ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elon Musk: 'X' ಮೇಲೆ ಸೈಬರ್ ದಾಳಿ ; ಒಂದು ದೇಶದ ಕೈವಾಡ ಎಂದ ಎಲಾನ್‌ ಮಸ್ಕ್!

ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ನಲ್ಲಿ ಸೋಮವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೊಡ್ಡ ಮಟ್ಟದ ಸೈಬರ್ ದಾಳಿಯಿಂದಾಗಿ ಈ ರೀತಿ ಆಗಿದೆ ಎಂದು ಮಸ್ಕ್‌ ಹೇಳಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಎಕ್ಸ್‌' ಮೇಲೆ ಉದ್ದೇಶಪೂರ್ವಕ ಸೈಬರ್‌ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ‌ ವಿರೋಧಿ ರಾಷ್ಟ್ರವೇ ಇದರ ಹಿಂದೆ ಇರಬಹುದು ಎಂದು ಹೇಳಿದ್ದಾರೆ.

'X' ಮೇಲೆ ಸೈಬರ್ ದಾಳಿ; ಉದ್ಧೇಶಪೂರ್ವಕವಾಗಿ ಮಾಡಲಾಗಿದೆ ಎಂದ ಮಸ್ಕ್‌!

ಎಲಾನ್‌ ಮಸ್ಕ್‌

Profile Vishakha Bhat Mar 11, 2025 8:49 AM

ವಾಷಿಂಗ್ಟನ್‌: ಎಲಾನ್‌ ಮಸ್ಕ್‌ (Elon Musk) ಒಡೆತನದ ಎಕ್ಸ್‌ನಲ್ಲಿ ಸೋಮವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೊಡ್ಡ ಮಟ್ಟದ ಸೈಬರ್ ದಾಳಿಯಿಂದಾಗಿ ಈ ರೀತಿ ಆಗಿದೆ ಎಂದು ಮಸ್ಕ್‌ ಹೇಳಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಎಕ್ಸ್‌' ಮೇಲೆ ಉದ್ದೇಶಪೂರ್ವಕ ಸೈಬರ್‌ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ‌ ವಿರೋಧಿ ರಾಷ್ಟ್ರವೇ ಇದರ ಹಿಂದೆ ಇರಬಹುದು,ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಸೋಮವಾರ ಎಕ್ಸ್‌ನ ಸರ್ವರ್‌ ಡೌನ್‌ (X Server Down) ಆದ ಹಿನ್ನಲೆಯಲ್ಲಿ ಬಳಕೆದಾರರು ಪರದಾಡುವಂತಾಯಿತು.

ಪ್ರಪಂಚದಾದ್ಯಂತ ಬಳಕೆದಾರರು ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದರು. ಮಧ್ಯಾಹ್ನ 3.20 ರ ಸುಮಾರಿಗೆ 2,500 ಕ್ಕೂ ಹೆಚ್ಚು ಜನರಿಗೆ ಅಪ್ಲಿಕೇಶನ್ ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದು ಬಂದಿತ್ತು.

ಇದೀಗ ಪ್ರತಿಕ್ರಿಯೆ ನೀಡಿಡುವ ಮಸ್ಕ್‌ ಎಕ್ಸ್‌ ವಿರುದ್ಧ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿದೆ. ಪ್ರತಿದಿನ ಇಂತಹ ದಾಳಿಗಳು ಸಾಮಾನ್ಯವಾದರೂ, ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಸೈಬರ್‌ ದಾಳಿ ನಡೆಸಲಾಗಿದೆ. ಒಂದು ದೊಡ್ಡ ಸಂಘಟಿತ ಗುಂಪು ಅಥವಾ ಯಾವುದೋ ವಿರೋಧಿ ದೇಶ ಈ ಷಡ್ಯಂತ್ರದಲ್ಲಿ ಭಾಗಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಳಿಯ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್‌ ಮಸ್ಕ್‌ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್‌ ಟ್ರಂಪ್‌

ಡೌನ್‌ಡೆಟೆಕ್ಟರ್ ಪ್ರಕಾರ ಎಕ್ಸ್‌ ಸಾಮಾಜಿಕ ಜಾಲತಾಣವು ಸೋಮವಾರ ಮೂರು ಬಾರಿ ಸ್ಥಗಿತಗೊಂಡಿದೆ. ಮಧ್ಯಾಹ್ನ 3 ಗಂಟೆಗೆ, ಸಂಜೆ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಎಕ್ಸ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಬಳಕೆದಾರರಿಗೆ ಪರದೆಯ ಮೇಲೆ "ಏನೋ ತಪ್ಪಾಗಿದೆ, ಮರುಲೋಡ್ ಮಾಡಲು ಪ್ರಯತ್ನಿಸಿ" ಎಂಬ ಸಂದೇಶವನ್ನು ತೋರಿಸುತ್ತಿತ್ತು. ಶೇಕಡ 35 ರಷ್ಟು ಜನರು ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಎಕ್ಸ್‌ನಲ್ಲಿ ಇರುವ ಸಮಸ್ಯೆಯನ್ನು ಬಳಕೆದಾರರು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದು, ಹಲವರು ಕಿಡಿ ಕಾರಿದ್ದರು. ಎಕ್ಸ್‌ ತನ್ನ ಭದ್ರತಾ ಕ್ರಮಗಳನ್ನು ಬಲಪಡಿಸುತ್ತಿದೆ ಎಂದು ಹೇಳಿದ್ದು, ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದೆ.