ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Crash: ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಡೆಲ್ಟಾ ವಿಮಾನ; ವಿಡಿಯೋ ಇದೆ

ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಡೆಲ್ಟಾ ಏರ್ ಲೈನ್ಸ್ ವಿಮಾನವು ಅಪಘಾತಕ್ಕೀಡಾಗಿದೆ. ಘಟನೆಯ ಪರಿಣಾಮ 18 ಜನರು ಗಾಯಗೊಂಡಿದ್ದಾರೆ. ಹಿಮಭರಿತ ನೆಲದ ಮೇಲೆ ವಿಮಾನ ಮಗುಚಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಡೆಲ್ಟಾ ವಿಮಾನ

ವಿಮಾನ ಮಗುಚಿ ಬಿದ್ದಿರುವುದು

Profile Vishakha Bhat Feb 18, 2025 11:56 AM

ಒಟ್ಟಾವಾ: ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಡೆಲ್ಟಾ ಏರ್ ಲೈನ್ಸ್ ವಿಮಾನವು ಅಪಘಾತಕ್ಕೀಡಾಗಿ (Plane Crash) ತಲೆಕೆಳಗಾಗಿ ಉರುಳಿಬಿದ್ದದೆ. ಅಪಘಾತದ ಪರಿಣಾಮ 18 ಜನರು ಗಾಯಗೊಂಡಿದ್ದಾರೆ. ಮಿನ್ನಿಯಾಪೋಲಿಸ್-ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MSP) ಹೊರಟಿದ್ದ ವಿಮಾನವು 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ 80 ಜನರನ್ನು ಹೊತ್ತೊಯ್ಯುತ್ತಿತ್ತು. ಈ ವರೆಗೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಘಟನೆಯ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಭರಿತ ನೆಲದ ಮೇಲೆ ವಿಮಾನ ಮಗುಚಿ ಬಿದ್ದಿದೆ.



ಈ ಘಟನೆ ಮಧ್ಯಾಹ್ನ 2:15 ಕ್ಕೆ (ಸ್ಥಳೀಯ ಸಮಯ) ನಡೆದಿದ್ದು, ವಿಮಾನ ನಿಲ್ದಾಣದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಪಘಾತದಿಂದ ತೊಂದರೆಯಾವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಡೆಲ್ಟಾ ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಮಿನ್ನಿಯಾಪೋಲಿಸ್‌ನಿಂದ ಬರುತ್ತಿದ್ದ 80 ಜನರಿದ್ದ ವಿಮಾನ ರನ್‌ವೇಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಂತರ ತುರ್ತು ಕಾರ್ಯಾಚರಣೆ ತಂಡಗಳು ಕಾರ್ಯಾಚರಣೆ ನಡೆಸಿರುವುದಾಗಿ ಟೊರೊಂಟಾ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Aircraft collide: ನಿಲುಗಡೆ ಮಾಡಿದ್ದ ಡೆಲ್ಟಾ ವಿಮಾನಕ್ಕೆ ಜಪಾನ್ ಏರ್ಲೈನ್ಸ್ ವಿಮಾನ ಡಿಕ್ಕಿ; ವಿಡಿಯೋ ಇಲ್ಲಿದೆ

ಪ್ರಯಾಣಿಕರೊಬ್ಬರು ಈ ಬಗ್ಗೆ ಮಾತನಾಡಿ ವಿಮಾನ ಮಗುಚಿ ಬಿದ್ದ ನಂತರ ನಾವು ತಲೆಕೆಳಗಾದೆವು, ಬಾವಲಿ ರೀತಿ ವಿಮಾನದಲ್ಲಿ ನೇತಾಡುತ್ತಿದ್ದೆವು ಎಂದು ಹೇಳಿದ್ದಾರೆ.



ಅಪಘಾತದ ಕಾರಣವನ್ನು ತನಿಖೆ ಮಾಡುವುದಾಗಿ ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಅದು ಇನ್ನೂ ತಿಳಿದುಬಂದಿಲ್ಲ. ಆದರೆ ತೀವೃವಾದ ಹಿಮಪಾತವಾದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ.