ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BAN vs ZIM: ಶಕಿಬ್‌ ಅಲ್‌ ಹಸನ್‌ರ ವಿಶ್ವ ದಾಖಲೆ ಮುರಿದ ಸೀನ್‌ ವಿಲಿಯಮ್ಸ್‌!

ಶ್ರೀಲಂಕಾ ವಿರುದ್ದದ ಮೊದಲನೇ ಟಿ20ಐ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ ಸೀನ್‌ ವಿಲಿಯಮ್ಸ್‌ ಅವರು ಬಂಗ್ಲಾದೇಶ ತಂಡದ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್‌ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅವರು ದೀರ್ಘಾವಧಿ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಶಕಿಬ್‌ ಅಲ್‌ ಹಸನ್‌ರ ವಿಶ್ವ ದಾಖಲೆ ಮುರಿದ ಸೀನ್‌ ವಿಲಿಯಮ್ಸ್‌!

ಶಕಿಬ್‌ ಅಲ್‌ ಹಸನ್‌ ಅವರ ವಿಶ್ವ ದಾಖಲೆಯನ್ನು ಮುರಿದ ಸೀನ್‌ ವಿಲಿಯಮ್ಸ್‌. -

Profile Ramesh Kote Sep 3, 2025 8:30 PM

ನವದೆಹಲಿ: ಹರಾರೆಯ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ(ZIM vs SL) ಆಡುವ ಮೂಲಕ ಜಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ ಸೀನ್‌ ವಿಲಿಯಮ್ಸನ್‌ (Sean Williams) ಅವರು ಬಾಂಗ್ಲಾದೇಶ ತಂಡದ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್‌ (Shakib AL Hasan) ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಸೆಪ್ಟಂಬರ್‌ 3 ರಂದು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ 38ರ ವಯಸ್ಸಿನ ಬ್ಯಾಟ್ಸ್‌ಮನ್‌ ಆಡಿದರು. ಆ ಮೂಲಕ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಆದರೆ, ಅವರು ತಮ್ಮ ಕಮ್‌ಬ್ಯಾಕ್‌ ಪಂದ್ಯದಲ್ಲಿ ನಿರಾಶೆ ಮೂಡಿಸಿದರು. ಸೀನ್‌ ವಿಲಿಯಮ್ಸ್‌ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 11 ಎಸೆತಗಳಲ್ಲಿ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಕಳೆದ ವರ್ಷ ಸೀನ್‌ ವಿಲಿಯಮ್ಸನ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2024ರ ಮೇ 12 ರಂದು ಬಾಂಗ್ಲಾದೇಶ ವಿರುದ್ಧದ ಟಿ20ಐ ಸರಣಿಯ ಬಳಿಕ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ, ಅವರು 2026ರ ಐಸಿಸಿ ಟಿ20 ವಿಶ್ವಕಪ್‌ನ ಆಫ್ರಿಕನ್‌ ಕ್ವಾಲಿಫೈಯರ್‌ ಆಡುವ ಸಲುವಾಗಿ ತಮ್ಮ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ. ಸೆಪ್ಟಂಬರ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ. 2024ರಲ್ಲಿ ಅರ್ಹತೆಯನ್ನು ಕಳೆದುಕೊಂಡಿದ್ದ ಜಿಂಬಾಬ್ವೆ ತಂಡ, ಇದೀಗ ಪುನಃ ಅರ್ಹತೆಯನ್ನು ಪಡೆಯಲು ಎದುರು ನೋಡುತ್ತಿದೆ.

Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್‌ ಪಾಂಡ್ಯ!

ಇತಿಹಾಸ ಬರೆದ ಸೀನ್‌ ವಿಲಿಯಮ್ಸ್‌

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿಯೇ ಯಾವುದೇ ಆಟಗಾರನಿಂದ ಸಾಧ್ಯವಾಗದ ವಿಶ್ವ ದಾಖಲೆಯನ್ನು ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ ಸೀನ್‌ ವಿಲಿಯಮ್ಸ್‌ ಬರೆದಿದ್ದಾರೆ. ಆ ಮೂಲಕ ಬಾಂಗ್ಲಾದೇಶ ತಂಡದ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್‌ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಟಿ20ಐ ಕ್ರಿಕೆಟ್‌ ಆಡಿದ 18ಕ್ಕೂ ಹೆಚ್ಚು ವರ್ಷಗಳ ವೃತ್ತಿ ಜೀವನವನ್ನು ಹೊಂದಿರುವ ಮೊದಲ ಆಟಗಾರ ಎಂಬ ಕೀರ್ತಿಗೆ 38ರ ಪ್ರಾಯದ ಬ್ಯಾಟ್ಸ್‌ಮನ್‌ ಭಾಜನರಾಗಿದ್ದಾರೆ.

ವಿಲಿಯಮ್ಸ್ ಮತ್ತು ಶಕಿಬ್ ಹಲವು ವರ್ಷಗಳ ಕಾಲ ಈ ದಾಖಲೆಯನ್ನು ಹಂಚಿಕೊಂಡಿದ್ದರು. 2006 ರಲ್ಲಿ ಜಿಂಬಾಬ್ವೆ ಬಾಂಗ್ಲಾದೇಶವನ್ನು ಖುಲ್ನಾ ಡಿವಿಷನ್ ಕ್ರೀಡಾಂಗಣದಲ್ಲಿ ಏಕೈಕ ಟಿ20ಐ ಪಂದ್ಯದಲ್ಲಿ ಎದುರಿಸಿತ್ತು. ಇದೇ ಪಂದ್ಯದಲ್ಲಿ ಈ ಇಬ್ಬರೂ ಪದಾರ್ಪಣೆ ಮಾಡಿದ್ದರು. ಶಕೀಬ್, ವಿಲಿಯಮ್ಸ್ ಆಡಿದ ಕೊನೆಯ ಪಂದ್ಯದಲ್ಲಿ ಭಾಗವಹಿಸಿದ್ದರು. 2024ರ ಟಿ20 ವಿಶ್ವಕಪ್ ಆಡುವ ಮೂಲಕ ಶಕಿಬ್‌, ಜಿಂಬಾಬ್ವೆ ಆಟಗಾರನನ್ನು ಹಿಂದಿಕ್ಕಿದರು. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟ್ ದಂತಕಥೆ ಈ ಟೂರ್ನಿಯ ಬಳಿಕ ನಿವೃತ್ತಿಯನ್ನು ಘೋಷಿಸಿದ್ದರು. ಅಂದರೆ ವಿಲಿಯಮ್ಸ್, ಕಮ್‌ಬ್ಯಾಕ್‌ ಮಾಡಿದ ದಿಗ್ಗಜರ ಪಟ್ಟಿಯಲ್ಲಿ ಶಕಿಬ್‌ ಅವರನ್ನು ಹಿಂದಿಕ್ಕಿದ್ದಾರೆ.

Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್‌ ಪಠಾಣ್‌!

ಬ್ರೆಂಡನ್ ಟೇಲರ್ ಕೂಡ ವಿಲಿಯಮ್ಸ್ ಮತ್ತು ಶಕೀಬ್ ಅವರಂತೆಯೇ ಅದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು ಮತ್ತು ಟಿ20ಐ ಪಂದ್ಯಗಳನ್ನು ಆಡಲು ರಾಷ್ಟ್ರೀಯ ತಂಡಕ್ಕೆ ಮರಳಿದರೆ, ವಿಲಿಯಮ್ಸ್ ಅವರೊಂದಿಗೆ ದಾಖಲೆಯನ್ನು ಹಂಚಿಕೊಳ್ಳಲಿದ್ದಾರೆ. 39 ವರ್ಷದ ಬ್ಯಾಟ್ಸ್‌ಮನ್‌ ಶ್ರೀಲಂಕಾ ವಿರುದ್ಧದ ಸರಣಿಗಾಗಿ ನಾಲ್ಕು ವರ್ಷಗಳ ನಂತರ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಗಾಯದಿಂದಾಗಿ ಅವರು ಆಡುವ XI ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡರು.