ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dubai princess: ಇನ್‌ಸ್ಟಾಗ್ರಾಮ್‌ನಲ್ಲಿ ಪತಿಗೆ ತಲಾಖ್! ಎರಡನೇ ಮದ್ವೆಗೆ ರೆಡಿಯಾದ ದುಬೈ ರಾಜಕುಮಾರಿ

ದುಬೈ (Dubai) ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ (Shaikha Mahra Mohammed Rashed Al Maktoum) ಅವರು ತಮ್ಮ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿದ್ದರು. ಜುಲೈ 16 ರಂದು ರಾಜಕುಮಾರಿ ತಾನು ವಿಚ್ಛೇದನ ನೀಡುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ಅದೇ ರಾಜಕುಮಾರಿ ಮತ್ತೋಮ್ಮೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪತಿಗೆ ತಲಾಖ್ ಮತ್ತೆ ಮದ್ವೆಗೆ ರೆಡಿಯಾದ ರಾಜಕುಮಾರಿ!

ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ -

Profile Sushmitha Jain Aug 30, 2025 12:10 PM

ದುಬೈ: ದುಬೈ ಆಡಳಿತಗಾರ (Dubai Ruler) ಮತ್ತು ಯುಎಇ ಪ್ರಧಾನಿ (UAE Prime Minister) ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರ ಪುತ್ರಿ 31 ವರ್ಷದ ಶೇಖಾ ಮಹ್ರಾ ಮೊಹಮ್ಮದ್ ರಾಶಿದ್ ಅಲ್ ಮಕ್ತೂಮ್ (Sheikh Mohammed bin Rashid Al Maktoum,) ರ‍್ಯಾಪರ್ ಫ್ರೆಂಚ್ ಮಾಂಟಾನಾ (40) ಜೊತೆ ನಿಶ್ಚಿತಾರ್ಥವಾಗಿದ್ದಾರೆ. ಜೂನ್ 2025 ರಲ್ಲಿ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಈ ಜೋಡಿ ತಮ್ಮ ಸಂಬಂಧವನ್ನು ಖಚಿತಪಡಿಸಿತ್ತು.

2024 ರ ಕೊನೆಯಲ್ಲಿ ಶೇಖಾ ಮಹ್ರಾ ಮಾಂಟಾನಾ ಅವರನ್ನು ದುಬೈನಲ್ಲಿ ಪ್ರವಾಸ ಕರೆದೊಯ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗಿನಿಂದ ಇವರು ದುಬೈ, ಮೊರಾಕೊ ಮತ್ತು ಪ್ಯಾರಿಸ್‌ನ ಪಾಂಟ್ ಡೆಸ್ ಆರ್ಟ್ಸ್ ಸೇತುವೆಯಂತಹ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವರ್ಷ ಆರಂಭದಲ್ಲಿ ಪ್ಯಾರಿಸ್‌ನ ಫ್ಯಾಷನ್ ಈವೆಂಟ್‌ಗಳಲ್ಲಿ ಕೈಕೈ ಹಿಡಿದು ಕಾಣಿಸಿಕೊಂಡಾಗ ಇವರ ಸಂಬಂಧ ಸಾರ್ವಜನಿಕವಾಯಿತು.

ಈ ಸುದ್ದಿಯನ್ನು ಓದಿ:Viral News: ನಡುರಸ್ತೆಯಲ್ಲಿ ಬಟ್ಟೆ ತೊಳೆದ ಭೂಪಾ.. ಇದು ಅಭಿವೃದ್ಧಿ ಹೊಂದಿರುವ ದೇಶದ ಅವಸ್ಥೆ!

ಶೇಖಾ ಮಹ್ರಾ ಈ ಹಿಂದೆ ಶೇಖ್ ಮಾನಾ ಬಿನ್ ಮೊಹಮ್ಮದ್ ಬಿನ್ ರಾಶಿದ್ ಬಿನ್ ಮಾನಾ ಅಲ್ ಮಕ್ತೂಮ್‌ರನ್ನು 2023 ರ ಮೇನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ಆದರೆ, 2024 ರಲ್ಲಿ ಶೇಖಾ ಮಹ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಚ್ಛೇದನ ಘೋಷಿಸಿದ್ದರು, ತಮ್ಮ ಪತಿಯನ್ನು ವಿಶ್ವಾಸದ್ರೋಹದ ಆರೋಪದ ಮೇಲೆ “ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ” ಎಂದು ಮೂರು ಬಾರಿ ಬರೆದಿದ್ದರು. ವಿಚ್ಛೇದನದ ನಂತರ ಆಕೆ “ಡಿವೋರ್ಸ್” ಎಂಬ ಸುಗಂಧ ದ್ರವ್ಯವನ್ನು ಮಹ್ರಾ ಎಂ1 ಬ್ರಾಂಡ್‌ನಡಿ ಬಿಡುಗಡೆ ಮಾಡಿದ್ದರು. ಶೇಖಾ ಮಹ್ರಾ ಯುಕೆ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಮತ್ತು ಮೊಹಮ್ಮದ್ ಬಿನ್ ರಾಶಿದ್ ಆಡಳಿತ ಕಾರ್ಯಕ್ರಮದಿಂದ ಅರ್ಹತೆ ಪಡೆದಿದ್ದಾರೆ.

ರ‍್ಯಾಪರ್ ಫ್ರೆಂಚ್ ಮಾಂಟಾನಾ ಅವರ ನಿಜವಾದ ಹೆಸರು ಕರೀಂ ಖರ್ಬೌಚ್, “ಅನ್‌ಫರ್‌ಗೆಟಬಲ್” ಮತ್ತು “ನೋ ಸ್ಟೈಲಿಸ್ಟ್” ಗೀತೆಗಳಿಂದ ಜಾಗತಿಕವಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಉಗಾಂಡ ಮತ್ತು ಉತ್ತರ ಆಫ್ರಿಕಾದಲ್ಲಿ ಆರೋಗ್ಯ ಮತ್ತು ಶಿಕ್ಷಣ ಯೋಜನೆಗಳಿಗೆ ಧನಸಹಾಯ ನೀಡುವ ಮೂಲಕ ದಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮಾಂಟಾನಾ 2007 ರಿಂದ 2014 ರವರೆಗೆ ಉದ್ಯಮಿ ನದೀನ್ ಖರ್ಬೌಚ್‌ ಅವರನ್ನು ವಿವಾಹವಾಗಿದ್ದು, ಇವರಿಗೆ 16 ವರ್ಷದ ಮಗ ಕ್ರುಜ್ ಖರ್ಬೌಚ್ ಇದ್ದಾನೆ.