ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜ್ ಮಹಲ್, ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಟ್ರಂಪ್ ಪುತ್ರಿ ಟಿಫಾನಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫಾನಿ ಟ್ರಂಪ್ ಅವರು ಪತಿ ಮೈಕೆಲ್ ಬುವೊಲೊಸ್ ಮತ್ತು ಕೆಲವು ಸ್ನೇಹಿತರೊಂದಿಗೆ ಭಾರತ ಪ್ರವಾಸ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಅವರು ತಾಜ್ ಮಹಲ್, ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪತಿಯೊಂದಿಗೆ ಟ್ರಂಪ್ ಪುತ್ರಿ ಟಿಫಾನಿ ಭಾರತ ಪ್ರವಾಸ

ಸಂಗ್ರಹ ಚಿತ್ರ -

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಪುತ್ರಿ ಟಿಫಾನಿ ಟ್ರಂಪ್ (Tiffany Trump) ಅವರು ಪತಿ (Michael Buolos) ಮತ್ತು ಸ್ನೇಹಿತರೊಂದಿಗೆ ಭಾರತ ಪ್ರವಾಸದಲ್ಲಿದ್ದರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವರು ಆಗ್ರಾದ (Agra) ತಾಜ್ ಮಹಲ್ (Taj Mahal) ಮತ್ತು ದೆಹಲಿಯ (Delhi) ಅಕ್ಷರಧಾಮ ದೇವಾಲಯದಂತಹ (Akshardham Temple) ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಅವರ ಖಾಸಗಿ ಪ್ರವಾಸವಾಗಿದ್ದರೂ ಕೂಡ ಅವರ ಭದ್ರತೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫಾನಿ ಟ್ರಂಪ್ ಅವರು ಪತಿ ಮೈಕೆಲ್ ಬುವೊಲೊಸ್ ಮತ್ತು ಕೆಲವು ಸ್ನೇಹಿತರೊಂದಿಗೆ ದೆಹಲಿಯ ಅಕ್ಷರಧಾಮ ಮತ್ತು ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಶುಕ್ರವಾರ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಶನಿವಾರ ಬೆಳಗ್ಗೆ ಮೈಕೆಲ್ ಮತ್ತು ಅವರು ತಾಜ್ ಮಹಲ್‌ಗೆ ಭೇಟಿ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಮುಂದುವರಿದ ಭಾರತೀಯ ಹಡಗುಗಳ ಸಂಚಾರ: ಇದು ಹೇಗೆ? ರಹಸ್ಯ ಕಾರ್ಯತಂತ್ರ ಬಿಚ್ಚಿಟ್ಟ ಕೇಂದ್ರ

tajbs

ಅಕ್ಷರಧಾಮ ದೇವಾಲಯದ ಅಧಿಕೃತ ಎಕ್ಸ್ ಖಾತೆಯಲ್ಲೂ ಕೂಡ ಇದನ್ನು ಹಂಚಿಕೊಂಡಿದೆ. ಇದರಲ್ಲಿ ಟಿಫಾನಿ ಅವರು ಸಂಸ್ಕೃತಿ ಮತ್ತು ಪರಂಪರೆಯನ್ನು ಅನ್ವೇಷಿಸುವ ಸುಂದರ ದಿನ ಎಂದು ಬರೆದಿದ್ದಾರೆ. ನವದೆಹಲಿಯ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಟಿಫಾನಿ ಟ್ರಂಪ್, ಮೈಕೆಲ್ ಬೌಲೋಸ್ ಮತ್ತು ಅವರ ಸ್ನೇಹಿತರನ್ನು ಸತ್ಕರಿಸುವ ಗೌರವ ಸಿಕ್ಕಿದೆ ಎಂದು ಹೇಳಿದೆ.



ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿ ದಂಪತಿಗೆ ಭಾರತಕ್ಕೆ ಸ್ವಾಗತ ಎಂದು ಹೇಳಿ ಅವರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರ ಬಳಿಕ ಟಿಫಾನಿ ದಂಪತಿ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು. ಅಲ್ಲಿಂದ ಬಳಿಕ ಅವರು ಜೈಸಲ್ಮೇರ್‌ಗೆ ತೆರಳಿದ್ದಾರೆ. ಇದು ಖಾಸಗಿ ಭೇಟಿಯಾಗಿದ್ದರೂ ಕೂಡ ಅವರ ಭದ್ರತೆಗೆ ಸಂಪೂರ್ಣ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Ankola Bus Accident: ಅಂಕೋಲಾ ಬಳಿ ಸೀಬರ್ಡ್ ಬಸ್ ಪಲ್ಟಿಯಾಗಿ ಓರ್ವ ಸಾವು; 21 ಪ್ರಯಾಣಿಕರಿಗೆ ಗಾಯ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾರ್ಲಾ ಮೇಪಲ್ಸ್ ದಂಪತಿಯ ಮಗಳಾಗಿರುವ ಟಿಫಾನಿ ಟ್ರಂಪ್ 2020ರಲ್ಲಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಿಂದ ಜ್ಯೂರಿಸ್ ಪದವಿ ಪಡೆದರು. 2022ರಲ್ಲಿ ಉದ್ಯಮಿ ಮೈಕೆಲ್ ಬುವೊಲೊಸ್ ಅವರನ್ನು ವಿವಾಹವಾಗಿದ್ದಾರೆ.