ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾದ ಶೂ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: 28 ಕಾರ್ಮಿಕರು ಸಜೀವ ದಹನ

Fire Accident: ಚೀನಾದ ಫುಜಿಯನ್ ಪ್ರಾಂತ್ಯದ ಜಿಂಜಿಯಾಂಗ್ ನಗರದ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 28 ಕಾರ್ಮಿಕರು ಮೃತಪಟ್ಟಿದ್ದಾರೆ. ನೂರಾರು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದು, ದುರಂತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧ್ಯಕ್ಷ ಷಿ ಜಿನ್‌ಪಿಂಗ್ ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ.

ಶೂ ಕಾರ್ಖಾನೆಯಲ್ಲಿ ಅಗ್ನಿ ದುರಂತ; 28 ಮಂದಿ ಸಾವು

ಅಗ್ನಿ ಅವಘಡದ ದೃಶ್ಯ -

Profile
Sushmitha Jain Jul 9, 2026 11:16 PM

ಬೀಜಿಂಗ್‌, ಜು. 9: ಚೀನಾದ ಪ್ರಸಿದ್ಧ ಪಾದರಕ್ಷೆ ತಯಾರಿಕಾ ಕೇಂದ್ರವಾದ ಪೂರ್ವ ಚೀನಾದ ಫುಜಿಯನ್ ಪ್ರಾಂತ್ಯದ ಜಿಂಜಿಯಾಂಗ್ (Jinjiang) ನಗರದ ಜಿಂಗ್ಟೌ (Jiangtou) ಗ್ರಾಮದಲ್ಲಿರುವ ಹುಯಿಟೆಂಗ್ ಶೂಸ್ (Huiteng Shoes) ಕಾರ್ಖಾನೆಯಲ್ಲಿ ಗುರುವಾರ (ಜುಲೈ 8) ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 28 ಜನರು ಸಜೀವ ದಹನವಾಗಿದ್ದಾರೆ. ನೂರಾರು ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹದಗೆಡದಂತೆ ನಿಯಂತ್ರಣಕ್ಕೆ ತಂದಿದ್ದಾರೆ.

ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' ವರದಿಯ ಪ್ರಕಾರ, ಚೆಂಡೈ ಪಟ್ಟಣದ ಕೈಟುವೊ ಈಸ್ಟ್ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಮಧ್ಯಾಹ್ನ 12:04ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಇಡೀ ಬಹುಮಹಡಿ ಕಟ್ಟಡವನ್ನು ಆವರಿಸಿದ ದಟ್ಟವಾದ ಜ್ವಾಲೆಯು, ಆಕಾಶದ ಎತ್ತರಕ್ಕೆ ಕಪ್ಪು ಹೊಗೆಯನ್ನು ಸೂಸಲಾರಂಭಿಸಿತು. ಘಟನೆ ತಿಳಿಯುತ್ತಿದ್ದಂತೆ ನೆರೆಯ ಕ್ವಾನ್‌ಝೌ ನಗರದಿಂದ 183 ಅಗ್ನಿಶಾಮಕ ಸಿಬ್ಬಂದಿ ಮತ್ತು 35 ಅಗ್ನಿಶಾಮಕ ವಾಹನಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು.

ಅಗ್ನಿ ದುರಂತದ ದೃಶ್ಯ:



ಸಿಸಿಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದಿಗಿಲು ಮೂಡಿಸುವ ದೃಶ್ಯ

ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿyoಗಳಲ್ಲಿ ಕಾರ್ಖಾನೆಯ ಬಹುಭಾಗ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವುದು ಕಂಡುಬಂದಿದೆ. ಕಟ್ಟಡದ ಛಾವಣಿಯ ಮೇಲೆ ಸಿಲುಕಿಕೊಂಡಿದ್ದ ಹಲವು ಕಾರ್ಮಿಕರು ರಕ್ಷಣೆಗಾಗಿ ಕೈಬೀಸುತ್ತಾ ಸಹಾಯಕ್ಕಾಗಿ ತೀವ್ರವಾಗಿ ಗೋಗರೆಯುತ್ತಿರುವ ದೃಶ್ಯಗಳು ದಿಗಿಲು ಮೂಡಿಸುವಂತಿದ್ದವು. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ಮತ್ತೊಂದು ಲವ್‌ ಜಿಹಾದ್‌? ಹಿಂದೂ ಯುವತಿಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ ನವಾಜ್‌

ತುರ್ತು ರಕ್ಷಣೆಗೆ ಅಧ್ಯಕ್ಷ ಜಿನ್‌ಪಿಂಗ್ ಆದೇಶ

ದುರಂತಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಕಾರ್ಖಾನೆಯೊಳಗೆ ಸಿಲುಕಿರುವ ಪ್ರತಿಯೊಬ್ಬರನ್ನು ರಕ್ಷಿಸಲು ಮತ್ತು ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಎಲ್ಲ ರೀತಿಯ ಪ್ರಯತ್ನ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ನೆರವು ನೀಡಲು ಹಾಗೂ ಘಟನೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ಅವರು ಸೂಚಿಸಿದ್ದಾರೆ. ಈ ವರ್ಷ ಚೀನಾದಲ್ಲಿ ಹಲವು ಪ್ರಮುಖ ಕೈಗಾರಿಕಾ ಅಪಘಾತಗಳು ಸಂಭವಿಸಿದ್ದು, ಇಂತಹ ದುರಂತಗಳಿಂದ ಅಧಿಕಾರಿಗಳು ಪಾಠ ಕಲಿಯಬೇಕೆಂದು ಜಿನ್‌ಪಿಂಗ್ ಎಚ್ಚರಿಸಿದ್ದಾರೆ.

ವಿಶ್ವದ ಶೂ ಉದ್ಯಮದ ಹೃದಯಭಾಗ

ಈ ಭೀಕರ ದುರಂತ ಸಂಭವಿಸಿರುವ ಚೆಂಡೈ ಪಟ್ಟಣವು ಜಿಂಜಿಯಾಂಗ್‌ನ ಪಾದರಕ್ಷೆ ಉದ್ಯಮದ ಹೃದಯಭಾಗವೆಂದು ಪರಿಗಣಿಸಲ್ಪಟ್ಟಿದೆ. ಈ ಪ್ರದೇಶವು ವಾರ್ಷಿಕವಾಗಿ 100 ಕೋಟಿಗೂ ಹೆಚ್ಚು ಜೋಡಿ ಕ್ರೀಡಾ ಶೂಗಳನ್ನು ಉತ್ಪಾದಿಸುತ್ತದೆ. ಜಾಗತಿಕವಾಗಿ ಉತ್ಪಾದನೆಯಾಗುವ ಒಟ್ಟು ಅಥ್ಲೆಟಿಕ್ ಶೂಗಳಲ್ಲಿ ಪ್ರತಿ ಐದರಲ್ಲಿ ಒಂದು ಜೋಡಿ ಶೂಗಳು ಜಿಂಜಿಯಾಂಗ್‌ನಲ್ಲೇ ತಯಾರಾಗುತ್ತವೆ. ಇಂತಹ ಪ್ರಮುಖ ಆರ್ಥಿಕ ವಲಯದಲ್ಲಿ ನಡೆದಿರುವ ಈ ದುರಂತವು ಚೀನಾದ ಕೈಗಾರಿಕಾ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಚೀನಾದ ತುರ್ತು ನಿರ್ವಹಣಾ ಸಚಿವಾಲಯವು ಜಂಟಿ ಕಾರ್ಯಪಡೆಯನ್ನು ರಚಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದೆ.