ದಾರುಣ ಸಾವು

-

ಲಂಡನ್: ಯುಕೆಯಲ್ಲಿ (United Kingdom) ಸೋಮವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (UK Car Crash) ಭಾರತೀಯ ವಿದ್ಯಾರ್ಥಿಗಳಿಬ್ಬರು (Indian Students death) ಸಾವನ್ನಪ್ಪಿರುವ ಘಟನೆ ನಡೆದಿದೆ. ಹೈದರಾಬಾದ್‌ನ (Hyderabad) ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಪಘಾತದಲ್ಲಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಣೇಶ ಚತುರ್ಥಿ (Ganesh Nimmajanam celebrations) ಬಳಿಕ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೇಲೀ ಸ್ಪರ್ ವೃತ್ತದಲ್ಲಿರುವ ಎ130 ಡ್ಯುಯಲ್ ಕ್ಯಾರೇಜ್‌ವೇಯಲ್ಲಿ ಒಂಬತ್ತು ಭಾರತೀಯ ವಿದ್ಯಾರ್ಥಿಗಳಿದ್ದ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿದೆ.

ಮೃತರನ್ನು ಚೈತನ್ಯ ತಾರೆ (23) ಮತ್ತು ರಿಶಿತೇಜ ರಾಪೋಲು (21) ಎಂದು ಗುರುತಿಸಲಾಗಿದೆ. ಚೈತನ್ಯ ತಾರೆ ಸ್ಥಳದಲ್ಲೇ ಮೃತಪಟ್ಟಿದ್ದು, ರಿಶಿತೇಜ್ ರಾಯಲ್ ಲಂಡನ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಸಾಯಿ ಗೌತಮ್ ರಾವುಲ್ಲಾ (30) ಎಂಬವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನೂತನ್ ಥಟಿಕಾಯಲ ಎಂಬವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಯುವ ತೇಜ ರೆಡ್ಡಿ ಗುರ್ರಾಮ್, ವಂಶಿ ಗೊಲ್ಲ ಮತ್ತು ವೆಂಕಟ ಸುಮಂತ್ ಪೆಂಟ್ಯಾಲ ಎಂಬವರು ಗಾಯಗೊಂಡಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿ ಎರಡು ಕಾರುಗಳ ಚಾಲಕರಾದ ಗೋಪಿಚಂದ್ ಬಟಮೇಕಲಾ ಮತ್ತು ಮನೋಹರ್ ಸಬ್ಬಾನಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸೆಕ್ಸ್ ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಶವಗಳನ್ನು ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ತೆಲಂಗಾಣ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: NTRNeel Movie: ಶೀಘ್ರದಲ್ಲೇ ವಿದೇಶಕ್ಕೆ ಹಾರಲಿದ್ದಾರೆ ಪ್ರಶಾಂತ್‌ ನೀಲ್‌; ಮತ್ತಷ್ಟು ಹಿರಿದಾಗುತ್ತಿದೆ ಜೂ. ಎನ್‌ಟಿಆರ್‌ ಚಿತ್ರ

ಹೈದರಾಬಾದ್‌ನ ನಡರ್‌ಗುಲ್ ಮೂಲದ ಚೈತನ್ಯ, ಬಿಟೆಕ್ ಮುಗಿಸಿ ಎಂಟು ತಿಂಗಳ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದರು. ಅವರ ಪೋಷಕರಿಗೆ ಸೋಮವಾರ ತಡರಾತ್ರಿ ಮಾಹಿತಿ ನೀಡಲಾಗಿದೆ. ಬೋಡುಪ್ಪಲ್‌ನಲ್ಲಿರುವ ರಿಷಿತೇಜ ಅವರ ಕುಟುಂಬಕ್ಕೂ ದುರಂತದ ಬಗ್ಗೆ ಮಾಹಿತಿ ನೀಡಲಾಗಿದೆ.