ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Election commission: 2 ಕಡೆ ಮತದಾರ ಗುರುತಿನ ಚೀಟಿ ಹೊಂದಿದ ಆರೋಪ; ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಚುನಾವಣಾ ಆಯೋಗದಿಂದ ಸಮನ್ಸ್

ಎರಡು ಮತದಾರ ಗುರುತಿನ ಚೀಟಿಗಳನ್ನು ಹೊಂದಿರುವ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಭಾರತದ ಚುನಾವಣಾ ಆಯೋಗವು ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಈ ಸಮನ್ಸ್ ಜಾರಿಯಾಗಿದೆ.

ಕೈ ನಾಯಕನಿಗೆ ಬಂತು ಎಲೆಕ್ಷನ್ ಕಮಿಷನ್‌ನಿಂದ ಸಮನ್ಸ್

ಪವನ್ ಖೇರಾ -

Profile Sushmitha Jain Sep 2, 2025 9:30 PM

ನವದೆಹಲಿ: ಎರಡು ಮತದಾರ ಗುರುತಿನ ಚೀಟಿಗಳನ್ನು ಹೊಂದಿರುವ ಆರೋಪದ ಮೇಲೆ ಕಾಂಗ್ರೆಸ್ ನಾಯಕ (Congress leader) ಪವನ್ ಖೇರಾ (Pawan Khera) ಅವರಿಗೆ ಭಾರತದ ಚುನಾವಣಾ ಆಯೋಗವು (Election Commission of India) ಸಮನ್ಸ್ ಜಾರಿ ಮಾಡಿದೆ. ಖೇರಾ ಅವರನ್ನು ಸೆಪ್ಟೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ದೆಹಲಿಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಖೇರಾ ಎರಡು ಸಕ್ರಿಯ ಮತದಾರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಈ ಸಮನ್ಸ್ ಜಾರಿಯಾಗಿದೆ.

ನವದೆಹಲಿ ಜಿಲ್ಲಾ ಚುನಾವಣಾ ಕಚೇರಿಯ ಸೂಚನೆಯಲ್ಲಿ, "ನೀವು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳ ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಇರುವುದು 1950ರ ಜನಪ್ರಾತಿನಿಧ್ಯ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ" ಎಂದು ತಿಳಿಸಲಾಗಿದೆ. "ಈ ಕಾಯ್ದೆಯಡಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು ಕಾರಣ ನೀಡಬೇಕು. ನಿಮ್ಮ ಉತ್ತರವು ಸೆಪ್ಟೆಂಬರ್ 8ರ ಬೆಳಗ್ಗೆ 11 ಗಂಟೆಯೊಳಗೆ ಈ ಕಚೇರಿಗೆ ತಲುಪಬೇಕು" ಎಂದು ಸೂಚನೆಯಲ್ಲಿ ಹೇಳಲಾಗಿದೆ.



ಈ ಸುದ್ದಿಯನ್ನು ಓದಿ: Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಖೇರಾ, ಇದು ಕಾಂಗ್ರೆಸ್ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಎತ್ತಿರುವ ಪ್ರಶ್ನೆಗಳ ಪರಿಣಾಮ ಎಂದಿದ್ದಾರೆ. "ನವದೆಹಲಿ ಕ್ಷೇತ್ರದಲ್ಲಿ ನನ್ನ ಹೆಸರಿನಲ್ಲಿ ಯಾರು ಮತ ಚಲಾಯಿಸುತ್ತಿದ್ದಾರೆ ಎಂಬುದರ CCTV ದೃಶ್ಯಾವಳಿಯನ್ನು ತೆಗೆಯಬೇಕು. ನನ್ನ ಹೆಸರನ್ನು ಪಟ್ಟಿಯಿಂದ ತೆಗೆಯಲು ಎಲ್ಲ ಕಾನೂನು ಕ್ರಮಗಳನ್ನು ಅನುಸರಿಸಿದ್ದರೂ ಆಯೋಗ ಏಕೆ ಇನ್ನೂ ತೆಗೆದಿಲ್ಲ?" ಎಂದು ಖೇರಾ ಪ್ರಶ್ನಿಸಿದ್ದಾರೆ.

"ಇದು ಕಾಂಗ್ರೆಸ್ ಒತ್ತಿಹೇಳುತ್ತಿರುವ ಸಮಸ್ಯೆಯೇ ಆಗಿದೆ. ಚುನಾವಣಾ ಪಟ್ಟಿಯು ಬಿಜೆಪಿ ನಾಯಕರಿಗೆ ಮತ್ತು ಆಯೋಗಕ್ಕೆ ಲಭ್ಯವಿದೆ. ಆದರೆ ಕಾಂಗ್ರೆಸ್‌ಗೆ ಈ ಪಟ್ಟಿಯನ್ನು ಒದಗಿಸಲಾಗುತ್ತಿಲ್ಲ" ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಪಾರದರ್ಶಕತೆಯ ಬಗ್ಗೆ ಚರ್ಚೆ ತೀವ್ರಯಾಗಿದೆ. ಖೇರಾ ಸೆಪ್ಟೆಂಬರ್ 8ರಂದು ಆಯೋಗದ ಮುಂದೆ ಹಾಜರಾಗಿ ತಮ್ಮ ಸ್ಪಷ್ಟೀಕರಣ ನೀಡಲಿದ್ದಾರೆ.