ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಕತಾರ್ ಸನ್ಮಾನ

ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ಐಸಿಸಿಯ ‘ಅಶೋಕ ಹಾಲ್’ನಲ್ಲಿ ಆಯೋಜಿಸಲಾಗಿದ್ದ 101ನೇ ಆವೃತ್ತಿಯ ‘ವೆಡ್ನೆಸ್‌ಡೇ ಫಿಯೆಸ್ಟಾ – ಸಿಲ್ವರ್ ರೈಸ್’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಐಸಿಸಿ ಕತಾರ್ ವತಿಯಿಂದ ‘ಕರ್ನಾಟಕ ಸಂಘ ಕತಾರ್’ (ಕೆಎಸ್‌ಕ್ಯೂ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಕತಾರ್ ಸನ್ಮಾನ

-

Profile
Siddalinga Swamy Oct 13, 2026 2:56 PM

ದೋಹಾ: ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಕ್ರಿಯಾಶೀಲ ನಾಯಕತ್ವವನ್ನು ಗುರುತಿಸಿ, ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರವು (ಐಸಿಸಿ) ‘ಕರ್ನಾಟಕ ಸಂಘ ಕತಾರ್’ (ಕೆಎಸ್‌ಕ್ಯೂ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು (Subramanya Hebbagelu) ಅವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿತು. ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ಐಸಿಸಿಯ ‘ಅಶೋಕ ಹಾಲ್’ನಲ್ಲಿ ಆಯೋಜಿಸಲಾಗಿದ್ದ 101ನೇ ಆವೃತ್ತಿಯ ‘ವೆಡ್ನೆಸ್‌ಡೇ ಫಿಯೆಸ್ಟಾ – ಸಿಲ್ವರ್ ರೈಸ್’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ICC Qatar

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಹೆಡ್ ಆಫ್ ಚಾನ್ಸರಿ ಮತ್ತು ಕಾನ್ಸುಲರ್) ಡಾ. ವೈಭವ್ ಎ. ತಾಂಡಲೆ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಸಮುದಾಯದ ಮುಖಂಡರ ಸೇವೆಯನ್ನು ಶ್ಲಾಘಿಸುತ್ತಾ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಸಮಾಜಸೇವೆ ಮತ್ತು ಸಂಘಟನಾ ಕಾರ್ಯಗಳನ್ನು ಶ್ಲಾಘಿಸಿದರು.

Karnataka Sangha Qatar

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ರಾಯಭಾರ ಕಚೇರಿ, ಐಸಿಸಿ ಆಡಳಿತ ಮಂಡಳಿ ಹಾಗೂ ಕೆಎಸ್‌ಕ್ಯೂ ಕಾರ್ಯಕಾರಿ ಸಮಿತಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಐಸಿಸಿ ಹಣಕಾಸು ಮುಖ್ಯಸ್ಥ ಬಿಸ್ವಜಿತ್ ಬ್ಯಾನರ್ಜಿ ಸ್ವಾಗತಿಸಿದರು. ಸಂತೋಷ್ ಕುಲಕರ್ಣಿ ವಂದಿಸಿದರು.

ಕಾರ್ಯಕ್ರಮದಲ್ಲಿ ಐಸಿಸಿ ಸಲಹಾ ಮಂಡಳಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್, ಉಪಾಧ್ಯಕ್ಷ ಶಾಂತನು ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಕೆ. ಜೋಸೆಫ್, ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಭಾರತೀಯ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.