ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರ್ಜುನ್‌ ಸರ್ಜಾ ಪುತ್ರಿ ಅಂಜನಾ ಮದುವೆಗೆ ಚಿರು ಪತ್ನಿಯನ್ನು ಆಹ್ವಾನಿಸಿರಲಿಲ್ಲವೇ? ಅಸಲಿ ಸತ್ಯ ಬಿಚ್ಚಿಟ್ಟ ಮೇಘನಾ ರಾಜ್‌ ಸರ್ಜಾ!

Meghana Raj Sarja: ವಿದೇಶದಲ್ಲಿ ನಡೆದ ನಟ ಅರ್ಜುನ್ ಸರ್ಜಾ ಪುತ್ರಿ ಅಂಜನಾ ಅವರ ವಿವಾಹ ಸಮಾರಂಭಕ್ಕೆ ಮೇಘನಾ ರಾಜ್‌ ಸರ್ಜಾ ಗೈರಾಗಿದ್ದರು. ಈ ಮದುವೆಗೆ ಅವರು ಏಕೆ ಹೋಗಲಿಲ್ಲ ಎಂಬ ಪ್ರಶ್ನೆ ಫ್ಯಾನ್ಸ್‌ಗೆ ಕಾಡುತ್ತಿತ್ತು. ಈ ಬಗ್ಗೆ ಮೇಘನಾ ರಾಜ್‌ ಅವರೇ ಉತ್ತರ ನೀಡಿದ್ದಾರೆ.

ಅರ್ಜುನ್ ಸರ್ಜಾ ಮಗಳ ಮದುವೆಗೆ ಚಿರು ಪತ್ನಿ ಮೇಘನಾಗೆ ಆಹ್ವಾನ ನೀಡಿಲ್ಲವೇಕೆ?

-

Avinash GR
Avinash GR Nov 3, 2026 12:52 PM

‘ಆ್ಯಕ್ಷನ್ ಕಿಂಗ್’ ಅರ್ಜುನ್ ಸರ್ಜಾ 2ನೇ ಪುತ್ರಿ ಅಂಜನಾ ಸರ್ಜಾ ಅವರ ವಿವಾಹ ಇತ್ತೀಚೆಗೆ ವಿದೇಶದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವಿದೇಶಿ ಮೂಲದ ಇಸಾಯ್ ಎಂಬುವವರ ಕೈಹಿಡಿದಿರುವ ಅಂಜನಾ, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಸಾಯ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಹಿಂದೂ ಹಾಗೂ ಕ್ರೈಸ್ತ ಎರಡೂ ಸಂಪ್ರದಾಯಗಳ ಪ್ರಕಾರ ಇಟಲಿಯಲ್ಲಿ ಈ ಮದುವೆ ಜರುಗಿದೆ. ಆದರೆ, ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ಸರ್ಜಾ ಗೈರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಚಿರು ಪತ್ನಿಗೆ ಆಹ್ವಾನ ಇರಲಿಲ್ಲವೇ?

ಅರ್ಜುನ್ ಸರ್ಜಾ ಕುಟುಂಬದವರು ಹಂಚಿಕೊಂಡ ಮದುವೆಯ ಯಾವುದೇ ಫೋಟೋಗಳಲ್ಲೂ ಮೇಘನಾ ರಾಜ್ ಕಾಣಿಸಿಕೊಂಡಿರಲಿಲ್ಲ. ಅರ್ಜುನ್ ಸರ್ಜಾ ಅವರ ತಂಗಿಯ ಮಗನಾದ ಚಿರಂಜೀವಿ ಸರ್ಜಾ ಅವರ ಪತ್ನಿಗೆ ಆಹ್ವಾನ ಸಿಕ್ಕಿರಲಿಲ್ಲವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಈ ಎಲ್ಲಾ ಗೊಂದಲ ಹಾಗೂ ಊಹಾಪೋಹಗಳಿಗೆ ಸ್ವತಃ ಮೇಘನಾ ರಾಜ್ ಅವರೇ ನೇರವಾದ ಉತ್ತರ ನೀಡುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.

Photos: ವಿದೇಶದಲ್ಲಿ ಅದ್ಧೂರಿಯಾಗಿ ನಡೆಯಿತು ನಟ ಅರ್ಜುನ್‌ ಸರ್ಜಾ 2ನೇ ಮಗಳು ಅಂಜನಾ ಮದುವೆ; ವರನ್ಯಾರು ಗೊತ್ತೇ?

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್‌ ಅವರು, "ನನ್ನನ್ನು ಆ ಮದುವೆಗೆ ಕರೆದಿರಲಿಲ್ಲ, ಹೀಗಾಗಿ ನಾನು ಹೋಗಿರಲಿಲ್ಲ. ಆ ಮದುವೆಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಹೋಗಿದ್ದರು. ನನ್ನನ್ನು ಯಾಕೆ ಕರೆಯಲಿಲ್ಲ ಎಂಬ ಪ್ರಶ್ನೆಯನ್ನು ನನಗೆ ಕೇಳಬಾರದು, ಅವರನ್ನೇ (ಅರ್ಜುನ್ ಸರ್ಜಾ) ಕೇಳಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.

14 ವರ್ಷಗಳ ಲವ್‌

ಅಂಜನಾ ಮತ್ತು ಇಸಾಯ್ ಅವರದ್ದು 14 ವರ್ಷಗಳ ಸುದೀರ್ಘ ಪ್ರೇಮ ವಿವಾಹ. ಶಾಲಾ ದಿನಗಳಿಂದಲೂ ಪ್ರೀತಿಸುತ್ತಿದ್ದ ಈ ಜೋಡಿಯ ಅಂತರ್ಧರ್ಮೀಯ ವಿವಾಹಕ್ಕೆ ಅರ್ಜುನ್ ಸರ್ಜಾ ಹಾಗೂ ನಿವೇದಿತಾ ದಂಪತಿ ಹಸಿರು ನಿಶಾನೆ ತೋರಿದ್ದರು. ಇಟಲಿಯಲ್ಲಿ ನಡೆದ ಈ ಮದುವೆಗೆ ಕೇವಲ ಅತ್ಯಂತ ಆತ್ಮೀಯರಷ್ಟೇ ಸಾಕ್ಷಿಯಾಗಿದ್ದರು. ನಟ ಧ್ರುವ ಸರ್ಜಾ, ಅವರ ಪತ್ನಿ ಪ್ರೇರಣಾ ಹಾಗೂ ಕೆಲವೇ ಕೆಲವು ಕುಟುಂಬದ ಸದಸ್ಯರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮತ್ತೊಂದೆಡೆ, ಈ ಮದುವೆಯ ಫೋಟೋಗಳಲ್ಲಿ ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಮಾತ್ರ ಕಾಣಿಸಿಕೊಂಡಿದ್ದು, ಆಕೆಯ ಪತಿ ನಟ ಉಮಾಪತಿ ರಾಮಯ್ಯ ಎಲ್ಲಿಯೂ ಕಾಣಿಸಿಲ್ಲದಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಪತ್ನಿಯ ತಂಗಿಯ ಮದುವೆಗೆ ಅಳಿಯ ಉಮಾಪತಿ, ಅವರ ತಂದೆ ಏಕೆ ಹಾಜರಾಗಿರಲಿಲ್ಲ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.