Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ
Tattooing Dog Without Anesthesia: ಅರೆವಳಿಕೆ ಬಳಸದೆ ಶ್ವಾನದ ಮೈಮೇಲೆ ಟ್ಯಾಟೂ ಹಾಕಿಸಲಾಗಿದೆ ಎಂದು ಚೀನಾದ ವ್ಯಕ್ತಿಯೊಬ್ಬ ಹೇಳಿಕೆ ನೀಡಿದ ಬಳಿಕ ಆತನನ್ನು ಪೆಟ್ ಫೇರ್ ಏಷ್ಯಾ ಸಾಕುಪ್ರಾಣಿ ಪ್ರದರ್ಶನದಿಂದ ಹೊರಗಿಡಲಾಯಿತು. ಟ್ಯೂಟೂ ಹಾಕಿಸಿಕೊಂಡಿರುವ ಶ್ವಾನದ ವಿಡಿಯೊ ವೈರಲ್ ಆಗಿದೆ.

-

ಬೀಜಿಂಗ್: ಮನುಷ್ಯರು ಹಚ್ಚೆ ಹಾಕಿಸಿಕೊಳ್ಳುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳನ್ನು ನೋಡಿ ಬಹುತೇಕ ಮಂದಿ ಫಾಲೋ ಮಾಡುತ್ತಾರೆ. ಹಚ್ಚೆ ಹಾಕಿಸುವಾಗ ತುಂಬಾ ನೋವಾಗುತ್ತದೆ. ಕೆಲವರಿಗೆ ಜ್ವರ ಕೂಡ ಬರುತ್ತದೆ. ಇದೀಗ ಶ್ವಾನವೊಂದಕ್ಕೆ ಹಚ್ಚೆ ಹಾಕಿಸಿದ್ದಕ್ಕೆ ಅದರ ಮಾಲೀಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾನೆ. ಚೀನಾದ ಶಾಂಘೈನ ಪೆಟ್ ಫೇರ್ ಏಷ್ಯಾ (Pet Fair Asia)ದಲ್ಲಿ ಕೂದಲುರಹಿತ ನಾಯಿಯೊಂದನ್ನು ಪ್ರದರ್ಶಿಸಲಾಗಿದೆ. ಅದರ ಮಾಲೀಕ ಅರೆವಳಿಕೆ ಬಳಸದೆ ಹಚ್ಚೆ (Tattoo) ಹಾಕಿಸಿರುವುದಾಗಿ ಬಹಿರಂಗಪಡಿಸಿದ ನಂತರ ಭಾರಿ ಟೀಕೆ ವ್ಯಕ್ತವಾಯಿತು.
ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ವಿಡಿಯೊವನ್ನು ಮೊದಲು ಆಗಸ್ಟ್ 22ರಂದು ಏಷ್ಯಾದ ಅತಿದೊಡ್ಡ ಸಾಕುಪ್ರಾಣಿ ಉದ್ಯಮ ಕಾರ್ಯಕ್ರಮಗಳಲ್ಲಿ ಒಂದಾದ ಪೆಟ್ ಫೇರ್ ಏಷ್ಯಾದಲ್ಲಿ ಭಾಗವಹಿಸಿದವರು ಪೋಸ್ಟ್ ಮಾಡಿದ್ದರು. ವಿಡಿಯೊದಲ್ಲಿ ಮೆಕ್ಸಿಕನ್ ಕೂದಲುರಹಿತ ನಾಯಿಯ ವಯಸ್ಸು ಬಹಿರಂಗವಾಗಿಲ್ಲ. ಶ್ವಾನ ದೇಹವು ದೊಡ್ಡ, ವರ್ಣರಂಜಿತ ಡ್ರ್ಯಾಗನ್ ಟ್ಯಾಟೂಗಳಿಂದ ಮುಚ್ಚಲ್ಪಟ್ಟಿದೆ. ದಪ್ಪ ಚಿನ್ನದ ಬಣ್ಣದ ಸರಪಳಿ ಮತ್ತು ಕೈಗಡಿಯಾರದಿಂದ ಅಲಂಕರಿಸಲ್ಪಟ್ಟ ನಾಯಿಯನ್ನು ವಿಡಿಯೊದಲ್ಲಿ ಕಾಣಬಹುದು. ಅರೆವಳಿಕೆ ಬಳಸದೆ ಟ್ಯಾಟೂ ಹಾಕಿದ ಕಾರಣಕ್ಕಾಗಿ ನಾಯಿಯ ಮಾಲೀಕರನ್ನು ಸಾಕುಪ್ರಾಣಿ ಪ್ರದರ್ಶನದಿಂದ ತೆಗೆದುಹಾಕಲಾಯಿತು.
ವಿಡಿಯೊ ವೀಕ್ಷಿಸಿ:
📷📷 JUSTICE FOR THE DRAGON DOG! 📷📷
— Paul Mueller (@RealPaulMueller) September 1, 2025
On August 22, at Pet Fair Asia in Shanghai, a Mexican hairless dog with a real dragon tattoo was paraded around like a showpiece.
📷 The owner bragged that the tattoo was done without anaesthesia.
📷 Attendees said the dog looked distressed… pic.twitter.com/2mtVMbgRyp
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶ್ವಾನ ಮಾಲೀಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾದಲ್ಲಿ ಪ್ರಾಣಿಗಳು ಇನ್ನು ಮುಂದೆ ಬಳಲಬಾರದು. ಬೆಕ್ಕುಗಳು ಮತ್ತು ನಾಯಿಗಳನ್ನು ನಿಂದಿಸುವ ಮತ್ತು ಹಿಂಸಿಸಬಾರದು. ಚೀನಾದಲ್ಲಿರುವ ಎಲ್ಲ ಪ್ರಾಣಿಗಳನ್ನು ಜನರು ರಕ್ಷಿಸಬೇಕು. ಅಲ್ಲದೆ, ಚೀನಾ ಯಾವುದೇ ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸಬೇಕು. ಅಲ್ಲಿ ಎಷ್ಟು ಕ್ರೂರ ಪ್ರಾಣಿಗಳ ದೌರ್ಜನ್ಯ ಮಾಡುವವರು ವಾಸಿಸುತ್ತಾರೆ ಎಂಬ ವಿಚಾರವೇ ಬಹಳ ಭಯಾನಕವಾದುದು ಎಂದು ಬಳಕೆದಾರರೊಬ್ಬರು ಹೇಳಿದರು. ಇದು ಕ್ರೌರ್ಯವೇ ಸರಿ ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದರು.
ಪೆಟ್ ಫೇರ್ ಏಷ್ಯಾ
ಪೆಟ್ ಫೇರ್ ಏಷ್ಯಾ ವಾರ್ಷಿಕವಾಗಿ ಆಗಸ್ಟ್‌ನಲ್ಲಿ ಶಾಂಘೈ ನ್ಯೂ ಇಂಟರ್ನ್ಯಾಷನಲ್ ಎಕ್ಸ್‌ಪೋ ಸೆಂಟರ್ (SNIEC)ನಲ್ಲಿ ನಡೆಯುತ್ತದೆ. 1997ರಲ್ಲಿ ಪ್ರಾರಂಭವಾದಾಗಿನಿಂದ, ಈ ಪ್ರದರ್ಶನವು ಚೀನಾದ ಸಾಕುಪ್ರಾಣಿ ಮಾರುಕಟ್ಟೆಯ ಏರಿಕೆಗೆ ಸಾಕ್ಷಿಯಾಗಿದೆ ಹಾಗೂ ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ: Viral Video: ಮಲಯಾಳಂ ಮಾತನಾಡಿ ಗಮನ ಸೆಳೆದ ಪೋಲೆಂಡ್ ಮಹಿಳೆ