ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ನೀನೊಬ್ಬ ಭಯೋತ್ಪಾದಕ, ಇಲ್ಲಿಗೇಕೆ ಬಂದೆ”: ಅಮೆರಿಕದಲ್ಲಿ ಬಾಂಗ್ಲಾ ವಲಸಿಗರಿಂದ ಮೊಹಮ್ಮದ್ ಯೂನಸ್‌ಗೆ ಛೀಮಾರಿ

Muhammad Yunus: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮಾಜಿ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಸ್ವದೇಶಿ ವಲಸಿಗರಿಂದಲೇ ಟೀಕೆಗೆ ಗುರಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. “ನೀನೊಬ್ಬ ಭಯೋತ್ಪಾದಕ. ಬಾಂಗ್ಲಾದೇಶದಲ್ಲಿ ಜನರನ್ನು ಕೊಂದಿದ್ದೀಯ. ನೀನು ಇಲ್ಲಿಗೆ ಏಕೆ ಬಂದಿದ್ದೀಯ? ಹೇಳು, ನೀನು ಏಕೆ ಬಂದಿದ್ದೀಯ?” ಎಂದು ವ್ಯಕ್ತಿಯೊಬ್ಬ ಕೂಗಿದ್ದಾನೆ.

ಬಾಂಗ್ಲಾ ವಲಸಿಗರಿಂದ ಮೊಹಮ್ಮದ್ ಯೂನಸ್‌ಗೆ ಛೀಮಾರಿ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮಾಜಿ ಮುಖ್ಯಸ್ಥ ಮೊಹಮ್ಮದ್ ಯೂನಸ್ -

Priyanka P
Priyanka P Oct 13, 2026 8:26 PM

ವಾಷಿಂಗ್ಟನ್, ಅ.13: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮಾಜಿ ಮುಖ್ಯಸ್ಥ ಮೊಹಮ್ಮದ್ ಯೂನಸ್ (Muhammad Yunus) ಅವರು ಅಮೆರಿಕದಲ್ಲಿ ಸ್ವದೇಶಿ ವಲಸಿಗರಿಂದಲೇ ಟೀಕೆಗೆ ಗುರಿಯಾದ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶ (Bangladesh) ಮೂಲದ ವಲಸಿಗರ ಗುಂಪಿನಿಂದ ತೀವ್ರ ಪ್ರಶ್ನೆ ಮತ್ತು ಆರೋಪಗಳನ್ನು ಎದುರಿಸಿದರು. ಗುಂಪಿನ ಕೆಲವರು ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ನೂರಾರು ಜನರ ಹತ್ಯೆ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದ ಆರೋಪಗಳನ್ನು ಮಾಡಿದ್ದಾರೆ.

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ಯೂನಸ್ ಅವರನ್ನು ಪ್ರಶ್ನಿಸಿ, ಆರೋಪ ಮಾಡಿದ ಬಾಂಗ್ಲಾದೇಶ ವಲಸಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಾಂಗ್ಲಾದೇಶದ ಪ್ರಧಾನಿ ಅವರ ಮಾಹಿತಿ ಮತ್ತು ಸಂವಹನ ಸಲಹೆಗಾರ ಜಾಹೆದ್ ಉರ್ ರೆಹಮಾನ್ ತಿಳಿಸಿದ್ದಾರೆ.

ಯೂನಸ್ ಅವರು ಮುಖ್ಯ ಸಲಹೆಗಾರ ಹುದ್ದೆಯಿಂದ ಕೆಳಗಿಳಿದ ನಂತರ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲು. ಯೂನಸ್ ವಿರುದ್ಧ ಭ್ರಷ್ಟಾಚಾರ ತಡೆ ತನಿಖೆ ನಡೆಸಬೇಕೆಂಬ ಆಗ್ರಹಗಳೂ ಕೇಳಿಬಂದಿವೆ. “ನೀನೊಬ್ಬ ಭಯೋತ್ಪಾದಕ. ಬಾಂಗ್ಲಾದೇಶದಲ್ಲಿ ಜನರನ್ನು ಕೊಂದಿದ್ದೀಯ. ನೀನು ಇಲ್ಲಿಗೆ ಏಕೆ ಬಂದಿದ್ದೀಯ? ಹೇಳು, ನೀನು ಏಕೆ ಬಂದಿದ್ದೀಯ?” ಎಂದು ವ್ಯಕ್ತಿಯೊಬ್ಬ ಕೂಗಿದ್ದಾನೆ.

ಇಲ್ಲಿದೆ ವಿಡಿಯೊ:



ದೋಹಾದಿಂದ ಕತಾರ್ ಏರ್‌ವೇಸ್ ವಿಮಾನದಲ್ಲಿ ಯೂನಸ್ ಟರ್ಮಿನಲ್ 8 ಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ. ಮಾಜಿ ಮುಖ್ಯ ಸಲಹೆಗಾರ ಯೂನಸ್‌ರನ್ನು ವ್ಹೀಲ್‌ಚೇರ್‌ನಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯುವಾಗ ಜನರು ಅವರ ಮೇಲೆ ಕೂಗಿದ್ದಾರೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವರು, ಅವರನ್ನು ಹಿಂತಿರುಗಿ ಹೋಗುವಂತೆ ಒತ್ತಾಯಿಸಿದರು.

ಆಪರೇಷನ್ ಮುಕ್ತದಡಿ ಪ.ಬಂಗಾಳಕ್ಕೆ ರವಾನೆ: ಬೆಂಗ್ಳೂರಿನಿಂದ ಕೊನೆಗೂ 31 ಬಾಂಗ್ಲಾ ಪ್ರಜೆಗಳ ಗಡೀಪಾರು

ಸಾವಿರಾರು ಪೊಲೀಸ್ ಸಿಬ್ಬಂದಿಯ ಸಾವಿಗೆ ಯೂನಸ್ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು ಬಾಂಗ್ಲಾದೇಶದಲ್ಲಿ ಸುಮಾರು ಎರಡು ಲಕ್ಷ ಜನರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು. ಗಲಾಟೆ ನಡೆಯುತ್ತಿದ್ದ ವೇಳೆ ಯೂನಸ್ ಮತ್ತು ಅವರೊಂದಿಗೆ ಬಂದಿದ್ದ ಸಹಾಯಕಿ ಲಾಮಿಯಾ ಮೊರ್ಷೆದ್ ತಕ್ಷಣವೇ ವಿಮಾನ ನಿಲ್ದಾಣದೊಳಗೆ ತೆರಳಿದರು.

ಈ ದಾಳಿಯಲ್ಲಿ ಭಾಗಿಯಾಗಿರುವ ವಲಸಿಗರ ಗುರುತುಗಳು ದೃಢಪಟ್ಟಿಲ್ಲ. ಈ ಪ್ರತಿಭಟನಾಕಾರರನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್‌ನ ಬೆಂಬಲಿಗರು ಎಂದು ಮಾಧ್ಯಮವೊಂದು ಹೇಳಿದೆ.

ವಿಮಾನ ನಿಲ್ದಾಣದಲ್ಲಿ ನಡೆದ ವಾಗ್ವಾದದ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಮೊಹಮ್ಮದ್ ಯೂನಸ್‌ರನ್ನು, ನೀವೊಬ್ಬ ಭಯೋತ್ಪಾದಕ. ಸಾವಿರಾರು ಜನರನ್ನು ಕೊಂದಿದ್ದೀರಿ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಯೂನಸ್ ಅವರ ಆಡಳಿತಾವಧಿಯಲ್ಲಿ ನಡೆದಿವೆ ಎನ್ನಲಾದ ಹತ್ಯೆಗಳು, ರಾಜಕೀಯ ಹಿಂಸಾಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಆರೋಪಗಳ ಬಗ್ಗೆ ಜನರಲ್ಲಿ ಇರುವ ಆಕ್ರೋಶವನ್ನು ಈ ಹೇಳಿಕೆ ಪ್ರತಿಬಿಂಬಿಸುತ್ತದೆ.